ETV Bharat / city

ಮುಡಾದ 300 ಸೈಟುಗಳ ಇ-ಹರಾಜು ಪ್ರಕ್ರಿಯೆ ಆರಂಭ: ಇಲ್ಲಿದೆ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ - ಮೈಸೂರು ಮುಡಾ ಸುದ್ದಿ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 300 ಸೈಟುಗಳ ಹರಾಜು ಪ್ರಕ್ರಿಯೆ ಆಗಸ್ಟ್ 13 ರಿಂದ 20ರವರೆಗೆ ನಡೆಯಲಿದೆ. ನಿವೇಶನಗಳನ್ನು ಯಾರು ಬೇಕಾದರೂ ಖರೀದಿಸಲು ಅವಕಾಶ ಇದೆ.

Mysore Urban Development Authority
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
author img

By

Published : Jul 28, 2020, 3:56 PM IST

ಮೈಸೂರು: ಸರ್ಕಾರದ ನಿರ್ದೇಶನದಂತೆ ಸಂಪನ್ಮೂಲ ಕ್ರೋಢೀಕರಣದ ಉದ್ದೇಶದಿಂದ ಇ-ಹರಾಜು ಮೂಲಕ ಮೊದಲ ಬಾರಿಗೆ 300 ಸೈಟುಗಳ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಈ ಹರಾಜು ಪ್ರಕ್ರಿಯೆ ಹೇಗೆ ನಡೆಯುತ್ತದೆ? ಅದರ ಮಾನದಂಡಗಳು ಹೇಗಿರುತ್ತವೆ? ಎಂಬ ಹಲವು ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ.

ಕೊರೊನಾ ಹರಡಿದ ನಂತರ ರಾಜ್ಯ ಸರ್ಕಾರಕ್ಕೆ ಆದಾಯ ಮೂಲಗಳಿಂದ ಬರುವ ತೆರಿಗೆ ಇಳಿಮುಖವಾಗಿದೆ. ಜೊತೆಗೆ ಹಲವು ವರ್ಷಗಳಿಂದ ಸೈಟುಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವ್ಯಾಪ್ತಿಯಲ್ಲೇ ಉಳಿಕೊಂಡಿದೆ. ಹಾಗಾಗಿ ಈ ನಿವೇಶನಗಳನ್ನು ಪ್ರೀಮಿಯಂ ನಿವೇಶಗಳೆಂದು ಕರೆಯಲಾಗುತ್ತಿದೆ.

ಮೂಲೆ ನಿವೇಶನ, ಮಧ್ಯಂತರ ನಿವೇಶನ ಮತ್ತು ವಾಣಿಜ್ಯಕ್ಕೆ ಬಳಕೆಯಾಗುವ ನಿವೇಶನಗಳು ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಹರಾಜುದಾರರು ನೇರವಾಗಿ ಬಿಡ್ ಮಾಡಿ ಖರೀದಿಸಬಹುದು. 80*60, 50*30 ಅಡಿ ನಿವೇಶನಗಳು ರಸ್ತೆಗಳ ಪಕ್ಕದಲ್ಲಿವೆ. ಈ ನಿವೇಶನಗಳಿಗೆ ಆಗಸ್ಟ್ 13 ರಿಂದ 20ರವರೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಮೂಲೆ ನಿವೇಶನ ಹಾಗೂ ಕಮರ್ಶಿಯಲ್ ಸೈಟ್​​​ಗಳಿಗೆ ಬಿಡ್ ಮಾಡಬೇಕಾಗುತ್ತದೆ.

ಹರಾಜು ಪ್ರಕ್ರಿಯೆ ಕುರಿತು ಹೆಲ್ಪ್ ಡೆಸ್ಕ್:

