ಮೈಸೂರು: ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳು ನಮ್ಮಲ್ಲಿ ಸಾಕಷ್ಟಿವೆ. ನಾವು ಖಚಿತವಾಗಿ ಆರೋಪಿಗಳನ್ನು ಪತ್ತೆಹಚ್ಚುತ್ತೇವೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.
ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಾಚಾರ ಪ್ರಕರಣದಲ್ಲಿ ಆಕೆ ಯಾರು? ಎಲ್ಲಿಯವಳು ಎಂಬುದು ಮುಖ್ಯವಲ್ಲ. ಈ ರೀತಿ ಘಟನೆಯಾಗಿದೆ. ಬೇರೆ ರೀತಿಯಿಂದ ಏನೇನು ಆಗಿದೆ ಎಂದು ಪತ್ತೆ ಮಾಡಿದ್ದೇವೆ ಎಂದು ಹೇಳಿದರು.
ಗೃಹ ಸಚಿವರು, ಮುಖ್ಯಮಂತ್ರಿಗಳು ನಮಗೆ ಸೂಚನೆ ನೀಡಿದ್ದಾರೆ. ಇಂತಹ ಘಟನೆ ನಡೆಯಬಾರದು, ಆದರೆ ನಡೆದಿದೆ. ಇದಕ್ಕಿಂತ ಹೆಚ್ಚು ಏನನ್ನು ಹೇಳಲು ಸಾಧ್ಯವಿಲ್ಲ. ಸುಳಿವು ಸಿಕ್ಕರೂ ಮಾಹಿತಿ ಬಹಿರಂಗ ಪಡಿಸುವಂತಿಲ್ಲ ಎಂದರು.
ಕ್ರೈಂ ಸೀನ್‌ನಿಂದ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ. ಘಟನಾ ಸ್ಥಳವನ್ನು ಗರುತಿಸಿಡಲಾಗಿದೆ. ಎಲ್ಲಿ ಆಗಿದೆ ಅಲ್ಲಿ ಏನೇನು ಕ್ರಮ ಕೈಗೊಳ್ಳಬೇಕೆಂದು ನಾವು ಕೂಡ ಹಲವು ಬಾರಿ ಭೇಟಿ ನೀಡಿದ್ದೇವೆ. ಯಾರಿಗೆ ಈ ರೀತಿ ಘಟನೆಯಾದರೂ ಅವರು ಶಾಕ್ ನಲ್ಲಿರುತ್ತಾರೆ. ಸಂತ್ರಸ್ತೆ ಹೇಳಿಕೆ ಬದಲು ಬೇರೆ ಏನೇನು ನಡೆದಿದೆ ಎಂದು ಮಾಹಿತಿ ಸಂಗ್ರಹಿಸಿ, ಅದರ ಆಧಾರದ ಮೇಲೆ ತನಿಖೆ ಆರಂಭವಾಗಿದೆ. ಅವರ ಮಾನಸಿಕ ಸ್ಥಿತಿ ಸರಿಯಾದ ನಂತರ ನಮಗೆ ಮಾಹಿತಿ ನೀಡುತ್ತಾರೆಂಬ ವಿಶ್ವಾಸ ಇದೆ ಎಂದರು.
ಓದಿ: ಮೈಸೂರು ಚಿನ್ನಾಭರಣ ಅಂಗಡಿ ದರೋಡೆ ಪ್ರಕರಣದಲ್ಲಿ 6 ಜನರ ಬಂಧನ : ಡಿಜಿಪಿ ಪ್ರವೀಣ್ ಸೂದ್