ETV Bharat / city

ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಸ್ಥಾನಗಳನ್ನ‌ ಗೆಲ್ಲುವ ಗುರಿ ಹೊಂದಿದೆ: ಡಿಸಿಎಂ ಅಶ್ವತ್ಥ್​ ನಾರಾಯಣ - manglore

ಬಿಜೆಪಿ ಜನರ ಭಾವನೆಗಳನ್ನು ಅರಿತು ನಮ್ಮತನ ರಾಷ್ಟ್ರೀಯತೆ, ಧರ್ಮ ವನ್ನು ಕಾಪಾಡಲು ಸುಧಾರಣೆ ಕೈಗೊಂಡಿದೆ. ಇದರಿಂದ ಜನರು ನಮ್ಮ ಕೈಹಿಡಿದಿದ್ದು, ಎಲ್ಲ ಹಂತದಲ್ಲಿಯೂ ಬಿಜೆಪಿಯನ್ನು ಗೆಲ್ಲಿಸುತ್ತಿದ್ದಾರೆ.‌ ಈ ಮೂಲಕ ಸುಭದ್ರವಾದ ಬಿಜೆಪಿ ಸರ್ಕಾರವನ್ನು ಕೇಂದ್ರದಲ್ಲಿಯೂ, ರಾಜ್ಯದಲ್ಲಿಯೂ ಕಾಣುವಂತಾಗಿದೆ ಎಂದು ಡಿಸಿಎಂ ಡಾ.ಅಶ್ವತ್ಥ್​ ನಾರಾಯಣ ಹೇಳಿದರು.

DCM Ashwathth Narayana
ಡಿಸಿಎಂ ಅಶ್ವತ್ಥ್​ ನಾರಾಯಣ
author img

By

Published : Nov 28, 2020, 2:17 PM IST

ಮಂಗಳೂರು: ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಸ್ಥಾನವನ್ನು ಗಳಿಸುವ ಗುರಿಯನ್ನು ಹೊಂದಿದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್​ ನಾರಾಯಣ ಹೇಳಿದರು.

ಡಿಸಿಎಂ ಅಶ್ವತ್ಥ್​ ನಾರಾಯಣ

ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಲೋಕಮಾನ್ಯ ತಿಲಕರು, ಮಹಾತ್ಮಾ ಗಾಂಧಿಯವರು ಸ್ವರಾಜ್ಯದ ಕಲ್ಪನೆ ಇಟ್ಟುಕೊಂಡಿದ್ದರು. ಆದರೆ, ಈ ಎಲ್ಲ ಕಲ್ಪನೆಗಳನ್ನು ಪ್ರತಿಪಕ್ಷವಾದ ಕಾಂಗ್ರೆಸ್ ನೆಪಕ್ಕೆ ಮಾತ್ರ ಹೇಳಿದ್ದು, ಎಲ್ಲೂ ಅನುಷ್ಠಾನ ಮಾಡಿಲ್ಲ. ಇಂದು ಅದರ ಸ್ಪೂರ್ತಿ ಉದ್ದೇಶವನ್ನು ಕಾರ್ಯರೂಪಕ್ಕೆ ತರುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ರಾಜ್ಯದ ಉದ್ದಗಲದಲ್ಲೂ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಆಯೋಜಿಸಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ಜನರ ಭಾವನೆ ಹಾಗೂ ಅವಶ್ಯಕತೆ ಗಳನ್ನು ಅರಿತುಕೊಂಡಿರಲಿಲ್ಲ. ಅವರದ್ದೇ ಅಜೆಂಡಾವನ್ನು ಜನರ ಮೇಲೆ ಹೇರುತ್ತಿದ್ದಾರೆ‌. ಈ ಮೂಲಕ ದೇಶ ಸಂಪೂರ್ಣವಾಗಿ ಹಿನ್ನಡೆ ಹೊಂದಿತ್ತು. ಬಿಜೆಪಿ ಜನರ ಭಾವನೆಗಳನ್ನು ಅರಿತು ನಮ್ಮತನ ರಾಷ್ಟ್ರೀಯತೆ, ಧರ್ಮ ವನ್ನು ಕಾಪಾಡಲು ಸುಧಾರಣೆ ಕೈಗೊಂಡಿದೆ. ಇದರಿಂದ ಜನರು ನಮ್ಮ ಕೈಹಿಡಿದಿದ್ದು, ಎಲ್ಲ ಹಂತದಲ್ಲಿಯೂ ಬಿಜೆಪಿಯನ್ನು ಗೆಲ್ಲಿಸುತ್ತಿದ್ದಾರೆ.‌ ಈ ಮೂಲಕ ಸುಭದ್ರವಾದ ಬಿಜೆಪಿ ಸರ್ಕಾರವನ್ನು ಕೇಂದ್ರದಲ್ಲಿಯೂ, ರಾಜ್ಯದಲ್ಲಿಯೂ ಕಾಣುವಂತಾಗಿದೆ ಎಂದರು.

34 ವರ್ಷಗಳ ಬಳಿಕ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಂಡಿದೆ. ಶಿಕ್ಷಣದಲ್ಲಿ ಪರಿಪೂರ್ಣತೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಾಣಲು ಸಾಧ್ಯ. ಈ ಮೂಲಕ ಮಗುವಿನ ಮೂರನೇ ವಯಸ್ಸಿನಿಂದಲೇ ಔಪಚಾರಿಕ ಶಿಕ್ಷಣವನ್ನು ನೀಡಲಾಗುತ್ತದೆ. ಮೂರನೇ ವಯಸ್ಸಿನಿಂದಲೇ ವ್ಯವಸ್ಥಿತ ಶಿಕ್ಷಣ ನೀಡಬೇಕೆಂಬ ಬೇಡಿಕೆಯನ್ನು ಬಹಳ ಹಿಂದೆಯೇ ಶಿಕ್ಷಣ ಚಿಂತಕರು ನೀಡಿದ್ದರು. ಕಲಿಕೆಯ ಸಾಮರ್ಥ್ಯ ಹೆಚ್ಚಿರುವುದು ಮೂರರಿಂದ ಆರನೇ ವಯಸ್ಸಿನಲ್ಲಿ. ಆದ್ದರಿಂದ ದೇಶದ ನಿಜವಾದ ಅಭಿವೃದ್ಧಿ ಶಿಕ್ಷಣದ ಮೂಲಕ ಆಗಬೇಕಾಗಿದೆ ಎಂದು ಡಾ.ಅಶ್ವತ್ಥ್​ ನಾರಾಯಣ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.