ಮೈಸೂರು: ಸಂಬಂಧಿಕರಿಲ್ಲದೇ ಅನಾಥವಾಗಿ ಬಿದ್ದಿದ್ದ ವ್ಯಕ್ತಿಯ ಮೃತದೇಹಕ್ಕೆ ಆ್ಯಂಬುಲೆನ್ಸ್ ಸಿಬ್ಬಂದಿಯೇ ಅಂತ್ಯಕ್ರಿಯೆ ನೆರವೇರಿಸಿದರು.
ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಕೊಡಗಹಳ್ಳಿ ಗ್ರಾಮದ ಮಹಾದೇವಪ್ಪ ಅನಾರೋಗ್ಯದಿಂದ ಮೃತಪಟ್ಟಿದ್ದರು. ಕೊರೊನಾ ಭಯದಿಂದ ಯಾರೊಬ್ಬರೂ ಅವರ ಮೃತದೇಹದ ಬಳಿ ಸುಳಿದಿರಲಿಲ್ಲ. ಮಹಾದೇವಪ್ಪ ಪತ್ನಿ ಮಂಗಳಮ್ಮ ಶವದ ಮುಂದೆ ಕುಳಿತು ಕಣ್ಣೀರು ಹಾಕುತ್ತಿದ್ದರು.
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರಗೊಂಡ ಪರಿಣಾಮ, ಸೆಂಟ್ ಮೇರಿಸ್ ಆ್ಯಂಬುಲೆನ್ಸ್ ಸಿಬ್ಬಂದಿ ಸಂದೀಪ್ ನೆರವಿಗೆ ಧಾವಿಸಿದ್ದಾರೆ. ಇವರು ತಮ್ಮ ಸ್ವಂತ ಖರ್ಚಿನಲ್ಲಿ ಮೈಸೂರಿನ ಸ್ಮಶಾನದಲ್ಲಿ ಮಹಾದೇವಪ್ಪ ಅವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿ ಅನಾಥ ಶವವಾಗಿ ಬಿದ್ದ ವ್ಯಕ್ತಿ: ಹತ್ತಿರಕ್ಕೂ ಸುಳಿಯದ ಜನ.. ಮನಕಲಕುವಂತಿದೆ ದೃಶ್ಯ