ದಕ್ಷಿಣಕನ್ನಡ : ಜಿಲ್ಲೆಯಲ್ಲಿ ಇಂದು 11 ವರ್ಷದ ಬಾಲಕಿ ಸೇರಿ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.
ಮಂಗಳೂರು ಸಮೀಪದ ಬೋಳೂರಿನ ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ 38 ವರ್ಷದ ಮಹಿಳೆ ಮತ್ತು 11 ವರ್ಷದ ಬಾಲಕಿಗೆ ಕೊರೊನಾ ದೃಢಪಟ್ಟಿದೆ. ಅದೇ ರೀತಿ ಬಂಟ್ವಾಳದ ಮೃತ ಮಹಿಳೆಯ ಸಂಪರ್ಕದಲ್ಲಿದ್ದ 16 ವರ್ಷದ ಬಾಲಕಿಗೆ ಕೊರೊನಾ ದೃಢಪಟ್ಟಿದೆ.
28 ಪಾಸಿಟಿವ್ ಕೇಸ್‌ಗಳಲ್ಲಿ 12 ಮಂದಿ ಈಗಾಗಲೇ ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ. ಮೂವರು ಸಾವನ್ನಪ್ಪಿದ್ದು,13 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.