ETV Bharat / city

20 ಸಾವಿರ ಲಂಚ ಪಡೆಯುತ್ತಿದ್ದ FDA ಮೇಲೆ ಎಸಿಬಿ ದಾಳಿ - ಮೈಸೂರು ತಾಪಂ ಎಫ್​ಡಿಎ ಮೇಲೆ ಎಸಿಬಿ ದಾಳಿ

ಲಂಚ ಪಡೆಯುತ್ತಿದ್ದ ತಾಪಂ ಎಫ್​ಡಿಎ ಮೇಲೆ ಎಸಿಬಿ ದಾಳಿ (ACB Raid) ಮಾಡಿದೆ.

FDA ಮೇಲೆ ಎಸಿಬಿ ಬಲೆಗೆ
FDA ಮೇಲೆ ಎಸಿಬಿ ಬಲೆಗೆ
author img

By

Published : Nov 19, 2021, 9:45 PM IST

ಮೈಸೂರು: ಕಾಮಗಾರಿ ಬಿಲ್ ಮಂಜೂರಾತಿಗೆ ಗುತ್ತಿಗೆದಾರನಿಂದ 20 ಸಾವಿರ ರೂ. ಲಂಚ (ACB Raid) ಪಡೆಯುವಾಗ ಮೈಸೂರು ತಾ.ಪಂ ಸಿಬ್ಬಂದಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ತಾಪಂ ಪ್ರಥಮ ದರ್ಜೆ ಸಹಾಯಕ ನಾಗರಾಜು ಎಸಿಬಿ (ACB) ಬಲೆಗೆ ಬಿದ್ದವರು. ಮೈಸೂರಿನ ಬೆಲವತ್ತ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕಟ್ಟಡದ ದುರಸ್ತಿ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರು ಎಫ್‌ಡಿಎ ನಾಗರಾಜ್ ಅವರನ್ನು ಅ.22 ಹಾಗೂ 25ರಂದು ಭೇಟಿಯಾಗಿ ಕಾಮಗಾರಿ ಬಿಲ್ ಮಂಜೂರಾತಿ ಬಗ್ಗೆ ವಿಚಾರಿಸಿದ್ದರು.

ಆ ವೇಳೆ ನಾಗರಾಜು 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಗುತ್ತಿಗೆದಾರ ಅ.26ರಂದು ಎಸಿಬಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಎಸಿಬಿ ಪೊಲೀಸರು, ತಾಪಂ ಕಚೇರಿಯಲ್ಲೇ ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಇಂದು ದಾಳಿ ನಡೆಸಿ, ಪ್ರಥಮ ದರ್ಜೆ ಸಹಾಯಕನನ್ನು ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.