ETV Bharat / city

ಹಣಕ್ಕಾಗಿ ಸ್ನೇಹಿತನನ್ನೇ ಕೊಂದ ಪಾಪಿಗಳು.. 7 ವರ್ಷ ಪಾತಕಿಗಳಿಗೆ ಕಠಿಣ ಸಜೆ ವಿಧಿಸಿದ ಕೋರ್ಟ್​ - ಮಂಗಳೂರು ಜಿಲ್ಲಾ ಆರನೇ ಸತ್ರ ನ್ಯಾಯಾಲಯ

ಹಣದ ವಿಚಾರವಾಗಿ ಪ್ರಾಣ ಸ್ನೇಹಿತನನ್ನೇ ಕೊಲೆಗೈದಿದ್ದ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಮಯಿಲ್ಲ ನಿವಾಸಿಗಳಾದ ಜೀವನ್​ ಹಾಗೂ ದಿಲೇಶ್​​ಗೆ ​ ಮಂಗಳೂರು ಜಿಲ್ಲಾ 6ನೇ ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಸ್ನೇಹಿತನನ್ನೇ ಹತ್ಯೆಗೈದ ಪಾಪಿಗಳು
author img

By

Published : Aug 6, 2019, 11:45 PM IST

ಮಂಗಳೂರು: ಸ್ನೇಹಿತನನ್ನೇ ಹತ್ಯೆ ಮಾಡಿದ ಆರೋಪ ಸಾಬೀತುಗೊಂಡ ಹಿನ್ನೆಲೆಯಲ್ಲಿ ಮಂಗಳೂರು ಜಿಲ್ಲಾ 6ನೇ ಸತ್ರ ನ್ಯಾಯಾಲಯ ಮಾನವ ಹತ್ಯೆ ಮಾಡಲಾಗಿದೆ ಎಂದು ಪರಿಗಣಿಸಿ ಅಪರಾಧಿಗಳಿಗೆ 7 ವರ್ಷ ಕಠಿಣ ಸಜೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಮಯಿಲ್ಲ ನಿವಾಸಿಗಳಾದ ಜೀವನ್(37) ಹಾಗೂ ದಿಲೇಶ್(35) ಶಿಕ್ಷೆಗೊಳಗಾದ ಅಪರಾಧಿಗಳು. ಈ ಇಬ್ಬರು ತಮ್ಮ ಸ್ನೇಹಿತ ಕೆ ಸಿ ಸಜೇಶ್(33) ಎಂಬಾತನನ್ನು ಕೊಲೆ ಮಾಡಿದ್ದರು. ಅಪರಾಧಿಗಳು ದಂಡ ತೆರಲು ತಪ್ಪಿದರೆ, ಮತ್ತೆ ಒಂದು ವರ್ಷ ಜೈಲುಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ:

2014 ಏಪ್ರಿಲ್ 1ರಂದು ಕೇರಳದಲ್ಲಿ ಮದ್ಯ ಮಾರಾಟ ನಿಷೇಧ ದಿನವಾಗಿತ್ತು. ಅದಕ್ಕಾಗಿ ಮೂವರು ಸ್ನೇಹಿತರು ರಕ್ತದಾನ ಮಾಡುವುದಿದೆ ಎಂದು ಮನೆಯಲ್ಲಿ ಹೇಳಿ ಕಾರಿನಲ್ಲಿ ಮಂಗಳೂರಿಗೆ ಬಂದಿದ್ದರು. ಈ ಸಂದರ್ಭ ಅವರು ಗ್ಲೋಬಲ್ ಲಾಡ್ಜ್​ನಲ್ಲಿ ರೂಂ ಪಡೆದು ವಾಸ್ತವ್ಯ ಹೂಡಿದ್ದರು. ಇಸ್ಪೀಟ್ ಆಟ ಆಡಿದ್ದರು. ಈ ಸಂದರ್ಭ ಸಜೇಶ್ ಹಣ ಖಾಲಿಯಾಗಿದ್ದು, ಈ ಸಂದರ್ಭ ತನ್ನ ಚಿಕ್ಕಮ್ಮನಿಂದ ಕೊಡಿಸಿದ್ದ 30 ಸಾವಿರ ರೂ.ವನ್ನು ಜೀವನ್​ನಲ್ಲಿ ವಾಪಸ್ ಕೊಡುವಂತೆ ಕೇಳಿದ್ದ. ಆಗ ಮಾತಿಗೆ ಮಾತು ಬೆಳೆದು ಇಬ್ಬರು ಹೊಡೆದಾಡಿಕೊಂಡಿದ್ದರು. ಇದರಿಂದ ಲಾಡ್ಜ್​ ಸಿಬ್ಬಂದಿ ರೂಂ ವೆಕೇಟ್ ಮಾಡಲು ತಿಳಿಸುತ್ತಾರೆ. ಅಂದು ರಾತ್ರಿ 7.30 ಸುಮಾರಿಗೆ ಇವರು ರೂಂ ಬಿಟ್ಟು ಹೊರಡುತ್ತಾರೆ.

