ETV Bharat / city

ಬಂಟ್ವಾಳ: ಅಂಗಡಿ, ಹೋಟೆಲ್​​ಗೆ ನುಗ್ಗಿದ ಟೋಯಿಂಗ್ ಲಾರಿ- ಚಾಲಕ ಗಂಭೀರ - ಬಂಟ್ವಾಳ ಅಪಘಾತ ಸುದ್ದಿ

ಚಾಲಕನ ನಿಯಂತ್ರಣ ಕಳೆದುಕೊಂಡ ಟೋಯಿಂಗ್ ಲಾರಿಯೊಂದು ಬಸ್ ತಂಗುದಾಣ ಹಾಗೂ ಅಂಗಡಿಗಳಿಗೆ ಡಿಕ್ಕಿ ಹೊಡೆಯಿತು.

towing lorry accident at Bantwal
ಅಂಗಡಿ, ಹೋಟೆಲ್​​ಗೆ ನುಗ್ಗಿದ ಟೋಯಿಂಗ್ ಲಾರಿ
author img

By

Published : May 6, 2022, 1:00 PM IST

ಬಂಟ್ವಾಳ: ಟೋಯಿಂಗ್ ಲಾರಿಯೊಂದು ಬಸ್ ತಂಗುದಾಣ, ಅಂಗಡಿಗಳಿಗೆ ಡಿಕ್ಕಿ ಹೊಡೆದ ಬಳಿಕ ಹೋಟೆಲ್​​ಗೆ ನುಗ್ಗಿದ್ದು ಚಾಲಕ ಗಂಭೀರ ಗಾಯಗೊಂಡಿದ್ದಾನೆ. ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ಎಂಬಲ್ಲಿ ಘಟನೆ ಸಂಭವಿಸಿದೆ. ಪುತ್ತೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದಾಗ ಟೋಯಿಂಗ್ ಲಾರಿ ಕೊಡಾಜೆ ಜಂಕ್ಷನ್‌ನಲ್ಲಿ ನಂದಿನಿ ಹಾಲಿನ ಅಂಗಡಿ, ಬೇಕರಿ, ಬಸ್ ತಂಗುದಾಣ, ಮೊಬೈಲ್ ಅಂಗಡಿ ಮಹಡಿಗೆ ಡಿಕ್ಕಿ ಹೊಡೆದು ಹೋಟೆಲ್​​ಗೆ ನುಗ್ಗಿದೆ ಎನ್ನಲಾಗ್ತಿದೆ.

ಶಿರಸಿ ಮೂಲದ ಲಾರಿ ಎಂದು ತಿಳಿದು ಬಂದಿದೆ‌. ಹಗಲು ವೇಳೆ ಇಲ್ಲಿ ಹೆಚ್ಚಿನ ಜನ ಸಂದಣಿ ಕಾಣುತ್ತಿದ್ದು, ರಾತ್ರಿ 1 ಗಂಟೆ ಅಂದಾಜಿಗೆ ಘಟನೆ ಸಂಭವಿಸಿದೆ. ಹಾಗಾಗಿ, ಭಾರಿ ಅನಾಹುತ ತಪ್ಪಿದೆ. ಅಂಗಡಿಗಳಿಗೆ ಹಾನಿ ಉಂಟಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.