ETV Bharat / city

ಮಂಗಳೂರಿನಲ್ಲಿ ವಿವಾದದ ಕಿಡಿ ಹೊತ್ತಿಸಿದೆ ವೀರ ಸಾವರ್ಕರ್ ವೃತ್ತ ನಾಮಕರಣ: ಪರ-ವಿರೋಧ ಚರ್ಚೆ - veera savarkar circle naming

ನಗರದ ಸುರತ್ಕಲ್ ವೃತ್ತಕ್ಕೆ ವೀರ ಸಾವರ್ಕರ್ ನಾಮಕರಣ ಮಾಡುವ ಹಾಗೂ ಪುತ್ಥಳಿ ಪ್ರತಿಷ್ಠಾಪನೆ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

surathkal circle
ಸುರತ್ಕಲ್ ಜಂಕ್ಷನ್ ವೃತ್ತ
author img

By

Published : Nov 7, 2021, 10:25 AM IST

Updated : Nov 7, 2021, 10:32 AM IST

ಮಂಗಳೂರು: ಬೆಂಗಳೂರಿನಲ್ಲಿ ಫ್ಲೈಓವರ್​ಗೆ ವೀರ ಸಾವರ್ಕರ್ ನಾಮಕರಣ ಮಾಡುವ ವಿಚಾರದಲ್ಲಿ ವಿವಾದವುಂಟಾಗಿ ಸಾಕಷ್ಟು ಚರ್ಚೆ ನಡೆದಿತ್ತು. ಇದೀಗ ನಗರದ ಸುರತ್ಕಲ್ ಜಂಕ್ಷನ್ ವೃತ್ತಕ್ಕೆ ವೀರ ಸಾವರ್ಕರ್ ಹೆಸರು ನಾಮಕರಣ ಮಾಡುವ ಹಾಗೂ ಪುತ್ಥಳಿ ಪ್ರತಿಷ್ಠಾಪನೆ ಮಾಡುವ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪರ -ವಿರೋಧ ಚರ್ಚೆಗಳು ಕೇಳಿ ನಡೆಯುತ್ತಿವೆ.

ಶಾಸಕ ಯು.ಟಿ. ಖಾದರ್

ವಿಶೇಷವೆಂದರೆ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿಯವರೇ ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುರತ್ಕಲ್ ಜಂಕ್ಷನ್ ವೃತ್ತಕ್ಕೆ ವೀರ ಸಾವರ್ಕರ್ ನಾಮಕರಣ ಮಾಡಲು ಹಾಗೂ ಪುತ್ಥಳಿ ಪ್ರತಿಷ್ಠಾಪನೆ ಮಾಡಬೇಕೆಂದು ಒತ್ತಾಯಿಸಿ ಮಂಗಳೂರು ಮನಪಾ ಮೇಯರ್​​ಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಮಂಗಳೂರು ಮನಪಾ ಸಾಮಾನ್ಯ ಸಭೆಯಲ್ಲಿ ಚರ್ಚೆಗೂ ಬಂದಿದ್ದು, ಆಗ ವಿಪಕ್ಷ ಸದಸ್ಯರು ಸಾವರ್ಕರ್ ಹೆಸರನ್ನು ಸುರತ್ಕಲ್ ಜಂಕ್ಷನ್ ವೃತ್ತಕ್ಕೆ ಇಡುವುದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದರು‌.

ಇದನ್ನೂ ಓದಿ: ಕದ್ದ ಬೈಕ್​ನಲ್ಲೇ ಒಂದೇ ದಿನ 7 ಕಡೆ ದರೋಡೆ.. ಶಿವಮೊಗ್ಗದಲ್ಲಿ ಮೂವರು ಆರೋಪಿಗಳು ಅಂದರ್​

ಈ ಬಗ್ಗೆ ಮಾತನಾಡಿದ ಶಾಸಕ ಯು.ಟಿ. ಖಾದರ್ ಅವರು, ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಗಾರನಲ್ಲವೆಂದು, ಜೈಲು ಸೇರಿಲ್ಲವೆಂದು ಹೇಳುತ್ತಿಲ್ಲ. ಸ್ವಾತಂತ್ರ್ಯಕ್ಕಾಗಿ ಅದೆಷ್ಟೋ ಮಂದಿ ಪ್ರಾಣತ್ಯಾಗ ಮಾಡಿದರು, ಜೈಲು ಸೇರಿದರು, ಜೈಲಿನಲ್ಲಿಯೇ ಮಡಿದರು. ಕೆಲವರನ್ನು ನೇಣಿಗೆ ಹಾಕಲಾಯಿತು. ಆದರೆ ಜೈಲು ಸೇರಿದ ಸಾವರ್ಕರ್ ತಮ್ಮದು ತಪ್ಪಾಯಿತೆಂದು ಬ್ರಿಟಿಷರಿಗೆ ಮುಚ್ಚಳಿಕೆ ಪತ್ರ ಬರೆದು ಕ್ಷಮೆ ಕೇಳಿದವರು‌‌.

ಈ ರೀತಿ ಕ್ಷಮೆ ಕೇಳಿ ದೇಶಕ್ಕೆ ಅವಮಾನ ಮಾಡುವಂತೆ ವರ್ತಿಸಿರುವವರ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಸಾವರ್ಕರ್ ಗಿಂತ ದ.ಕ. ಜಿಲ್ಲೆಗೆ ಕೊಡುಗೆಗಳನ್ನು ನೀಡಿರುವ ಶ್ರೀನಿವಾಸ ಮಲ್ಯ, ಕುದ್ಮುಲ್ ರಂಗರಾವ್, ಕಾರ್ನಾಡ್ ಸದಾಶಿವರಾವ್ ಹಾಗೂ ಜನಾರ್ದನ ಪೂಜಾರಿ ಅವರಂತವರ ಹೆಸರನ್ನು ಇಡಬಹುದು ಎಂದು ಹೇಳಿದರು.

Last Updated : Nov 7, 2021, 10:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.