ಅಲ್ಲಿಂದ ಬಾರ್​ಗೆ ಬಂದ ಗೆಳೆಯರು ಮದ್ಯ ಸೇವಿಸಿ ಬಳಿಕ ಹೊರಡುವಾಗ, ಉಜ್ಜೋಡಿ ಪೆಟ್ರೋಲ್ ಬಂಕ್ ಬಳಿ ರಾತ್ರಿ 11.30ಕ್ಕೆ ಮತ್ತೆ ಜಗಳವಾಗುತ್ತದೆ. ಈ ಸಂದರ್ಭ ಜೀವನ್ ಹಾಗೂ ದಿಲೇಶ್ ಅಲ್ಲಿಯೇ ಇದ್ದ ಇಂಟರ್ ಲಾಕ್​ನಿಂದ ಸಜೇಶ್ ತಲೆಗೆ ಹೊಡೆಯುತ್ತಾರೆ. ಸಜೇಶ್ ತೀವ್ರ ರಕ್ತಸ್ರಾವವಾಗಿ ಅಲ್ಲಿಯೇ ಬೀಳುತ್ತಾನೆ. ಜೀವನ್ ಹಾಗೂ ದಿಲೇಶ್ ಅಲ್ಲಿಂದ ಪರಾರಿಯಾಗಿ ಊರಿಗೆ ಹೋಗಿರುತ್ತಾರೆ.

ಮರುದಿನ ಉಜ್ಜೋಡಿ ಪೆಟ್ರೋಲ್ ಬಂಕ್ ಬಳಿ ಸಜೇಶ್ ಮೃತಪಟ್ಟಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸುತ್ತಾರೆ. ಈ ಸಂದರ್ಭ ಪೊಲೀಸರು ಸಜೇಶ್ ಕಿಸೆಯಲ್ಲಿರುವ ಗುರುತಿನ ಚೀಟಿ ಮೂಲಕ ಆತನ ಊರಿಗೆ ಮಾಹಿತಿ ನೀಡಿದ್ದರು. ಮಂಗಳೂರಿಗೆ ಬಂದ ಸಜೇಶ್ ತಂಗಿ ಮೃತದೇಹದ ಗುರುತು ಪತ್ತೆ ಹಚ್ಚಿ ಮಂಗಳೂರು ಗ್ರಾಮಾಂತರ ಪೊಲೀಸ್ ದೂರು ನೀಡುತ್ತಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಏಪ್ರಿಲ್‌ 24ರಂದು ಆರೋಪಿಗಳನ್ನು ಬಂಧಿಸಿದ್ದರು.

ಅಂದಿನ ಎಸ್​ಐ ಹರೀಶ್ ಈ ಪ್ರಕರಣದ ಬಗ್ಗೆ ಭಾಗಶಃ ತನಿಖೆ ನಡೆಸಿದ್ದರು. ಬಳಿಕ ಎಸ್​ಐ ಪ್ರಮೋದ್ ಕುಮಾರ್ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸುತ್ತಾರೆ‌. ಈ ಸಂದರ್ಭ 29 ಸಾಕ್ಷಿದಾರರನ್ನು ಹಾಗೂ 41 ಸೊತ್ತುಗಳನ್ನು ಪರಿಶೀಲನೆ ನಡೆಸಿ, ಜೀವನ್ ಹಾಗೂ ದಿಲೇಶ್ ಮೇಲಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರನೇ ಜಿಲ್ಲಾ ಸತ್ರ ನ್ಯಾಯಾಲಯ ಐಪಿಸಿ ಸೆಕ್ಷನ್ 304ರ ಅನ್ವಯ ಮಾನವ ಹತ್ಯೆ ಮಾಡಲಾಗಿದೆ ಎಂದು ಪರಿಗಣಿಸಿ ಇಬ್ಬರು ಆರೋಪಿಗಳಿಗೂ 7 ವರ್ಷ ಕಠಿಣ ಸಜೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿದೆ. ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಸಾಮಾನ್ಯ ಸಜೆ ಅನುಭವಿಸಲು ನ್ಯಾಯಾಧೀಶೆ ಸಯಿದುನ್ನೀಸಾ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಎಂ. ಕ್ರಾಸ್ತಾ ವಾದಿಸಿದ್ದರು.

