ಮೈಸೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿ ಎಸೆದಿರುವ ಘಟನೆ ಹುಣಸೂರು ತಾಲೂಕಿನ ಮಾಜಿ ಗುರುಪುರ ಗ್ರಾಮದಲ್ಲಿ ನಡೆದಿದೆ.
ನಾಗರಹೊಳೆ ಅರಣ್ಯ ವ್ಯಾಪ್ತಿಯ ಪ್ರದೇಶದಲ್ಲಿರುವ ಮಾಜಿ ಗುರುಪುರ ಗ್ರಾಮದ ರೈತ ರಾಘವೇಂದ್ರ ಎಂಬುವವರು ಆನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ರೈತ ರಾಘವೇಂದ್ರ ಗುರುವಾರ ಬೆಳಗ್ಗೆ ಜಮೀನಿಗೆ ತೆರಳುತ್ತಿದ್ದ ವೇಳೆ ಬಾಳೆ ತೋಟದಲ್ಲಿದ್ದ ಸಲಗ, ಏಕಾಏಕಿ ದಾಳಿ ಮಾಡಿದೆ.
ಇನ್ನು, ಕಾಡಾನೆಗಳ ಹಾವಳಿಯಿಂದ ಆಕ್ರೋಶಿತರಾದ ರೈತರು ಮತ್ತು ಗ್ರಾಮಸ್ಥರು, ಹುಣಸೂರು-ಹೆಚ್.ಡಿ.ಕೋಟೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಸಧ್ಯ ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ, ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.