ETV Bharat / city

Anti Conversion bill.. ಸದನದ ಜಂಟಿ ಸಮಿತಿ ಅಭಿಪ್ರಾಯ ಪಡೆದು ಮಂಡಿಸಬೇಕಿತ್ತು: ಎಂಎಲ್​​ಸಿ ವಿಶ್ವನಾಥ್ - ಮತಾಂತರ ನಿಷೇಧ ಕಾಯ್ದೆ ಜಾರಿ ಬಗ್ಗೆ ವಿಶ್ವನಾಥ್ ಪ್ರತಿಕ್ರಿಯೆ

ಮತಾಂತರ ನಿಷೇಧ ವಿಧೇಯಕವನ್ನು ಕಾನೂನು ಮಾಡುವ ಮುನ್ನ ಸದನದ ಜಂಟಿ ಸಮಿತಿ ನೇಮಿಸಿ ಅದರ ಅಭಿಪ್ರಾಯ ಪಡೆದು ಮಂಡನೆ ಮಾಡಬೇಕಿತ್ತು ಎಂದು ಎಂಎಲ್​​ಸಿ ಹೆಚ್. ವಿಶ್ವನಾಥ್ ಹೇಳಿದರು.

MLC H Viswanath Interview with 'ETV Bharath'
ಎಂಎಲ್​​ಸಿ ಹೆಚ್. ವಿಶ್ವನಾಥ್
author img

By

Published : Dec 23, 2021, 5:31 PM IST

ಮೈಸೂರು: ಮತಾಂತರ ನಿಷೇಧ ಕಾಯ್ದೆ ಮಂಡನೆ ಮಾಡುವ ಮುನ್ನ ಸದನದ ಜಂಟಿ ಸಮಿತಿ ರಚಿಸಿ, ಅಲ್ಲಿ ವಿಸ್ತೃತ ಚರ್ಚೆಯಾದ ನಂತರ ಕಾಯ್ದೆಯನ್ನ ಮಂಡನೆ ಮಾಡಬೇಕಿತ್ತು ಎಂದು ಬಿಜೆಪಿ ಎಂಎಲ್​​ಸಿ ಹೆಚ್. ವಿಶ್ವನಾಥ್ ಹೇಳಿದರು.

'ಈಟಿವಿ ಭಾರತ'ದೊಂದಿಗೆ ಎಂಎಲ್​​ಸಿ ಹೆಚ್. ವಿಶ್ವನಾಥ್ ಸಂದರ್ಶನ

'ಈಟಿವಿ ಭಾರತ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ಮಾಡದೇ, ಮಠಾಧೀಶರು, ಹಾಗೂ ಧಾರ್ಮಿಕ ಮುಖಂಡರ ಜತೆ ಚರ್ಚೆ ‌ಮಾಡದೇ ಕಾಯ್ದೆ ಮಂಡನೆ ಮಾಡಿರುವುದು ‌ಸರಿಯಲ್ಲ. ವಿಧೇಯಕವನ್ನ ಕಾನೂನು ಮಾಡುವ ಮುನ್ನ ಸದನದ ಜಂಟಿ ಸಮಿತಿ ನೇಮಿಸಿ ಅದರ ಅಭಿಪ್ರಾಯ ಪಡೆದು ಮಂಡನೆ ಮಾಡಬೇಕಿತ್ತು. ಆತುರಾತುರವಾಗಿ ಮಂಡನೆ ಮಾಡಿರುವುದು ‌ಸರಿಯಲ್ಲ ಎಂದರು.

ಕಾಂಗ್ರೆಸ್​​ನವರು ನಾಟಕವಾಡುತ್ತಿದ್ದಾರೆ. ಅವರು ಮತಾಂತರ ಕಾಯ್ದೆ ಮಂಡನೆ ಮಾಡುವಾಗ ಸದನದ ಹೊರಗೆ ಹರಟೆ ಹೊಡೆಯುತ್ತಿದ್ದು, ಕಾಯ್ದೆ ಮಂಡನೆಯಾದ ಮೇಲೆ ವೀರಾವೇಷದಿಂದ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನವರದ್ದು ಇಬ್ಬಂದಿ ತನ ಎಂದು ಟೀಕಿಸಿದರು.

ಮತಾಂತರ ನಿಷೇಧ ಕಾಯ್ದೆಗೆ ಕಾನೂನು ಬೆಂಬಲ ಸಿಗುವುದಿಲ್ಲ. ಸುಪ್ರೀಂಕೋರ್ಟ್​ಗೆ ಹೋದರೆ ಈ ಕೇಸ್ ನಿಲ್ಲುವುದಿಲ್ಲ, ಬಿದ್ದು ಹೋಗುತ್ತದೆ‌. ಈ ಕಾಯ್ದೆ ತಂದ ಬೇರೆ ಬೇರೆ ರಾಜ್ಯಗಳ ಕ್ರಮಕ್ಕೆ ಸುಪ್ರೀಂಕೋರ್ಟ್​ನಲ್ಲಿ ಸೋಲಾಗಿದೆ ಎಂದರು.

ಎಂಇಎಸ್ ಬ್ಯಾನ್ ಮಾಡಿ:

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ನಡೆಸುತ್ತಿದ್ದು, ಅವರ ವಿರುದ್ಧ ಕಾನೂನನ್ನ ಸರಿಯಾಗಿ ಪ್ರಯೋಗ ಮಾಡಬೇಕು. ಗಲಾಟೆಯಾದರೂ ಅಲ್ಲಿನ ಯಾವುದೇ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ. ಅವರಿಗೆ ಹೆದರಿಕೆಯೋ, ಅಥವಾ ವೋಟಿನ ಭಯವೋ, ಗೊತ್ತಾಗುತ್ತಿಲ್ಲ. ಕೂಡಲೇ ಎಂಇಎಸ್ ಬ್ಯಾನ್ ಮಾಡಬೇಕು. ಡಿ.31ಕ್ಕೆ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್​ಗೆ ಬೆಂಬಲ ನೀಡಬೇಕು ಎಂದು ವಿಶ್ವನಾಥ್ ಮನವಿ ಮಾಡಿದರು.

ಇನ್ನು ರಂಗಾಯಣ ನಿರ್ದೇಶಕರು ತಮ್ಮ ಸಿದ್ದಾಂತಗಳಿಗೆ ರಂಗಾಯಣವನ್ನ ಅಖಾಡ‌‌ ಮಾಡಿಕೊಳ್ಳಬೇಡಿ. ರಂಗಾಯಣ ಕಲೆ ಮತ್ತು ಸಂಸ್ಕೃತಿಯ ಪ್ರತಿಬಿಂಬ. ಇಲ್ಲಿ ತಮ್ಮ ವೈಯಕ್ತಿಕ ಸಿದ್ಧಾಂತಗಳನ್ನ ತರಬೇಡಿ ಎಂದು ಅವರು ಕಿವಿ ಮಾತು ಹೇಳಿದರು.

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ: ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.