ETV Bharat / city

NEET 2021: ಪುತ್ತೂರಿನ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿನಿಗೆ ದ್ವಿತೀಯ ರ‍್ಯಾಂಕ್ - ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ

ಆರೋಗ್ಯ ಸಮಸ್ಯೆಯ ನಡುವೆಯೂ NEET-2021 ಪರೀಕ್ಷೆಯಲ್ಲಿ 658/720 ಅಂಕಗಳನ್ನು ಪಡೆಯುವ ಮೂಲಕ ಪುತ್ತೂರಿನ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿನಿ ಸಿಂಚನಾ ಲಕ್ಷ್ಮಿ ರಾಷ್ಟ್ರೀಯ ದ್ವಿತೀಯ ರ‍್ಯಾಂಕ್‌ ಗಳಿಸಿದ್ದಾರೆ. ಯುವತಿಯ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

NEET-2021results
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ
author img

By

Published : Nov 6, 2021, 4:31 PM IST

ಮಂಗಳೂರು: ಪುತ್ತೂರಿನ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿನಿ ಆರೋಗ್ಯ ಸಮಸ್ಯೆಯ ನಡುವೆಯೂ ನೀಟ್-2021 ರ ಪಿಡಬ್ಲ್ಯೂಡಿ ವಿಭಾಗದಲ್ಲಿ ರಾಷ್ಟ್ರೀಯ ದ್ವಿತೀಯ ರ‍್ಯಾಂಕ್‌ ಪಡೆದಿದ್ದಾರೆ.

ಶೋಭಾ ಬಿ ಮತ್ತು ಮುರಳೀಧರ ಭಟ್ ಅವರ ಪುತ್ರಿ ಸಿಂಚನಾ ಲಕ್ಷ್ಮಿ NEET -2021 ಪರೀಕ್ಷೆಗಳಲ್ಲಿ PWD ವಿಭಾಗದಲ್ಲಿ ಎರಡನೇ ರ್ಯಾಂಕ್ ಪಡೆಡಿದ್ದಾರೆ. ಅವರು ಪುತ್ತೂರಿನ ವಿವೇಕಾನಂದ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು.

ಸಿಂಚನಾ ಲಕ್ಷ್ಮಿ NEET-2021 ಪರೀಕ್ಷೆಗಳಲ್ಲಿ 658/720 ಅಂಕಗಳನ್ನು ಗಳಿಸಿದ್ದಾರೆ. ಕೃಷಿ ಕುಟುಂಬದಿಂದ ಬಂದಿರುವ ಇವರು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಸರಣಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಎಲ್ಲವನ್ನೂ ಸವಾಲಾಗಿ ತೆಗೆದುಕೊಂಡು ಈಗ NEET-2021 ರಲ್ಲಿ ರಾಷ್ಟ್ರೀಯ ಎರಡನೇ ರ್ಯಾಂಕ್, PWD ವರ್ಗ, ಅಖಿಲ ಭಾರತ ವಿಭಾಗದಲ್ಲಿ 1611ನೇ ರ್ಯಾಂಕ್ ಮತ್ತು ಅಖಿಲ ಭಾರತ ಸಾಮಾನ್ಯ ವರ್ಗದಲ್ಲಿ 2856ನೇ ರ್ಯಾಂಕ್ ಗಳಿಸುವ ಮೂಲಕ ತನ್ನ ಸಾಮರ್ಥ್ಯ ತೋರಿಸಿದ್ದಾರೆ.

ಜೆಇಇ ಮತ್ತು ಕೆಸಿಇಟಿಯಲ್ಲೂ ಇವರ ಸಾಧನೆ ಗಮನಾರ್ಹ. ಜೆಇಇಯಲ್ಲಿ ಶೇ 96.16 ಅಂಕ ಗಳಿಸಿದ್ದಾರೆ. ಬಿಎಸ್ಸಿ, ಕೃಷಿಯಲ್ಲಿ 530ನೇ ರ್ಯಾಂಕ್, ಬಿಎನ್‌ವೈಎಸ್‌ನಲ್ಲಿ 974ನೇ ರ್ಯಾಂಕ್, ಪಶು ವೈದ್ಯಕೀಯದಲ್ಲಿ 974ನೇ ರ್ಯಾಂಕ್, ಕೆಸಿಇಟಿ ಇಂಜಿನಿಯರಿಂಗ್‌ನಲ್ಲಿ 1582ನೇ ರ್ಯಾಂಕ್ ಗಳಿಸಿದ್ದಾರೆ. ಸಿಂಚನಾ ಸಾಧನೆಗೆ ವಿವೇಕಾನಂದ ಪಿಯು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.