ETV Bharat / city

ಹೆಲಿಕಾಪ್ಟರ್​​ ಹತ್ತಿ ಆಗಸದಲ್ಲಿ ಹಾರದೆ ಕೆಳಗಿಳಿದ ಸಚಿವ ಸಿ.ಟಿ.ರವಿ... ಕಾರಣ?

ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಹೆಲಿರೈಡ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ.ರವಿ ಅವರಿಗೆ ಮುಜುಗರವಾದ ಪ್ರಸಂಗ ನಡೆಯಿತು.

embarrassed-to-tourism-minister-ct-ravi
author img

By

Published : Sep 28, 2019, 4:58 PM IST

ಮೈಸೂರು: ದಸರಾ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರು ನಗರದ ಸೌಂದರ್ಯವನ್ನು ಆಗಸದಿಂದ ಕಣ್ತುಂಬಿಕೊಳ್ಳಲು ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಸದವಕಾಶವನ್ನು ಪ್ರವಾಸೋದ್ಯಮ ಇಲಾಖೆ ಕಲ್ಪಿಸಿದೆ. ಆದರೆ, ಇಂದು ಆಯೋಜಿಸಿದ್ದ ಹೆಲಿರೈಡ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ.ರವಿ ಅವರಿಗೆ ಮುಜುಗರವಾದ ಪ್ರಸಂಗ ನಡೆಯಿತು.

ಪ್ರವಾಸೋದ್ಯಮ ಇಲಾಖೆಯೊಂದಿಗೆ ಹೆಲಿ‌ರೈಡ್ ಕಾರ್ಯಕ್ರಮವನ್ನು ಲಲಿತ್ ಮಹಲ್ ಹೆಲಿಪ್ಯಾಡ್​​ನಲ್ಲಿ‌ ಆಯೋಜಿಸಲಾಗಿತ್ತು. ಈ ವೇಳೆ ಸಿ.ಟಿ.ರವಿ ಬಾವುಟ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮೈಸೂರು ನೋಡಲು ಹೆಲಿಕಾಪ್ಟರ್​ ಬೆಲ್ಟ್ ಹಾಕಿ ಕುಳಿತರು.‌

ಸಚಿವ ಸಿ.ಟಿ.ರವಿಗೆ ಮುಜುಗರ

ಆದರೆ, ಸಚಿವರಿಗೆ ಸಿಂಗಲ್ ಇಂಜಿನ್ ಇರುವ ಈ ಹೆಲಿಕಾಪ್ಟರ್​ನಲ್ಲಿ ಹಾರಾಟಕ್ಕೆ ಅನುಮತಿ ಇಲ್ಲ ಎಂದು ಹೆಲಿಕಾಪ್ಟರ್ ಆಯೋಜಕರು ನಿರಾಕರಿಸಿದರು. ವಿಧಿಯಿಲ್ಲದೆ ಹೆಲಿಕಾಪ್ಟರ್​ನಿಂದ ಸಚಿವರು ಇಳಿದರು. ಈ ಸಂದರ್ಭದಲ್ಲಿ ಮುಜುಗರವಾದರೂ ಕೊನೆಗೆ ನಾನು ಹೋಗಲು ಸಿದ್ಧನಿದ್ದೇನೆ. ಆದರೆ, ಸಚಿವರು ಹಾರಾಟ ಮಾಡಲು ಅವಕಾಶ ಇರುವುದಿಲ್ಲ. ಆದ್ದರಿಂದ ನಿರಾಕರಿಸಲಾಗಿದೆ ಎಂದು ಜಾರಿಕೊಂಡರು.

Intro:ಮೈಸೂರು: ಪ್ರವಾಸೋದ್ಯಮ ಇಲಾಖೆಯಿಂದ ಆಯೋಚನೆ ಮಾಡಿರುವ ಹೆಲಿ ರೈಡ್ ಉದ್ಘಾಟನಾ ಕಾರ್ಯಕ್ರಮದಲ್ಲೇ ಸಚಿವ ಸಿ.ಟಿ.ರವಿಗೆ ಮುಜುಗರವಾದ ಪ್ರಸಂಗ ನಡೆಯಿತು.

Body:ದಸರಾ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಅನುಮತಿಯೊಂದಿಗೆ ಖಾಸಗಿ ವ್ಯಕ್ತಿಗಳು ಎರಡು ಹೆಲಿಕಾಪ್ಟರ್ ಮೂಲಕ ಹೆಲಿ‌ರೈಡ್ ಕಾರ್ಯಕ್ರಮವನ್ನು ಲಲಿತ್ ಮಹಲ್ ಹೆಲಿಪ್ಯಾಡ್ ನಲ್ಲಿ‌ ಆಯೋಜನೆ ಮಾಡಿದ್ದರು.‌ ಈ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಬಾವುಟ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತೆ ಹೆಲಿಕಾಪ್ಟರ್ ಮೂಲಕ ಮೈಸೂರು ನೋಡಲು ಹೆಲಿಕಾಪ್ಟರ್ ನಲ್ಲಿ ಬೆಲ್ಟ್ ಹಾಕಿ ಕುಳಿತರು.‌
ಈ ಸಂದರ್ಭದಲ್ಲಿ ಸಚಿವರಿಗೆ ಸಿಂಗಲ್ ಇಂಜಿನ್ ಇರುವ ಈ ಹೆಲಿಕಾಪ್ಟರ್ ನಲ್ಲಿ ಹಾರಾಟಕ್ಕೆ ಅನುಮತಿ ಇಲ್ಲ ಎಂದು ನಿರಾಕರಿಸಿದ ಖಾಸಗಿ ಹೆಲಿಕಾಪ್ಟರ್ ಆಯೋಜಕರ ಮಾತಿಗೆ ವಿಧಿಯಿಲ್ಲದೆ ಹೆಲಿಕಾಪ್ಟರ್ ನಿಂದ ಕೆಳಗೆ ಇಳಿದು ಈ ಮುಜುಗರವಾದ ಪ್ರಸಂಗವನ್ನು ತಳ್ಳಿಹಾಕಲು ಯತ್ನಿಸಿದರು.
ಕೊನೆಗೆ ನಾನು ಹೋಗಲು ರೆಡಿ ಇದ್ದೇನೆ. ಆದರೆ ತಾಂತ್ರಿಕ ಕಾರಣದಿಂದ ನಿರಾಕರಿಸಿಲಾಯಿತು ಎಂದು ಸಂಜಾಯಿಶಿ ನೀಡಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.