ನಿವೇಶನಗಳ ಹರಾಜು ಪ್ರಕ್ರಿಯೆ ಬಗ್ಗೆ ಎಷ್ಟೋ ಜನರಿಗೆ ಮಾಹಿತಿ ಇರುವುದಿಲ್ಲ. ಸ್ವಲ್ಪ ಜನರಿಗೆ ಮಾಹಿತಿ ಇದ್ದರೂ ಹರಾಜು ಪ್ರಕ್ರಿಯೆ ತಿಳಿದಿರುವುದಿಲ್ಲ. ಹಾಗಾಗಿ ಇ-ಹರಾಜು ಬಗ್ಗೆ ಮಾಹಿತಿ ನೀಡಲು ರೇಡಿಯೋ ಹಾಗೂ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟ ಮಾಡಲಾಗುತ್ತದೆ. ಹರಾಜು ಪ್ರಕ್ರಿಯೆಗೆ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ತಿಳಿಸಿಕೊಡಉ ಮುಡಾ ಕಚೇರಿಯಲ್ಲಿ ಹೆಲ್ಪ್ ಡೆಸ್ಕ್ (ಸಹಾಯವಾಣಿ) ಇರುತ್ತದೆ. ಅಲ್ಲಿ ಯಾವುದೇ ಹರಾಜಿನ ಪ್ರಕ್ರಿಯೆ ಕುರಿತು ತಿಳಿದುಕೊಳ್ಳಬಹುದಾಗಿದೆ. ಹೆಲ್ಪ್ ಡೆಸ್ಕ್ ಅವರಿಗೆ ಮಾಹಿತಿ ಹಾಗೂ ಡಿಡಿ ನೀಡಿದರೆ ಅರ್ಜಿ ನೋಂದಾಯಿಸಿಕೊಡುತ್ತಾರೆ.

ಇ-ಹರಾಜು ಪ್ರಕ್ರಿಯೆಯ ಮಾನದಂಡಗಳೇನು?

ಮುಡಾ ವೆಬ್​​ಸೈಟ್​​ನಲ್ಲಿ 'ಇ-ಪ್ರೋಕ್ಯೂರ್' ಪ್ರವೇಶದಲ್ಲಿ ಬರುವ ಅರ್ಜಿಯನ್ನು ಭರ್ತಿ ಮಾಡಿ, ನಂತರ ಐಸಿಐಸಿಐ ಬ್ಯಾಂಕ್​​ನಲ್ಲಿ ₹1,500 ವೆಚ್ಚದ ಡಿಡಿ ಶುಲ್ಕ ಪಾವತಿಸಿ‌‌‌ ನೋಂದಣಿ ಮಾಡಿಕೊಳ್ಳಬೇಕು. ಖರೀದಿದಾರರು ತಮ್ಮ ಹೆಸರಿನಲ್ಲಿ ಇಷ್ಟವಿಲ್ಲದಿದ್ದಲ್ಲಿ ಬೇರೆ ಹೆಸರಿನಲ್ಲೂ ನೋಂದಾಯಿಸಿಕೊಳ್ಳಬಹುದು. ಖರೀದಿಗೆ ಪ್ರಾಥಮಿಕ ಮೌಲ್ಯ ₹1 ಕೋಟಿ ಇದ್ದರೆ ₹1ಲಕ್ಷ ಇಎಂಡಿ, ₹1 ಕೋಟಿಗಿಂತಲೂ ಅಧಿಕವಾಗಿದ್ದರೆ ₹3 ಲಕ್ಷ ಇಎಂಡಿಯನ್ನು ಪಾವತಿಸಬೇಕಾಗುತ್ತದೆ. ನಂತರ ಅವರು ಹರಾಜು ಕೂಗಲು ಅರ್ಹರಾಗಿರುತ್ತಾರೆ.

ಬೇರೆ ದೇಶದಲ್ಲಿರುವವರಿಗೂ ಅವಕಾಶ:

ನಿವೇಶನಗಳ‌ ಖರೀದಿಗೆ ಮುಡಾ ವೆಬ್​​​ಸೈಟ್​​​​ನ‌ ಇ-ಹರಾಜಿನಲ್ಲಿ ನಿವೇಶನಗಳ ನಕ್ಷೆ ಸಮೇತ ಮಾಹಿತಿ ನೀಡಲಾಗಿದೆ. ಎನ್​​ಆರ್​​ಐಗಳು ಹಾಗೂ ಹೊರ ರಾಜ್ಯದವರು ಇ-ಆಕ್ಷನ್ ಮೂಲಕ ಹರಾಜು ಕೂಗಬಹುದು. ಪ್ರಮುಖವಾಗಿ ಅವರು ಭಾರತೀಯ ಪ್ರಜೆಯಾಗಿದ್ದು, ಯಾವುದಾದರೂ ಭಾರತೀಯ ಸಂಘ ಸಂಸ್ಥೆಯಲ್ಲಿ ನೋಂದಣಿಯಾಗಿರಬೇಕು.

