ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಯುವಕನಿಗೆ ಅಂದಾಜು 23 ಕೋಟಿ ರೂ. ಮೌಲ್ಯದ ಅಬುಧಾಬಿ ಲಾಟರಿ ಒಲಿದು ಬಂದಿದೆ.
ಸುಳ್ಯದ ಜಟ್ಟಿಪಳ್ಳದ ಮುಹಮ್ಮದ್ ಫಯಾಜ್ ಲಾಟರಿ ವಿಜೇತ. ಇವರು ಅಬುಧಾಬಿಯ ಡ್ರೀಮ್ ಮಿಲೇನಿಯಂ ಸೀರೀಸ್- 208 ಲಾಟರಿಯಲ್ಲಿ 12 ಮಿಲಿಯನ್ ದಿರ್ ಹಾಂ (ಅಂದಾಜು 23 ಕೋಟಿ) ಲಾಟರಿಯ ಪ್ರಥಮ ಬಹುಮಾನ ಪಡೆದಿದ್ದಾರೆ.
ಮುಂಬೈನಲ್ಲಿ ಉದ್ಯೋಗದಲ್ಲಿರುವ ಫಯಾಜ್, ಕಳೆದ ಆರು ತಿಂಗಳಿನಿಂದ ದೊಡ್ಡ ಮೊತ್ತದ ಅಬುದಾಬಿ ಲಾಟರಿ ಟಿಕೆಟ್ಗಳನ್ನು ಖರೀದಿಸುತ್ತಿದ್ದ ಬಂದಿದ್ದರು. ಇದೀಗ ಪ್ರಥಮ ಬಹುಮಾನದ ರೂಪದಲ್ಲಿ ಅದೃಷ್ಟ ಒಲಿದು ಬಂದಿದೆ.