ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರೊಂದಿಗೆ ಇಂದು ಬೆಳಗ್ಗೆ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಈ ಸಂದರ್ಭ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಜನರ ಸಮಸ್ಯೆಯನ್ನು ಬಗೆಹರಿಸದೆ ಬರೀ ಉದ್ಘಾಟನೆ ಮಾಡಿ ಕೇರಳ ಮತ್ತು ಗೋವಾಗಳಿಗೆ ಹೋಗುವವರಿಗೆ ಪ್ರಯೋಜನ ಮಾಡಲಾಗುತ್ತದೆ. ಇದರಿಂದ ಯಾವುದೇ ಲಾಭವಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಗುತ್ತಿಗೆ ಕಾಮಗಾರಿಯ ಅಧಿಕಾರಿಗಳೊಂದಿಗೆ ನಾನು ಮಾತನಾಡಿದ್ದು, ಹೇಳಿದ ದಿನದೊಳಗೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಅವೈಜ್ಞಾನಿಕ ಕಾಮಗಾರಿಯ ಬಗ್ಗೆಯೂ ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ನಾನು ಹಾಗೂ ಸಂಸದರು ಜಿಲ್ಲಾಡಳಿತದೊಂದಿಗೆ ಚರ್ಚೆ ಮಾಡಿ ಈ ಸಮಸ್ಯೆಗೆ ಪರಿಹಾರ ಒದಗಿಸುತ್ತೇವೆ ಎಂದರು.
ಈ ಕಾಮಗಾರಿಯ ಬಗ್ಗೆ ಹಲವಾರು ಬಾರಿ ಸಭೆ ನಡೆಯಿತು. ಅಲ್ಲದೆ 8 ವರ್ಷಗಳ ಹಿಂದೆ ಸಿಂಗಲ್ ಟ್ರ್ಯಾಕ್ ಮಾಡಲು ಕೆಲಸ ಪ್ರಾರಂಭ ಮಾಡಲಾಗಿತ್ತು ಎಂದು ಹೇಳಿದರು. ಆ ಸಂದರ್ಭದಲ್ಲಿಯೂ ನಾನೇ ಶಾಸಕನಾಗಿದ್ದೆ. ಅದನ್ನು ಬಂದು ನಾನು ಕಿತ್ತೆಸೆದಿದ್ದೆ. ಅಮೇಲೆ ಇದಕ್ಕೆ ಪ್ಲ್ಯಾನ್ ಅಪ್ರೂವ್ ಆಗಿದೆ. ಅಲ್ಲದೆ ಮೇಲ್ಸೇತುವೆಯನ್ನು ಇನ್ನೂ ದೂರದವರೆಗೆ ಮಾಡಬೇಕೆಂದು ತಿಳಿಸಿದ್ದೆ. ಸ್ಥಳೀಯ ಮಟ್ಟದಲ್ಲಿ ನನ್ನನ್ನೇ ದೂಷಣೆ ಮಾಡಲಾಗಿತ್ತು. ಯಾರ ಬೆಂಬಲವೂ ದೊರಕಲಿಲ್ಲ. ದಿಲ್ಲಿಯಲ್ಲಿ ನಾವು ಏನು ಮಾಡಲು ಸಾಧ್ಯವಿಲ್ಲ. ಇಲ್ಲದಿದ್ದರೆ ಮೇಲ್ಸೇತುವೆಯನ್ನೇ ರದ್ದು ಮಾಡಬೇಕಿತ್ತು. ಆದರೂ ಎಲ್ಲರೂ ಆ ಸಂದರ್ಭದಲ್ಲೇ ಬೆಂಬಲ ನೀಡುತ್ತಿದ್ದರೆ. ಕಾಮಗಾರಿ ಯಾವಾಗಲೇ ಮುಗಿಯುತ್ತಿತ್ತು ಎಂದು ಅವರು ಹೇಳಿದರು.