ETV Bharat / city

ಮೋದಿ ಸರ್ಕಾರ ದೇಶವನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡ್ತಿದೆ: ಡಾ.ಶ್ರೀನಿವಾಸ ಕಕ್ಕಿಲ್ಲಾಯ - The Modi government selling it to the capitalists

ದೇಶದ ಇಂಚು ಇಂಚು ಜಾಗವನ್ನು ಬಂಡವಾಳ ಶಾಹಿ ಹಾಗೂ ವಿದೇಶಿ ಕಂಪೆನಿಗಳಿಗೆ ಇವತ್ತು ಸರ್ಕಾರ ಮಾರಾಟ ಮಾಡಲು ಯತ್ನಿಸುತ್ತಿದೆ ಎಂದು ಖ್ಯಾತ ವೈದ್ಯ ಹಾಗೂ ಚಿಂತಕ ಡಾ‌.ಶ್ರೀನಿವಾಸ ಕಕ್ಕಿಲ್ಲಾಯ ಅಭಿಪ್ರಾಯಪಟ್ಟರು.

ಮೋದಿ ಸರಕಾರ ದೇಶವನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುತ್ತಿದೆ : ಡಾ.ಶ್ರೀನಿವಾಸ ಕಕ್ಕಿಲ್ಲಾಯ
author img

By

Published : Oct 31, 2019, 9:59 PM IST

ಮಂಗಳೂರು: ದೇಶದ ಇಂಚು ಇಂಚು ಜಾಗವನ್ನು ಬಂಡವಾಳ ಶಾಹಿ ಹಾಗೂ ವಿದೇಶಿ ಕಂಪೆನಿಗಳಿಗೆ ಸರ್ಕಾರ ಮಾರಾಟ ಮಾಡಲು ಯತ್ನಿಸುತ್ತಿದೆ ಎಂದು ಖ್ಯಾತ ವೈದ್ಯ ಹಾಗೂ ಚಿಂತಕ ಡಾ‌.ಶ್ರೀನಿವಾಸ ಕಕ್ಕಿಲ್ಲಾಯ ಅಭಿಪ್ರಾಯಪಟ್ಟರು.

ಮೋದಿ ಸರಕಾರ ದೇಶವನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುತ್ತಿದೆ : ಡಾ.ಶ್ರೀನಿವಾಸ ಕಕ್ಕಿಲ್ಲಾಯ
ನಗರದ ಬಿಜೈನಲ್ಲಿರುವ ಕರ್ನಾಟಕ ಬ್ಯಾಂಕ್ ನೌಕರರ ಸಂಘದ ಸಭಾಂಗಣದಲ್ಲಿ ನಡೆದ ಎಐಟಿಯುಸಿ ಶತಮಾನದ ಸಮಾರಂಭದಲ್ಲಿ ಅವರು ಮಾತನಾಡುತ್ತಾ, ಸ್ವಾತಂತ್ರ್ಯ ಬಂದು ನಾಲ್ಕು ವರ್ಷ ನಾಲ್ಕು ತಿಂಗಳ ಕಾಲಾವಧಿಯಲ್ಲಿ ಅಂದಿನ ನೆಹರು ಸರ್ಕಾರ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಮಾಡಿತ್ತು. ಆದರೆ ಮೋದಿ ಸರ್ಕಾರ ಬಂದ ನಾಲ್ಕು ವರ್ಷ ಒಂಬತ್ತು ತಿಂಗಳಲ್ಲಿ ತನ್ನದೇ ರಾಜ್ಯದ ಉದ್ಯಮಿ ಅದಾನಿಗೆ ಅದನ್ನು ಮಾರಾಟ ಮಾಡಿದರು ಎಂದು ಕಿಡಿ ಕಾರಿದರು. ಇಂದು ಅದಾನಿ ಕಂಪೆನಿಯು ವಿಮಾನ ನಿಲ್ದಾಣದ ಒಂದೊಂದೇ ಕೆಲಸಗಳನ್ನು ನಿರ್ವಹಿಸುತ್ತಿದ್ದು, ಜೊತೆಗೆ ವಿಮಾನ ನಿಲ್ದಾಣದ ಹೆಸರನ್ನು ಮಂಗಳೂರು ಅಂತಾರಾಷ್ಟ್ರೀಯ ಅದಾನಿ ವಿಮಾನ ನಿಲ್ದಾಣ ಎಂದು ಬದಲಾವಣೆ ಮಾಡಲು ಹೊರಟಿದೆ. ನಮ್ಮ ದೇಶದ ಹಿರಿಯ ನಾಯಕರ ದೂರದೃಷ್ಟಿತ್ವದಿಂದ ಸ್ಥಾಪನೆಗೊಂಡ ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ, ವಿದ್ಯುಚ್ಛಕ್ತಿ ಕಂಪನಿ, ಬಿಎಸ್ಎನ್ಎಲ್ ಹಾಗು ಬ್ಯಾಂಕುಗಳನ್ನು ಒಂದೊಂದಾಗಿ ಈ ದೇಶದ ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವುದನ್ನು ನಾವಿಂದು ನೋಡುತ್ತಿದ್ದೇವೆ‌ ಎಂದು ಕಕ್ಕಿಲ್ಲಾಯ ಆತಂಕ ವ್ಯಕ್ತಪಡಿಸಿದ್ರು.