ಹಣ ಪಾವತಿ ಪ್ರಕ್ರಿಯೆ:

ಹರಾಜಿನಲ್ಲಿ ಯಾರ ಬಿಡ್ ಹೆಚ್ಚಿರುತ್ತದೋ ಅವರು 72 ಗಂಟೆಗಳ ಅವಧಿಯಲ್ಲಿ ಶೇ.25ರಷ್ಟು ಹಣ ಪಾವತಿಸಬೇಕು. ಬಾಕಿ ಹಣವನ್ನು ಬಡ್ಡಿರಹಿತವಾಗಿ ಪಾವತಿಸಲು 45 ದಿನಗಳ ಕಾಲಾವಕಾಶ ನೀಡಲಾಗುವುದು. ಅಷ್ಟರಲ್ಲಿ ಸಾಧ್ಯವಾಗದಿದ್ದರೆ ಶೇ.18ರಷ್ಟು ಬಡ್ಡಿಯೊಂದಿಗೆ ಹೆಚ್ಚುವರಿಯಾಗಿ 45 ದಿನಗಳ ನಂತರ ಶೇ.21ರಷ್ಟು ಬಡ್ಡಿಯೊಂದಿಗೆ ಪಾವತಿಸಲು 30 ದಿನ ಅವಕಾಶವಿರುತ್ತದೆ.

ಸಂಪನ್ಮೂಲ ಕ್ರೋಡೀಕರಣ ಮಾಡಬೇಕು ಎನ್ನುವ ಉದ್ದೇಶದಿಂದ ಈ ಪ್ರಕ್ರಿಯೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ನಿರ್ದೇಶಿಸಿದೆ. ರಾಜ್ಯದ ಎಲ್ಲಾ ಪ್ರಾಧಿಕಾರಗಳಲ್ಲೂ ಈ ಪ್ರಕ್ರಿಯೆ ಪ್ರಾರಂಭವಾಗಿದೆ. ಹಾಗೂ ನಿವೇಶನಗಳನ್ನು ಯಾರು ಬೇಕಾದರೂ ಖರೀದಿಸಬಹುದು. ಹಿಂದೆ ಸಾಮಾನ್ಯ ನಿವೇಶನ ಖರೀದಿಸಿದವರು 10 ವರ್ಷಗಳವರೆಗೆ ಯಾರಿಗೂ ಮಾರಾಟ ಮಾಡುವಂತಿರಲ್ಲಿಲ್ಲ.

ಅಲ್ಲದೆ 10 ವರ್ಷದ ನಂತರ ಮನೆ ಕಟ್ಟಬೇಕಾದರೂ, ದಂಡ ಪಾವತಿಸಿಕೊಳ್ಳಬೇಕಾಗಿತ್ತು. ಈಗ ಇ-ಹರಾಜು ನಿವೇಶನಗಳಿಗೆ ಈ ಷರತ್ತು ಅನ್ವಯಿಸುವುದಿಲ್ಲ ಮತ್ತು ನಿವೇಶಗಳಿರುವ ಬಡಾವಣೆಗಳು ವಿಜಯನಗರ, ದಟ್ಟಗಳ್ಳಿ, ಸರಸ್ವತಿಪುರಂ, ಶಾಂತವೇರಿ ಗೋಪಾಲಗೌಡ ನಗರ, ಲಾಲ್ ಬಹಾದ್ದೂರ್ ಶಾಸ್ತ್ರಿ ನಗರ, ಆರ್.ಟಿ.ನಗರ, ಶ್ರೀರಾಂಪುರ, ವಸಂತನಗರಗಳಲ್ಲಿ ನಿವೇಶನವಿರುವ ಬಡಾವಣೆಗಳು ಇವೆ ಎಂದು ಮುಡಾ ಆಯುಕ್ತ ಡಾ. ಡಿ.ಬಿ.ನಟೇಶ್ ಅವರು ಈಟಿವಿ ಭಾರತ್​​ಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.