ಮೈಸೂರು: ಬ್ರೈನ್ ಟ್ಯೂಮರ್ನಿಂದ ಬಳಲುತ್ತಿರುವ ಮಗಳ ಪ್ರಾಣ ಉಳಿಸಿಕೊಳ್ಳಲು ಆದಿವಾಸಿ ಬಡ ಕುಟುಂಬವೊಂದು ಸಹಾಯಹಸ್ತಕ್ಕಾಗಿ ಬೇಡಿಕೊಂಡಿದೆ. ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಈ ಕುಟುಂಬ ವಾಸವಿದೆ. ಆಟವಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದ 8 ವರ್ಷದ ಬಾಲಕಿ ಒಂದೂವರೆ ತಿಂಗಳಾದರೂ ಎದ್ದು ಕುಳಿತಿಲ್ಲ. ತಲೆಗೆ ಗಂಭೀರ ಸ್ವರೂಪದ ಪೆಟ್ಟುಬಿದ್ದು ಕ್ರಮೇಣ ಬ್ರೈನ್ ಟ್ಯೂಮರ್ ಸುಳಿಗೆ ಸಿಲುಕಿದ ಬಾಲಕಿಯನ್ನು ಉಳಿಸಿಕೊಳ್ಳಲು ಪೋಷಕರು ಹರಸಾಹಸ ಪಡುತ್ತಿದ್ದಾರೆ.
ಬ್ರೈನ್ ಟ್ಯೂಮರ್ನಿಂದ ಬಳಲುತ್ತಿರುವ ಮಗುವಿನ ಹೆಸರು ರಚಿತಾ. ತಂದೆ,ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರಿಗೆ ಮಗುವಿನ ಚಿಕಿತ್ಸೆ ಮರೀಚಿಕೆಯಂತಾಗಿದೆ. ಈಗಾಗಲೇ ಕೆಲವು ದಾನಿಗಳು ನೀಡಿದ ಸಹಾಯದಿಂದ ಕೈಲಾದಷ್ಟು ಚಿಕಿತ್ಸೆ ಕೊಡಿಸಿದ್ದಾರೆ.
ಆದರೆ ಮಗಳು ಸಹಜ ಸ್ಥಿತಿಗೆ ಮರಳುತ್ತಿಲ್ಲ. ಬದುಕಿರುವ ಶವದಂತೆ ದಿನ ದೂಡುತ್ತಿರುವ ಬಾಲಕಿಯನ್ನು ಇದೀಗ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಶ್ಯ ಚಿಕಿತ್ಸೆಗಾಗಿ ಸಾಕಷ್ಟು ಆರ್ಥಿಕ ಸಮಸ್ಯೆ ಎದುರಾಗಿದೆ. ಹಾಗಾಗಿ, ಮಗುವನ್ನು ಉಳಿಸಿಕೊಳ್ಳಲು ಕುಟುಂಬ ದಾನಿಗಳ ಆರ್ಥಿಕ ಸಹಾಯವನ್ನು ನಿರೀಕ್ಷಿಸುತ್ತಿದೆ. ಸಹಾಯ ನೀಡುವವರು ಬಾಲಕಿಯ ತಾಯಿ ಸುಚಿತ್ರ ಅವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ +91-9019252281 ಸಂಪರ್ಕಿಸಬಹುದು.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ನಗರದಲ್ಲಿ ಬಿಗಿ ಭದ್ರತೆ, ಪೊಲೀಸ್ ಪಥ ಸಂಚಲನ