ETV Bharat / city

ಮೊಬೈಲ್​ ಕದ್ದ ಆರೋಪ.. ಮಂಗಳೂರಲ್ಲಿ ಮೀನುಗಾರನ ಉಲ್ಟಾ ತೂಗು ಹಾಕಿ ಅಮಾನವೀಯ ಶಿಕ್ಷೆ! - ಮಂಗಳೂರು ಮೀನುಗಾರರ ನ್ಯೂಸ್​

ಮೀನುಗಾರನೋರ್ವನನ್ನು ತಲೆಕೆಳಗೆ ಮಾಡಿ ನೇತು ಹಾಕಿ ಶಿಕ್ಷೆ ನೀಡಿದ ಅಮಾನವೀಯ ಘಟನೆ ಮಂಗಳೂರಿನಲ್ಲಿ ನಡೆದಿದೆ.

Assault on fisherman
ಮೀನುಗಾರನ ತಲೆಕೆಳಗೆ ಮಾಡಿ ತೂಗು ಹಾಕಿ ಶಿಕ್ಷೆ
author img

By

Published : Dec 23, 2021, 8:17 AM IST

Updated : Dec 23, 2021, 8:17 PM IST

ಮಂಗಳೂರು: ಮೊಬೈಲ್ ಕಳ್ಳತನ ಮಾಡಿರುವ ಆರೋಪದಡಿ ಮೀನುಗಾರನೋರ್ವನನ್ನು ತಲೆಕೆಳಗೆ ಮಾಡಿ ನೇತು ಹಾಕಿ ಶಿಕ್ಷೆ ನೀಡಿದ ಅಮಾನವೀಯ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವೈಲ ಶೀನು ಎಂಬ ಮೀನುಗಾರ ಈ ರೀತಿ ದೌರ್ಜನ್ಯಕ್ಕೊಳಗಾಗಿರುವ ಮೀನುಗಾರ.

ವೈಲ್​ ಶೀನು ಆಂಧ್ರಪ್ರದೇಶದ ಮೂಲದ ಮೀನುಗಾರನಾಗಿದ್ದು, ಮಂಗಳೂರಿನಲ್ಲಿ ಮೀನುಗಾರಿಕಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಮಂಗಳೂರಿನ ಧಕ್ಕೆಯಲ್ಲಿ ಮೀನುಗಾರರೊಬ್ಬರ ಮೊಬೈಲ್ ಕಳೆದು ಹೋಗಿತ್ತು. ಇದನ್ನು ವೈಲ ಶೀನು ಕದ್ದಿದ್ದಾನೆ ಎಂದು ಆರೋಪಿಸಿ ಆತನನ್ನು ಬೋಟ್ ನಲ್ಲಿ ಅಮಾನವೀಯವಾಗಿ ವಿಚಾರಿಸಿದ್ದಾರೆ. ಅಲ್ಲದೆ, ಬೋಟ್ ನಲ್ಲೇ ಆತನ ಕಾಲಿಗೆ ಹಗ್ಗಕಟ್ಟಿ ತಲೆಕೆಳಗು ಮಾಡಿ ನೇತುಹಾಕಿ ವಿಚಾರಣೆ ನಡೆಸಿದ್ದಾರೆ. ಇವರೆಲ್ಲರೂ ಆಂಧ್ರಪ್ರದೇಶ ಮೂಲದ ಕಾರ್ಮಿಕರಾಗಿದ್ದಾರೆ.

ಮೀನುಗಾರನ ತಲೆಕೆಳಗೆ ಮಾಡಿ ತೂಗು ಹಾಕಿ ಶಿಕ್ಷೆ

ಈ ಘಟನೆ ನಡೆದು ಕೆಲವು ದಿನಗಳಾಗಿದ್ದು, ಇದರ ವಿಡಿಯೋ ಇದೀಗ ಪೊಲೀಸರಿಗೆ ಲಭಿಸಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

(ಇದನ್ನೂ ಓದಿ: ಕನ್ನಡಿಗ ಮನೀಶ್ ಪಾಂಡೆ ಮೇಲೆ RCB ಕಣ್ಣು.. ಕೊಹ್ಲಿ ಬದಲಿಗೆ ನಾಯಕನಾಗುವ ಸಾಧ್ಯತೆ)

Last Updated : Dec 23, 2021, 8:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.