ETV Bharat / city

ಅಂಬರೀಶ್​ ರಾಜಕೀಯದಲ್ಲಿದ್ದಾಗ ಅವರೆಲ್ಲಿ ಹೋಗಿದ್ರು?: ಸುಮಲತಾ ವಿರುದ್ಧ ಅನಿತಾ ಕಿಡಿ

ಅಂಬರೀಶ್​ ನಿಧನರಾದ ನಂತರ ಇವರಿಗೆ ರಾಜಕೀಯ ಆಸೆ ಬಂದಿದೆ ಎಂದು ಸುಮಲತಾ ವಿರುದ್ಧ ಶಾಸಕಿ ಅನಿತಾ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು

ಸುಮಲತಾ ವಿರುದ್ಧ ಶಾಸಕಿ ಅನಿತಾ ಕುಮಾರಸ್ವಾಮಿ ವಾಗ್ದಾಳಿ
author img

By

Published : Apr 11, 2019, 6:04 AM IST

ಮೈಸೂರು: ಅಂಬರೀಶ್ ಅವರು ರಾಜಕೀಯದಲ್ಲಿ ಸೇವೆ ಸಲ್ಲಿಸುವಾಗ ಈ ಪಕ್ಷೇತರ ಅಭ್ಯರ್ಥಿ ಎಲ್ಲಿ ಹೋಗಿದ್ರು? ಅಂಬರೀಶ್​ ನಿಧನರಾದ ನಂತರ ಇವರಿಗೆ ರಾಜಕೀಯ ಆಸೆ ಬಂದಿದೆ ಎಂದು ಸುಮಲತಾರ ಹೆಸರು ಹೇಳದೆ ಶಾಸಕಿ ಅನಿತಾ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ನಡೆದ ಮೈತ್ರಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿನಿಮಾ ಕ್ರೇಜ್ ಇರುವ ಯುವಕರು ಪಕ್ಷೇತರ ಅಭ್ಯರ್ಥಿ ಪರ ಘೋಷಣೆ ಕೂಗುತ್ತಿದ್ದಾರೆ. ಸಿನಿಮಾ ಹುಚ್ಚಿನಿಂದ ಹೀಗಾಡುತ್ತಿದ್ದಾರೆ ಅಷ್ಟೆ. ಸಿನಿಮಾ ಬೇರೆ, ರಾಜಕೀಯ ಬೇರೆ. ಮುಂದೊಂದು ದಿನ ಈ ಸತ್ಯ ಅವರಿಗೆ ಗೊತ್ತಾಗಲಿದೆ ಎಂದರು.

ಸುಮಲತಾ ವಿರುದ್ಧ ಶಾಸಕಿ ಅನಿತಾ ಕುಮಾರಸ್ವಾಮಿ ವಾಗ್ದಾಳಿ

ನನಗೆ 30 ವರ್ಷಗಳ ರಾಜಕೀಯ ಅನುಭವವಿದ್ದು, ಅನೇಕ ಚುನಾವಣೆಗಳನ್ನು ಎದುರಿಸಿದ್ದೇನೆ. ಆದರೆ, ಈ ರೀತಿಯ ರಾಜಕೀಯ ನೋಡಿಲ್ಲ. ಚುನಾವಣೆ ಆರೋಗ್ಯಕರವಾಗಿರಬೇಕು. ಆದರೆ ಪ್ರತಿ ಹಂತದಲ್ಲೂ ತಪ್ಪು ಕಂಡು ಹಿಡಿಯುವ, ಸುಳ್ಳು ಆರೋಪ ಮಾಡುವುದೇ ಅವರ ಕಾರ್ಯವಾಗಿದೆ. ನಿಖಿಲ್ ವಯಸ್ಸಿನಲ್ಲಿ ಚಿಕ್ಕವನಾದರೂ, ಅಭಿವೃದ್ಧಿಯ ಬಗ್ಗೆ ಬದ್ಧತೆ, ಪ್ರಬುದ್ಧತೆಯಿದೆ ಎಂದರು.

ನಿಖಿಲ್​ಗೆ ವಿಧೇಯತೆ, ವಿನಯತೆ, ಮಹಿಳೆಯರು, ಹಿರಿಯರ ಕಂಡರೆ ಗೌರವವಿದೆ. ಹಾಗಾಗಿ, ನಿಖಿಲ್​ ಸಂಸದನಾಗಲು ಅರ್ಹನಾಗಿದ್ದಾನೆ. ಮೈತ್ರಿ ಧರ್ಮವನ್ನು ಪಾಲಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಎಲ್ಲರೂ ಬೆಂಬಲಿಸಿ, ಗೆಲ್ಲಿಸಬೇಕಿದೆ. ಮಣ್ಣಿನ ಮಗ ನಿಖಿಲ್‌ಗೆ ಮಂಡ್ಯದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ನಿಖಿಲ್ ವಿರುದ್ಧ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಹಲವು ರೀತಿಯ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಅವರ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ , ನಟನೆಯಲ್ಲಿ ಅವರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ತನ್ನ ಇನ್ನೊಂದು ಮುಖ ನೋಡಿಲ್ಲ ಎಂದು ಹೇಳಿದ್ದಾರೆ. ಅದೇನೆಂದು ತೋರಿಸಲಿ ಎಂದು ಟೀಕಿಸಿದರು.

