ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಇದೇ ಮೊದಲ ಬಾರಿಗೆ 'ಚಾರ್ಲಿ' ಎಂಬ ರಣಬೇಟೆಗಾರ ಎಂಟ್ರಿ ಕೊಟ್ಟಿದ್ದು ಅರಣ್ಯ ಸಿಬ್ಬಂದಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಚಾರ್ಲಿಗೆ ಇಂಡೋ - ಟಿಬೆಟಿಯನ್ ಬಾರ್ಡರ್ ಪೊಲೀಸರು(ಐಟಿಬಿಪಿ) ತರಬೇತಿ ಕೊಟ್ಟಿದ್ದಾರೆ. ಚಾರ್ಲಿ ನಾಯಿಗೆ ಟ್ರೈನಿಂಗ್ ಕೊಡುವಾಗ ನಾಗರಹೊಳೆಯ ಇಬ್ಬರು ಸಿಬ್ಬಂದಿ ಜೊತೆಯಲ್ಲಿದ್ದರು. ಇದೀಗ 'ಚಾರ್ಲಿ'ಯನ್ನು ಐಟಿಬಿಪಿ ಸಿಬ್ಬಂದಿಯು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ. ಕಳ್ಳಬೇಟೆಯಿಂದ ಅರಣ್ಯ ಸಿಬ್ಬಂದಿ ನಲುಗಿದ್ದರು. ಇನ್ನು ಮುಂದೆ ಅರಣ್ಯ ಇಲಾಖೆಗೆ ಚಾರ್ಲಿ ಬಲ ನೀಡಲಿದೆ.
ಇದನ್ನೂ ಓದಿ: ಒಮಿಕ್ರಾನ್ ಭೀತಿ.. ಮುಂಜಾಗ್ರತಾ ಕ್ರಮ, ಚಟುವಟಿಕೆ ನಿರ್ಬಂಧ ಕುರಿತು ಇಂದು ನಿರ್ಧಾರ- ಸಚಿವ ಸುಧಾಕರ್