Intro:ಮಂಗಳೂರು: ನಮ್ಮ ಹಿರಿಯರು ಬ್ರಿಟಿಷರಿಂದ ವಿಮೋಚನೆಗಾಗಿ ಸ್ವಾತಂತ್ರ್ಯ ಹೋರಾಟ ನಡೆಸಿದರು. ಅದೇ ಕಾರ್ಮಿಕರ ಹಕ್ಕುಗಳಿಗಾಗಿಯೂ ಭಾರತ ಕಮ್ಯುನಿಸ್ಟ್ ಪಕ್ಷ, ಎಐಟಿಯುಸಿ ನೇತೃತ್ವದಲ್ಲಿ ದೇಶದ ದುಡಿಯುವ ಜನ ಹೋರಾಟ ಮಾಡಿದರು. ಅದೆಲ್ಲವನ್ನೂ ನಿರ್ನಾಮ ಮಾಡಿ ದೇಶದ ಇಂಚು ಇಂಚನ್ನು ಬಂಡವಾಳ ಶಾಹಿಗಳಿಗೆ ಹಾಗೂ ವಿದೇಶಿ ಕಂಪೆನಿಗಳಿಗೆ ಇವತ್ತು ದೇಶ ಪ್ರೇಮದ ಮೇಲೆ ಆಡಳಿತ ನಡೆಸುತ್ತಿರುವ ಸರಕಾರ ಮಾರಾಟ ಮಾಡಲು ಯತ್ನಿಸುತ್ತಿದೆ ಎಂದು ಖ್ಯಾತ ವೈದ್ಯ ಹಾಗೂ ಚಿಂತಕ ಡಾ‌.ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದರು.

ನಗರದ ಬಿಜೈನಲ್ಲಿರುವ ಕರ್ನಾಟಕ ಬ್ಯಾಂಕ್ ನೌಕರರ ಸಂಘದ ಸಭಾಂಗಣದಲ್ಲಿ ನಡೆದ ಎಐಟಿಯುಸಿ ಶತಮಾನದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿ, ಸ್ವಾತಂತ್ರ್ಯ ಬಂದು ನಾಲ್ಕು ವರ್ಷ ನಾಲ್ಕು ತಿಂಗಳಿನಲ್ಲಿ ನೆಹರೂ ಸರಕಾರ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಿತು. ಆದರೆ ಮೋದಿ ಸರಕಾರ ಬಂದ ನಾಲ್ಕು ವರ್ಷ ಒಂಬತ್ತು ತಿಂಗಳಲ್ಲಿ ತನ್ನ ರಾಜ್ಯದ ಅದಾನಿಗೆ ಅದನ್ನು ಮಾರಾಟ ಮಾಡಿದರು ಎಂದು ಕಿಡಿ ಕಾರಿದರು.