Intro:ಮಂಗಳೂರು: ಸ್ನೇಹಿತನನ್ನೇ ಹತ್ಯೆ ಮಾಡಿದ ಆರೋಪ ಸಾಬೀತುಗೊಂಡ ಹಿನ್ನೆಲೆಯಲ್ಲಿ ಮಾನವ ಹತ್ಯೆ ಮಾಡಲಾಗಿದೆ ಎಂದು ಪರಿಗಣಿಸಿ ಜಿಲ್ಲಾ ಆರನೇ ಸತ್ರ ನ್ಯಾಯಾಲಯ ಅಪರಾಧಿಗಳಿಗೆ 7 ವರ್ಷ ಕಠಿಣ ಸಜೆ ಹಾಗೂ ತಲಾ 25 ಸಾವಿರ ರೂ. ವಿಧಿಸಿ ಆದೇಶಿಸಿದೆ.

ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಮಯಿಲ್ಲ ನಿವಾಸಿಗಳಾದ ಜೀವನ್ (37) ಹಾಗೂ ದಿಲೇಶ್ (35) ಶಿಕ್ಷೆಗೊಳಗಾದ ಅಪರಾಧಿಗಳು. ಸ್ನೇಹಿತ ಕೆ.ಸಿ.ಸಜೇಶ್ (33) ಎಂಬವರನ್ನು ಕೊಲೆ ಮಾಡಿದ್ದರು. ಅಪರಾಧಿಗಳು ದಂಡ ತೆರಲು ತಪ್ಪಿದರೆ ಮತ್ತೆ ಒಂದು ವರ್ಷ ಜೈಲುಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ: 2014 ಎಪ್ರಿಲ್ 1 ರಂದು ಕೇರಳದಲ್ಲಿ
ಕೇರಳದಲ್ಲಿ ಮದ್ಯ ಮಾರಾಟ ನಿಷೇಧ ದಿನವಾಗಿತ್ತು. ಅದಕ್ಕಾಗಿ ಮೂವರು ಸ್ನೇಹಿತರು ರಕ್ತದಾನ ಮಾಡುವುದಿದೆ ಎಂದು ಮನೆಯಲ್ಲಿ ಹೇಳಿ ಕಾರಿನಲ್ಲಿ ಮಂಗಳೂರಿಗೆ ಬಂದಿದ್ದರು. ಈ ಸಂದರ್ಭ ಅವರು ಗ್ಲೋಬಲ್ ಲಾಡ್ಜ್ ನಲ್ಲಿ ರೂಂ ಪಡೆದು ವಾಸ್ತವ್ಯ ಹೂಡಿದ್ದರು. ಇಸ್ಪೀಟ್ ಆಟ ಆಡಿದ್ದರು. ಈ ಸಂದರ್ಭ ಸಜೇಶ್ ಹಣ ಖಾಲಿಯಾಗಿದ್ದು, ಈ ಸಂದರ್ಭ ತನ್ನ ಚಿಕ್ಕಮ್ಮನಿಂದ ಕೊಡಿಸಿದ್ದ 30 ಸಾವಿರ ರೂ.ವನ್ನು ಜೀವನ್ ನಲ್ಲಿ ವಾಪಸ್ ಕೊಡುವಂತೆ ಕೇಳುತ್ತಾನೆ. ಆಗ ಮಾತಿಗೆ ಮಾತು ಬೆಳೆದು ಇವರ ಮಧ್ಯೆ ಲಾಡ್ಜ್ ನಲ್ಲಿ ಗಲಾಟೆ ನಡೆದು ಹೊಡೆದಾಟವೂ ಸಂಭವಿಸುತ್ತದೆ. ಇದರಿಂದ ಲಾಡ್ಜ್ ನವರು ಇವರನ್ನು ರೂಂ ವೆಕೇಟ್ ಮಾಡಲು ತಿಳಿಸುತ್ತಾರೆ. ಅಂದು ರಾತ್ರಿ 7.30 ಸುಮಾರಿಗೆ ಇವರು ರೂಂ ಬಿಟ್ಟು ಹೊರಡುತ್ತಾರೆ.

