ETV Bharat / city

ನಾನು ಮೋದಿ ವಿರೋಧಿಯಲ್ಲ, ಅವರ ನೀತಿಗೆ ವಿರೋಧಿ.. ಡಾ. ಸುಬ್ರಮಣಿಯನ್‌ ಸ್ವಾಮಿ - ಮಂಗಳೂರಿನಲ್ಲಿ ಸುಬ್ರಮಣಿಯನ್‌ ಸ್ವಾಮಿ ಹೇಳಿಕೆ

ಕೊರೊನಾದ ಹೊರತಾಗಿಯೂ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ವಿಫುಲ ಅವಕಾಶಗಳಿದ್ದರೂ ಸರ್ಕಾರ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಇದಕ್ಕೆ ಸರ್ಕಾರದ ತಪ್ಪು ನೀತಿಗಳು ಕಾರಣವಾಗಿವೆ. ಇದನ್ನು ಸರಿಪಡಿಸಿಕೊಳ್ಳಬೇಕು ಎಂದರು. ಮೋದಿ ನೀತಿಯ ಬಗ್ಗೆ ಅಸಮಾಧಾನ ಇದೆಯೇ ಹೊರತು ಬಿಜೆಪಿ ಬಗ್ಗೆ ಅಲ್ಲ. ಬಿಜೆಪಿಯನ್ನು ತೊರೆಯುವುದಿಲ್ಲ..

Subramanian Swamy
ಬಿಜೆಪಿ ಹಿರಿಯ ನಾಯಕ ಡಾ. ಸುಬ್ರಮಣಿಯನ್‌ ಸ್ವಾಮಿ
author img

By

Published : Dec 8, 2021, 2:34 PM IST

Updated : Dec 8, 2021, 2:43 PM IST

ಮಂಗಳೂರು(ದಕ್ಷಿಣ ಕನ್ನಡ) : ಬಿಜೆಪಿ ಪಕ್ಷವು ಹಿಂದುತ್ವ, ಆರ್ಥಿಕ, ವಿದೇಶಾಂಗ ನೀತಿಗಳು ಸೇರಿದಂತೆ ತನ್ನ ಮೂಲ ಸಿದ್ಧಾಂತದಿಂದ ಹಿಂದೆ ಸರಿಯುತ್ತಿದೆ.

ಇದನ್ನು ಸರಿಪಡಿಸಬೇಕು ಎಂಬುದು ನನ್ನ ಪ್ರತಿಪಾದನೆಯಾಗಿದೆಯೇ ಹೊರತು, ನಾನು ಪ್ರಧಾನಿ ನರೇಂದ್ರ ಮೋದಿ ಅವರ ವಿರೋಧಿಯಲ್ಲ. ಅವರು ಅನುಸರಿಸುತ್ತಿರುವ ನೀತಿಯನ್ನು ಮಾತ್ರ ವಿರೋಧಿಸುತ್ತಿದ್ದೇನೆ ಎಂದು ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್‌ ಸ್ವಾಮಿ ಹೇಳಿದರು.

ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್‌ ಸ್ವಾಮಿ

ಮಂಗಳೂರಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ಚೀನಾದ ಆಕ್ರಮಣಕಾರಿ ನೀತಿಯ ವಿರುದ್ಧ ನರೇಂದ್ರ ಮೋದಿ ಸರ್ಕಾರದ ದುರ್ಬಲ ನಡೆಗೆ ತೀವ್ರ ಅಸಮಾಧಾನವಿದೆ.

ರಾಮಸೇತು ಒಡೆಯುವುದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದು, ಹೆರಿಟೇಜ್‌ ಆಗಿ ಪರಿಗಣಿಸುವ ಕಾರ್ಯವನ್ನು ಮೋದಿ ಸರ್ಕಾರ ಮಾಡಿಲ್ಲ. ಈ ಕುರಿತ ಅಸಮಾಧಾನವನ್ನು ಪತ್ರಗಳ ಮೂಲಕ ವ್ಯಕ್ತಪಡಿಸಿದ್ದೇನೆ ಎಂದರು.

ಕೊರೊನಾದ ಹೊರತಾಗಿಯೂ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ವಿಫುಲ ಅವಕಾಶಗಳಿದ್ದರೂ ಸರ್ಕಾರ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಇದಕ್ಕೆ ಸರ್ಕಾರದ ತಪ್ಪು ನೀತಿಗಳು ಕಾರಣವಾಗಿವೆ.

ಇದನ್ನು ಸರಿಪಡಿಸಿಕೊಳ್ಳಬೇಕು ಎಂದರು. ಇನ್ನೂ ''ಮೋದಿ ನೀತಿಯ ಬಗ್ಗೆ ಅಸಮಾಧಾನ ಇದೆಯೇ ಹೊರತು ಬಿಜೆಪಿ ಬಗ್ಗೆ ಅಲ್ಲ. ಬಿಜೆಪಿಯನ್ನು ತೊರೆಯುವುದಿಲ್ಲ'' ಎಂದರು.

ಇದನ್ನೂ ಓದಿ: ಕ್ರಿಕೆಟ್ ಆಡಿ ರಿಲ್ಯಾಕ್ಸ್ ಆದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್

ಮಮತಾ ಬ್ಯಾನರ್ಜಿ ನನ್ನ ಹಳೆಯ ಸ್ನೇಹಿತೆಯಾಗಿದ್ದು, ಅವರನ್ನು ಭೇಟಿ ಮಾಡಿರುವುದಕ್ಕೆ ಯಾವುದೇ ರಾಜಕೀಯ ಅರ್ಥ ಕಲ್ಪಿಸುವುದು ಬೇಡ ಎಂದರು.

Last Updated : Dec 8, 2021, 2:43 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.