ಇಂದು ಅದಾನಿ ಕಂಪೆನಿಯು ವಿಮಾನ ನಿಲ್ದಾಣದ ಒಂದೊಂದೇ ಕೆಲಸಗಳನ್ನು ನಿರ್ವಹಿಸುತ್ತಿದ್ದು, ಜೊತೆಗೆ ವಿಮಾನ ನಿಲ್ದಾಣದ ಹೆಸರನ್ನು ಮಂಗಳೂರು ಅಂತಾರಾಷ್ಟ್ರೀಯ ಅದಾನಿ ವಿಮಾನ ನಿಲ್ದಾಣ ಎಂದು ಬದಲಾವಣೆ ಮಾಡಲು ಹೊರಟಿದೆ. ನಮ್ಮ ದೇಶದ ಹಿರಿಯ ನಾಯಕರ ದೂರದೃಷ್ಟಿತ್ವದಿಂದ ಸ್ಥಾಪನೆಗೊಂಡ ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ, ವಿದ್ಯುಚ್ಛಕ್ತಿ ಕಂಪೆನಿ, ಬಿಎಸ್ಎನ್ಎಲ್, ಬ್ಯಾಂಕುಗಳನ್ನು ಒಂದೊಂದಾಗಿ ಈ ದೇಶದ ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವುದನ್ನು ನಾವಿಂದು ನೋಡುತ್ತಿದ್ದೇವೆ‌.

Body:ಸರಕಾರಿ ಸ್ವಾಮ್ಯದ ಈ ಸಂಸ್ಥೆಗಳ ಮಾರಾಟವನ್ನು ತಡೆಗಟ್ಟಲು ಹೋರಾಟ ಮಾಡುತ್ತಿರುವ ಒಂದೇ ಒಂದು ಕಾರ್ಮಿಕ ಶಕ್ತಿ ಎಐಯುಟಿಸಿ ಸಂಘಟನೆ. ಒಂದು ಕಾಲದಲ್ಲಿ ದೇಶದ ನಂಬರ್ ಒನ್ ಕಾರ್ಮಿಕ ಸಂಘಟನೆಯಾಗಿದ್ದ ಎಐಯುಟಿಸಿ ಸಂಘಟನೆ ಈಗ ಹಿಂದೆ ಸರಿದು, ಈ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಯಾವುದೇ ಹೋರಾಟ ಮಾಡದ ಬ್ರಿಟಿಷರ ಏಜೆಂಟರಾಗಿ ಕೆಲಸ ಮಾಡಿದ ಆರ್ ಎಸ್ಎಸ್ ಹಾಗೂ ಬಿಜೆಪಿಯ ಸಂಘಟನೆಯಾದ ಬಿಎಂಎಸ್ ಸದಸ್ಯತ್ವದ ನೆಲೆಯಲ್ಲಿ‌ ನಂಬರ್ ಒನ್ ಸ್ಥಾನ ಕಾರ್ಮಿಕ ಸಂಘಟನೆಯಾಗಿದೆ. ತಮ್ಮ ಹಕ್ಕುಗಳಿಗೆ ಹೋರಾಟ ಮಾಡಬೇಕಾಗಿದ್ದ ಕಾರ್ಮಿಕರನ್ನು ಧರ್ಮ, ಜಾತಿ, ಮತದ ಹೆಸರಿನಲ್ಲಿ ಒಡೆದು ಬ್ರಿಟಿಷರ ಪರವಾಗಿ ಕೆಲಸ ಮಾಡುವ ಕಾರ್ಮಿಕ ಸಂಘಟನೆ ಇಂದು ಅತ್ಯಂತ ಹೆಚ್ಚು ಸದಸ್ಯತ್ವ ಹೊಂದಿದ್ದರೆ ಅದು ನಮ್ಮ ದೇಶದ ದಿಕ್ಕು ಯಾವ ಕೆಡೆಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಖೇದ ವ್ಯಕ್ತಪಡಿಸಿದರು.

ಈ ಸಂದರ್ಭ ಎಐಟಿಯುಸಿ ದ.ಕ‌. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಕೆ.ವಿ.ಭಟ್, ಎಐಟಿಯುಸಿ ರಾಜ್ಯ ನಾಯಕರು ಬಿ.ಅಮ್ಜದ್, ಎಐಟಿಯುಸಿ ಮಾಜಿ ಜಿಲ್ಲಾಧ್ಯಕ್ಷ ವಿ.ಕುಕ್ಯಾನ್ ಉಪಸ್ಥಿತರಿದ್ದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.