ಮಂಗಳೂರು: ನವರಾತ್ರಿ ಮಹೋತ್ಸವದ ಕೊನೆಯ ದಿನವಾದ ಇಂದಿನ ದಿನವನ್ನು ವಿಜಯದಶಮಿ ಅಥವಾ ವಿದ್ಯಾದಶಮಿ ಎಂದು ಆಚರಣೆ ಮಾಡಲಾಗುತ್ತದೆ. ಈ ಮೂಲಕ ಸಣ್ಣ ಮಕ್ಕಳ ವಿದ್ಯಾರಂಭ ಪೂಜೆಯನ್ನು ನೆರವೇರಿಸಲಾಗುತ್ತದೆ.
ಅದರಂತೆ ಇಂದು ಮಂಗಳೂರಿನ ಮಂಗಳಾದೇವಿ ದೇವಾಲಯದಲ್ಲಿ ನೂರಾರು ಮಕ್ಕಳು, ಪೋಷಕರಿಂದ ವಿದ್ಯಾರಂಭ ಪೂಜೆಯನ್ನು ನೆರವೇರಿಸಲಾಯಿತು.
ಸಣ್ಣ ಮಕ್ಕಳು ತಮ್ಮ ಪೋಷಕರೊಂದಿಗೆ ಕುಳಿತು ಶಿಕ್ಷಣಕ್ಕಾಗಿ ಓಂ ನಾಮ, ಶ್ರೀಕಾರವನ್ನು ಬರೆಯುವ ಮೂಲಕ ಅಕ್ಷರಭ್ಯಾಸಕ್ಕೆ ನಾಂದಿ ಹಾಡಿದರು. ಪ್ರತಿ ವರ್ಷದಂತೆ ಈ ಬಾರಿಯೂ ಮಂಗಳಾದೇವಿ ದೇವಸ್ಥಾನದಲ್ಲಿ ನೂರಾರು ಮಕ್ಕಳು ವಿದ್ಯಾರಂಭ ಸೇವೆಯನ್ನು ನೆರವೇರಿಸಿದರು. ಈ ಮೂಲಕ ಅವರಿಗೆ ಶ್ರೀದೇವಿಯು ಉತ್ತಮ ಜ್ಞಾನವನ್ನು ಅನುಗ್ರಹಿಸಲಿ ಎಂಬ ಸದಾಶಯ ಇಲ್ಲಿದೆ.
ಇದನ್ನೂ ಓದಿ: 'ಕೋಟಿಗೊಬ್ಬ 3' ಗ್ರ್ಯಾಂಡ್ ರಿಲೀಸ್: ಕಲಬುರಗಿಯಲ್ಲಿ ಕಿಚ್ಚನ ಕಟೌಟ್ಗೆ ಕ್ಷೀರಾಭಿಷೇಕ