ETV Bharat / city

ಮಂಗಳೂರಿನಲ್ಲಿ ಖಾಸಗಿ ಬಸ್‌ಗೆ ಕಲ್ಲೆಸೆತ : ಮೂರು ದಿನದ ಅಂತರದಲ್ಲಿ ಎರಡು ಪ್ರಕರಣ - dakshina kannada news

ಶನಿವಾರದಂದು ಇದೇ ಸ್ಥಳದಲ್ಲಿ ನಗರ ಸಾರಿಗೆ ಬಸ್​ಗೆ ಕಲ್ಲೆಸೆಯಲಾಗಿತ್ತು. ಮೂರು ದಿನದ ಅಂತರದಲ್ಲಿ ನಡೆಯುತ್ತಿರುವ ಎರಡನೇ ಘಟನೆ ಇದಾಗಿದೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

stone-throw-on-private-bus-in-mangalore
ಖಾಸಗಿ ಬಸ್ಸಿಗೆ ಕಲ್ಲೆಸೆತ
author img

By

Published : Nov 15, 2021, 5:12 PM IST

ಮಂಗಳೂರು : ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್​​ ಮೇಲೆ ಮಂಗಳೂರಿನ ಕೊಟ್ಟಾರಚೌಕಿಯಲ್ಲಿ ದುಷ್ಕರ್ಮಿಗಳು ಕಲ್ಲೆಸೆದು (stone throw on bus) ಪರಾರಿಯಾಗಿದ್ದಾರೆ. ಬಸ್​​ನ​ ಸಂಚಾರ ಸಮಯ ವಿಚಾರಕ್ಕೆ ಸಂಬಂಧಿಸಿ ಈ ಘಟನೆ ಜರುಗಿರಬಹುದು ಎಂದು ಹೇಳಲಾಗಿದೆ.

ಮಂಗಳೂರಿನಲ್ಲಿ ಖಾಸಗಿ ಬಸ್‌ಗೆ ಕಲ್ಲೆಸೆತ..

ಎಕೆಎಂಎಸ್ ಎಕ್ಸ್‌ಪ್ರೆಸ್ ಹೆಸರಿನ ಬಸ್ (stone throw on private bus in mangalore) ಉಡುಪಿಯಿಂದ ಮಂಗಳೂರಿಗೆ ಬರುತ್ತಿತ್ತು. ಕೊಟ್ಟಾರದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಬಸ್​​ನ ಗಾಜಿಗೆ ಕಲ್ಲೆಸೆದು ಪರಾರಿಯಾಗಿದ್ದಾರೆ. ಕಲ್ಲೆಸೆತದಿಂದ ಬಸ್ಸಿನ ಎದುರಿನ ಗಾಜಿಗೆ ಹಾನಿಯಾಗಿದೆ.

ಶನಿವಾರದಂದು ಇದೇ ಸ್ಥಳದಲ್ಲಿ ನಗರ ಸಾರಿಗೆ ಬಸ್​ಗೆ ಕಲ್ಲೆಸೆಯಲಾಗಿತ್ತು. ಮೂರು ದಿನದ ಅಂತರದಲ್ಲಿ ನಡೆಯುತ್ತಿರುವ ಎರಡನೇ ಘಟನೆ ಇದಾಗಿದೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.