ಮೈಸೂರು : ಈ ಹಿಂದೆ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಗೆ 60 ವರ್ಷವಾಗಿರುವುದರಿಂದ ವಿಶ್ರಾಂತಿ ನೀಡಲಾಗಿದೆ. ಹಾಗಾಗಿ ಅರ್ಜುನ ಹಸಿರು ಕಾನನದಲ್ಲಿ ಸ್ವಚ್ಛಂದವಾಗಿದ್ದಾನೆ.
ಇದೀಗ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಬಳ್ಳೆ ಶಿಬಿರದಲ್ಲಿರುವ ಮಾಜಿ ಕ್ಯಾಪ್ಟನ್ ಅರ್ಜುನ, ಕಾಡಿನ ಆಹಾರ ತಿನ್ನುತ್ತಾ ನಿಶ್ಚಿಂತೆಯಿಂದ ಸಮಯ ಕಳೆಯುತ್ತಿದ್ದಾನೆ.
60 ವರ್ಷದ ಪೂರೈಸಿದ ಆನೆಗಳು ಭಾರ ಹೊರುವ ಕೆಲಸ ಕೊಡಬಾರದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಹೀಗಾಗಿ, ಅರ್ಜುನ ಆನೆಯನ್ನು ಈ ಬಾರಿ ಮೈಸೂರು ದಸರಾಗೆ ಕರೆಸಿಕೊಳ್ಳುತ್ತಿಲ್ಲ.