ಬೆಳ್ತಂಗಡಿ (ದಕ್ಷಿಣ ಕನ್ನಡ): ನಗರದಲ್ಲಿ ಶಂಕಿತ ಡೆಂಗ್ಯೂ ಜ್ವರಕ್ಕೆ ವ್ಯಕ್ತಿಯೋರ್ವರು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.
ಕೇಳ್ತಾಜೆ ನಿವಾಸಿ ಸಂಜೀವ ಗೌಡ(48) ಶಂಕಿತ ಡೆಂಗ್ಯೂ ಜ್ವರದಿಂದ ಬಳಲಿ ಜೂ.23ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಇವರು, ಸ್ಥಳೀಯ ಖಾಸಗಿ ವೈದ್ಯರಲ್ಲಿಗೆ ಜೂ.23ರಂದು ಚಿಕಿತ್ಸೆಗೆ ಹೋದಾಗ ಆ ವೈದ್ಯರು ಮಂಗಳೂರಿಗೆ ಕಳುಹಿಸಿದ್ದರು. ಆದರೆ, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದ್ದಾರೆ.
ಕನ್ಯಾಡಿ ಗ್ರಾಮದ ಕೇಳ್ತಾಜೆ, ನಾವೂರು ಹಾಗೂ ಇಂದಬೆಟ್ಟು ಗ್ರಾಮದಲ್ಲಿ ಡೆಂಗ್ಯೂ ಜ್ವರದಿಂದ ಆನೇಕ ಮಂದಿ ಬಳಲುತ್ತಿದ್ದು, ಆರೋಗ್ಯ ಇಲಾಖೆ ಇದರ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.