Intro:ಅನಿತಾ ಕುಮಾರಸ್ವಾಮಿ Body:ಮೈಸೂರು: ಅಂಬರೀಶ್ ಅವರು ರಾಜಕೀಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವಾಗ ಪಕ್ಷೇತರ ಅಭ್ಯರ್ಥಿ ಎಲ್ಲಿ ಹೋಗಿದ್ರು, ಅವರು ಸತ್ತ ನಂತರ ಇವರಿಗೆ ರಾಜಕೀಯ ಆಸೆ ಬಂದಿದೆ ಎಂದು ಸುಮಲತಾ ಅವರ ಹೆಸರು ಹೇಳದೆಯೇ ಶಾಸಕಿ ಅನಿತಾ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ವಿಜಯನಗರದಲ್ಲಿರುವ ಸಪ್ತಪದಿ ಕನ್ವೇಷನ್ ಹಾಲ್‌ನಲ್ಲಿ ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಮಂಡ್ಯ ಜಿಲ್ಲೆಗೆ ಸೇರಿದ ಮೈಸೂರು ನಿವಾಸಿಗಳ ಜೆಡಿಎಸ್ ಮತ್ತು ಮೈತ್ರಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದ್ರು.
ನಿಮಾ ಕ್ರೇಜ್ ಇರುವ ಯುವಕರು ಹಲವೆಡೆ ಅವರ ಪಕ್ಷೇತರ ಅಭ್ಯರ್ಥಿಯ ಪರವಾಗಿ ಘೋಷಣೆ ಕೂಗುತ್ತಿದ್ದಾರೆ. ಸಿನಿಮಾ ಹುಚ್ಚಿನಿಂದ ಹೀಗಾಡುತ್ತಿದ್ದಾರೆ. ಸಿನೆಮಾನೇ ಬೇರೆ, ರಾಜಕೀಯ ಬೇರೆ ಮುಂದೊಂದು ದಿನ ಅದು ಗೊತ್ತಾಗಲಿದೆ ಎಂದು ಸವಾಲು ಹಾಕಿದ್ದಾರೆ.
೩೦ ವರ್ಷದ ರಾಜಕೀಯ ಅನುಭವವಿದ್ದು, ಅನೇಕ ಚುನಾವಣೆಗಳನ್ನು ಎದುರಿಸಿದ್ದೇನೆ. ಆದರೆ, ಈ ರೀತಿಯ ರಾಜಕೀಯ ನೋಡಿಲ್ಲ. ಆರೋಗ್ಯಕರ ಚುನಾವಣೆಯಾಗಬೇಕು ಆದರೆ ಪ್ರತಿ ಹಂತದಲ್ಲೂ ತಪ್ಪು ಕಂಡು ಹಿಡಿಯುವ,ಸುಳ್ಳು ಆರೋಪ ಮಾಡುವುದೇ ಅವರ ಕಾರ್ಯ ಎನ್ನುವಂತ್ತಾಗಿದೆ. ನಿಖಿಲ್ ವಯಸ್ಸಿನಲ್ಲಿ ಚಿಕ್ಕವನಾದರೂ, ಅಭಿವೃದ್ಧಿಯ ಬಗ್ಗೆ ಬದ್ಧತೆ, ಪ್ರಬುದ್ಧತೆಯಿದೆ ಎಂದರು.
ನಿಖಿಲ್ ಚಿಕ್ಕವನು ಎಂದು ಅನೇಕರು ಟೀಕಿಸುತ್ತಿದ್ದು, ಅವನಿಗೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅರಿವಿದೆ. ವಿಧೇಯತೆ, ವಿನಯತೆ, ಮಹಿಳೆಯರು, ಹಿರಿಯರ ಕಂಡರೆ ಗೌರವವಿದೆ. ಹಾಗಾಗಿ, ಸಂಸದನಾಗಲು ಅರ್ಹನಾಗಿದ್ದು,ಮೈತ್ರಿ ಧರ್ಮವನ್ನು ಎಲ್ಲೇಡೆ ಪಾಲಿಸಬೇಕಿದ್ದು, ಕಾಂಗ್ರೆಸ್,ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಎಲ್ಲರೂ ಬೆಂಬಲಿಸಿ, ಗೆಲ್ಲಿಸುವುದು ಅಗತ್ಯವಾಗಿದೆ. ಮತ್ತೊಮ್ಮೆ ಮಣ್ಣಿನ ಮಗ ನಿಖಿಲ್‌ಗೆ ಮಂಡ್ಯದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುವುದು ಅಗತ್ಯ ಎಂದು ಮನವಿ ಮಾಡಿದರು.
ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ನಿಖಿಲ್ ವಿರುದ್ಧವಾಗಿ ಹಲವು ರೀತಿಯ ಕಾರ್ಯತಂತ್ರಗಳನ್ನು ಮಾಡುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಯ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ. ಅವರು ಪಂಚಾತಾರಾ ನಟಿಯಾಗಿ ನಟಿಸಿದ್ದು, ಅವರನ್ನು ನಟನೆಯಲ್ಲಿ ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಟೀಕಿಸಿದರು. ನನ್ನ ಇನ್ನೊಂದು ಮುಖ ನೋಡಿಲ್ಲ ಎಂದು ಹೇಳಿಕೆ ನೀಡಿದ್ದು, ಅದನ್ನು ಜನರಿಗೆ ತೋರಿಸಲಿ ಎಂದು ಕೇಳಿಕೊಳ್ಳುತ್ತಿನಿ ಎಂದರು.Conclusion:ಅನಿತಾ ಕುಮಾರಸ್ವಾಮಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.