ETV Bharat / city

ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಸರಬರಾಜು: ಅಪರಾಧಿಗೆ ಆರು ತಿಂಗಳು ಕಠಿಣ ಸಜೆ, ದಂಡ - ಗಾಂಜಾ ಸರಬರಾಜು ಅಪರಾಧಿಗೆ ಆರು ತಿಂಗಳು ಕಠಿಣ ಸಜೆ, ದಂಡ

ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಸರಬರಾಜು ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಅಶ್ಫಾಕ್​ಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರು ತಿಂಗಳು ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

court
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
author img

By

Published : Dec 30, 2019, 4:22 PM IST

ಮಂಗಳೂರು: ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಸರಬರಾಜು ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಯುವಕನೋರ್ವನಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರು ತಿಂಗಳು ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

ನಗರದ ಕಸ್ಬಾ ಬೇಂಗ್ರೆಯ ನಿವಾಸಿ ಅಶ್ಫಾಕ್(21) ಶಿಕ್ಷೆಗೊಳಗಾದ ಅಪರಾಧಿ. ಅಶ್ಫಾಕ್ 2016 ಏಪ್ರಿಲ್ 4ರಂದು ಬೆಳಗ್ಗೆ ಮಂಗಳೂರು ಸಬ್ ಜೈಲಿಗೆ ನಯೀಮ್ ಹಾಗೂ ಚಪ್ಪೆ ತಣ್ಣೀರು ರಹೀಂ ಎಂಬ ಇಬ್ಬರು ಕೈದಿಗಳನ್ನು ಭೇಟಿ ಮಾಡಲು ಬಂದ ಸಂದರ್ಭದಲ್ಲಿ ಆತ ಪ್ಲಾಸ್ಟಿಕ್​ ಕವರ್​​ನಲ್ಲಿ ಮುಚ್ಚಿಟ್ಟಿಕೊಂಡಿದ್ದ 50 ಗ್ರಾಂ ಗಾಂಜಾ ಪತ್ತೆಯಾಗಿತ್ತು. ಜೈಲಿನ ಆಗಿನ ಅಸಿಸ್ಟೆಂಟ್ ಪೊಲೀಸ್ ಅಮ್ಮಣ್ಣಿ, ಆತನನ್ನು ತಕ್ಷಣ ಬಂಧಿಸಿ, ಗಾಂಜಾ ವಶಪಡಿಸಿಕೊಂಡಿದ್ದರು.

ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಸಬ್​ಇನ್ಸ್​ಪೆಕ್ಟರ್​ ಎ.ಕೆ.ರಾಜೇಶ್ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಪ್ರಕರಣವನ್ನು ಕೈಗೆತ್ತಿಕೊಂಡ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 8 ಮಂದಿ ಸಾಕ್ಷಿಗಳ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎನ್​ಡಿಪಿಎಸ್ ಕಾಯ್ದೆಯ ಪ್ರಕಾರ ಆರು ತಿಂಗಳು ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳ ಕಾಲ ಕಾರಾಗೃಹ ವಾಸ, ಸೆಕ್ಷನ್ 424 (ನಿಷೇಧಿತ ವಸ್ತು ಸಾಗಾಟ) ರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 6 ತಿಂಗಳು ಸೆರೆವಾಸ, 5 ಸಾವಿರ ರೂ. ದಂಡ, ಈ ದಂಡವನ್ನು ತೆರಲು ತಪ್ಪಿದ್ದಲ್ಲಿ ಮತ್ತೆ ಒಂದು ತಿಂಗಳು ಕಾರಾಗೃಹ ವಾಸ ವಿಧಿಸಿ ನ್ಯಾಯಾಧೀಶೆ ಅಶ್ವಿನಿ ಕೋರೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ನ್ಯಾಯವಾದಿ ಬಿ.ಮೋಹನ್ ಕುಮಾರ್ ವಾದಿಸಿದ್ದಾರೆ.

Intro:ಮಂಗಳೂರು: ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಸರಬರಾಜು ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಯುವಕನೋರ್ವನಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರು ತಿಂಗಳು ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ನಗರದ ಕಸ್ಬಾ ಬೇಂಗ್ರೆಯ ನಿವಾಸಿ ಅಶ್ಫಾಕ್(21) ಶಿಕ್ಷೆಗೊಳಗಾದ ಅಪರಾಧಿ.

ಅಶ್ಫಾಕ್ 2016 ಎಪ್ರಿಲ್ 4ರಂದು ಬೆಳಗ್ಗೆ ಮಂಗಳೂರು ಸಬ್ ಜೈಲಿಗೆ ನಯೀಮ್ ಹಾಗೂ ಚಪ್ಪೆ ತಣ್ಣೀರು ರಹೀಂ ಎಂಬಿಬ್ಬರು ಕೈದಿಗಳನ್ನು ಭೇಟಿ ಮಾಡಲು ಬಂದಿರುತ್ತಾನೆ. ಈ ಸಂದರ್ಭ ಆತನಲ್ಲಿ ಪ್ಲಾಸ್ಟಿಕ್ ನಲ್ಲಿ ಮುಚ್ಚಿಟ್ಟಿರುವ 50 ಗ್ರಾಂ ಗಾಂಜಾ ಪತ್ತೆಯಾಗುತ್ತದೆ‌. ಜೈಲಿನ ಆಗಿನ ಅಸಿಸ್ಟೆಂಟ್ ಪೊಲೀಸ್ ಅಮ್ಮಣ್ಣಿ ಆತನನ್ನು ತಕ್ಷಣ ಬಂಧಿಸಿ, ಗಾಂಜಾವನ್ನು ವಶಪಡಿಸಿಕೊಳ್ಳುತ್ತಾರೆ‌.

Body:ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಎ.ಕೆ.ರಾಜೇಶ್ ಚಾರ್ಜ್ ಶೀಟ್ ಸಲ್ಲಿಸುತ್ತಾರೆ. ಈ ಪ್ರಕರಣವನ್ನು ಕೈಗೆತ್ತಿಕೊಂಡ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 8ಮಂದಿ ಸಾಕ್ಷಿದಾರರನ್ನು ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಅಶ್ವಿನಿ ಕೋರೆ ಎನ್ ಡಿಪಿಎಸ್ ಕಾಯ್ದೆಯ ಪ್ರಕಾರ ಆರು ತಿಂಗಳು ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳ ಕಾಲ ಕಾರಾಗೃಹ ವಾಸ. ಸೆಕ್ಷನ್ 424 (ನಿಷೇಧಿತ ವಸ್ತು ಸಾಗಾಟ) ರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 6ತಿಂಗಳು ಸೆರೆವಾಸ 5 ಸಾವಿರ ರೂ. ದಂಡ. ಈ ದಂಡವನ್ನು ತೆರಲು ತಪ್ಪಿದ್ದಲ್ಲಿ ಮತ್ತೆ ಒಂದು ತಿಂಗಳು ಕಾರಾಗೃಹ ವಾಸ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಸರಕಾರಿ ನ್ಯಾಯವಾದಿ ಬಿ.ಮೋಹನ್ ಕುಮಾರ್ ವಾದಿಸಿದ್ದಾರೆ.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.