ಮಂಗಳೂರು: ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಬೈಕ್ ಚಲಾಯಿಸಿದ ಪರಿಣಾಮ ಬೈಕ್ನಿಂದ ಬಿದ್ದು ವ್ಯಕ್ತಿ ಗಾಯಗೊಂಡಿರುವ ವಿಡಿಯೋ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರಿನಲ್ಲಿ ಈ ಘಟನೆ ನಡೆದಿದೆ.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಕಂಠಪೂರ್ತಿ ಕುಡಿದಿದ್ದ ಬೈಕ್ ಸವಾರ ಅಡ್ಡಾದಿಡ್ಡಿ ಬೈಕ್ ಚಲಾಯಿಸುತ್ತಿದ್ದ. ಇದನ್ನು ನೋಡಿ ಹಿಂಬದಿ ತೆರಳುತ್ತಿದ್ದ ವಾಹನದವರು ವಿಡಿಯೋ ಮಾಡಿದ್ದಾರೆ.
ಅರಂಬೂರು ಸಮೀಪ ನಿಯಂತ್ರಣ ತಪ್ಪಿ ಬೈಕ್ ಸವಾರ ರಸ್ತೆಗೆ ಬಿದ್ದಿದ್ದಾನೆ. ಘಟನೆಯಲ್ಲಿ ಗಾಯಗೊಂಡ ಆತನನ್ನು ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಿದ್ದಾರೆ.