ETV Bharat / city

ಮಂಗಳೂರು: ಬೆಂಕಿ ಅವಘಡದಿಂದ 2 ಅಂಗಡಿಗಳು ಸಂಪೂರ್ಣ ಭಸ್ಮ - ಬೆಂಕಿ ಅವಘಡ

ಮಂಗಳೂರಿನ ಸೆಂಟ್ರಲ್​ ಮಾರುಕಟ್ಟೆಯ ಮುಂಬಾಗದ ದುಬೈ ಮಾರ್ಕೆಟ್​​ನಲ್ಲಿ ಬೆಂಕಿ ಅವಘಡ ಸಂಭವಿಸಿ ಎರಡು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ತಡರಾತ್ರಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

fire-accident
ಬೆಂಕಿ ಅವಘಡ
author img

By

Published : Dec 19, 2021, 9:14 AM IST

ಮಂಗಳೂರು : ಬೆಂಕಿ ಅವಘಡದಲ್ಲಿ ಎರಡು ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನಗರದ ಸೆಂಟ್ರಲ್​​ ಮಾರುಕಟ್ಟೆ ಮುಂಭಾಗದ ದುಬೈ ಮಾರ್ಕೆಟ್​ನಲ್ಲಿ ಇಂದು ನಸುಕಿನಜಾವ ಸಂಭವಿಸಿದೆ.

ಬೆಂಕಿ ಅವಘಡದಿಂದ 2 ಅಂಗಡಿಗಳು ಸಂಪೂರ್ಣ ಭಸ್ಮ

ಅವಘಡದಲ್ಲಿ ದುಬೈ ಮಾರುಕಟ್ಟೆಯಲ್ಲಿರುವ ನೆಲ ಮಹಡಿಯ ಫ್ಯಾನ್ಸಿ ಹಾಗೂ ಇಲೆಕ್ಟ್ರಿಕ್ ಅಂಗಡಿಗಳು ಭಸ್ಮವಾಗಿದೆ. ಅಂಗಡಿಯೊಳಗಿನಿಂದ ಹೊಗೆ ಬರುತ್ತಿದ್ದುದನ್ನ ಕಂಡ ಅಲ್ಲಿಯ ಸೆಕ್ಯುರಿಟಿ ಗಾರ್ಡ್​ಗಳು ನಸುಕಿನಜಾವ 3.20ರ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.

ಮಂಗಳೂರು ಅಂಗಡಿಗೆ ಬೆಂಕಿ : ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ‌. ಆದರೆ ಅಷ್ಟರಲ್ಲಾಗಲೇ ಎರಡು ಅಂಗಡಿಗಳು ಸಂಪೂರ್ಣ ಸುಟ್ಟುಹೋಗಿದ್ದವು. ಅಂಗಡಿಯ ಮಾಲೀಕರು ಯಾರೆಂದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.