ಅಲ್ಲಿಂದ ಬಾರ್ ಗೆ ಬಂದ ಗೆಳೆಯರು ಮದ್ಯ ಸೇವಿಸಿ ಬಳಿಕ ಹೊರಡುವಾಗ ಉಜ್ಜೋಡಿ ಪೆಟ್ರೋಲ್ ಬಂಕ್ ಬಳಿ ರಾತ್ರಿ 11.30ಕ್ಕೆ ಮತ್ತೆ ಜಗಳವಾಗುತ್ತದೆ. ಈ ಸಂದರ್ಭ ಜೀವನ್ ಹಾಗೂ ದಿಲೇಶ್ ಅಲ್ಲಿಯೇ ಇದ್ದ ಇಂಟರ್ ಲಾಕ್ ನಿಂದ ಸಜೇಶ್ ತಲೆಗೆ ಹೊಡೆಯುತ್ತಾರೆ. ಸಜೇಶ್ ತೀವ್ರ ರಕ್ತಸ್ರಾವವಾಗಿ ಅಲ್ಲಿಯೇ ಬೀಳುತ್ತಾರೆ. ಜೀವನ್ ಹಾಗೂ ದಿಲೇಶ್ ಅಲ್ಲಿಂದ ಪರಾರಿಯಾಗಿ ಊರಿಗೆ ಹೋಗುತ್ತಾರೆ.

ಮರುದಿನ ಉಜ್ಜೋಡಿ ಪೆಟ್ರೋಲ್ ಬಂಕ್ ಬಳಿ ಸಜೇಶ್ ಮೃತಪಟ್ಟಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸುತ್ತಾರೆ. ಈ ಸಂದರ್ಭ ಪೊಲೀಸರು ಸಜೇಶ್ ಕಿಸೆಯಲ್ಲಿರುವ ಗುರುತಿನ ಚೀಟಿ ಮೂಲಕ ಆತನ ಊರಿಗೆ ಮಾಹಿತಿ ನೀಡಿದ್ದರು. ಮಂಗಳೂರಿಗೆ ಬಂದ ಸಜೇಶ್ ತಂಗಿ ಮೃತದೇಹದ ಗುರುತು ಪತ್ತೆ ಹಚ್ಚಿ ಮಂಗಳೂರು ಗ್ರಾಮಾಂತರ ಪೊಲೀಸ್ ದೂರು ನೀಡುತ್ತಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎ.24 ರಂದು ಆರೋಪಿಗಳನ್ನು ಬಂಧಿಸುತ್ತಾರೆ‌.

Body:ಅಂದಿನ ಎಸ್ ಐ ಹರೀಶ್ ಭಾಗಶಃ ತನಿಖೆ ನಡೆಸಿದ್ದರು. ಬಳಿಕ ಎಸ್ ಐ ಪ್ರಮೋದ್ ಕುಮಾರ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುತ್ತಾರೆ‌. ಈ ಸಂದರ್ಭ 29 ಸಾಕ್ಷಿದಾರರನ್ನು ಹಾಗೂ 41 ಸೊತ್ತುಗಳನ್ನು ಪರಿಶೀಲನೆ ನಡೆಸಿ ಜೀವನ್ ಹಾಗೂ ದಿಲೇಶ್ ಮೇಲಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರನೇ ಜಿಲ್ಲಾ ಸತ್ರ ನ್ಯಾಯಾಲಯ ಐಪಿಸಿ ಸೆಕ್ಷನ್ 304ರ ಅನ್ವಯ ಮಾನವ ಹತ್ಯೆ ಮಾಡಲಾಗಿದೆ ಎಂದು ಪರಿಗಣಿಸಿ ಇಬ್ಬರು ಆರೋಪಿಗಳಿಗೂ 7 ವರ್ಷ ಕಠಿಣ ಸಜೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿದೆ. ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಸಾಮಾನ್ಯ ಸಜೆ ಅನುಭವಿಸಲು ನ್ಯಾಯಾಧೀಶೆ ಸಯಿದುನ್ನೀಸಾ ತೀರ್ಪು ನೀಡಿದ್ದಾರೆ.

ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಎಂ.ಕ್ರಾಸ್ತಾ ವಾದಿಸಿದ್ದರು.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.