ಮೈಸೂರು : ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ಮೈಸೂರಿನಲ್ಲಿ ಶೇ.30ರಷ್ಟು ಸಾರಿಗೆ ಬಸ್ಗಳು ಸಂಚಾರ ಮಾಡಲಿವೆ ಎಂದು ಗ್ರಾಮಾಂತರ ಸಾರಿಗೆ ಸಂಚಲನಾಧಿಕಾರಿ ಹೇಮಂತ್ ಕುಮಾರ್ ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸೂಚಿಸಿದ ಕೋವಿಡ್ ನಿಯಮಗಳನ್ನು ಪಾಲಿಸಿ, ಬಸ್ ಸಂಚಾರ ಆರಂಭಿಸಲಾಗುವುದು.
ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ 650 ಬಸ್ಗಳಿವೆ. ಇದರಲ್ಲಿ ಶೇ.30ರಷ್ಟು ಬಸ್ಗಳು ಸಂಚಾರ ಮಾಡಲಿವೆ. ಮೊದಲ ಹಂತದಲ್ಲಿ ಬೆಂಗಳೂರು, ಮಡಿಕೇರಿ, ಚಾಮರಾಜನಗರ, ಹಾಸನ ಜಿಲ್ಲೆಗಳಿಗೆ ಸಂಚಾರ ಮಾಡಲಿವೆ. ಅಂತಾರಾಜ್ಯಕ್ಕೆ ಬಸ್ ಸಂಚಾರ ಸದ್ಯಕ್ಕೆ ಇಲ್ಲ ಎಂದರು.
ಗ್ರಾಮಾಂತರ ಬಸ್ ಸಂಚಾರ ಎರಡು ತಿಂಗಳಿನಿಂದ ನಿಂತ ಹಿನ್ನೆಲೆ ಕೋಟ್ಯಂತರ ರೂ. ನಷ್ಟವಾಗಿದೆ. ಕೋವಿಡ್ ಲಸಿಕೆಯ ಎರಡು ಡೋಸ್ಗಳನ್ನು ಪಡೆದ ಚಾಲಕರು ಹಾಗೂ ನಿರ್ವಾಹಕರಿಗೆ ಕರ್ತವ್ಯಕ್ಕೆ ಹಾಜರಾಗಲು ಮೊದಲ ಆದ್ಯತೆ ನೀಡಲಾಗುವುದು. ಕೊರೊನಾ ಮೂರನೇ ಅಲೆಗೆ ಸಂಬಂಧಿಸಿದಂತೆ ಮಕ್ಕಳ ನಿಯಂತ್ರಣಕ್ಕೆ ಯಾವುದೇ ಗೈಡ್ಲೈನ್ಸ್ ಇನ್ನೂ ಬಂದಿಲ್ಲ ಎಂದು ತಿಳಿಸಿದರು.