ಮಂಗಳೂರು(ದಕ್ಷಿಣಕನ್ನಡ) : ಬಿಜೆಪಿ ಮುಖಂಡರಾಗಿರುವ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅವರನ್ನು ರಾಜ್ಯ ಸರ್ಕಾರ ಪದಚ್ಯುತಿಗೊಳಿಸಿ ಆದೇಶ ಹೊರಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅವರನ್ನು ಪದಚ್ಯುತಿಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಆರ್ ರಮೇಶ್ ಅವರು ಆದೇಶಿಸಿದ್ದಾರೆ.

ರಹೀಂ ಉಚ್ಚಿಲ್ ಅವರನ್ನು ಅಕಾಡೆಮಿಯ ಅಧ್ಯಕ್ಷ ಸ್ಥಾನದಿಂದ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಿದೆ ಎಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ರಹೀಂ ಉಚ್ಚಿಲ್ ಅವರು, ಈ ಬಗ್ಗೆ ನನಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ಮಾಹಿತಿ ಸಿಕ್ಕಿದೆ ಎಂದರು.
ಇದನ್ನೂ ಓದಿ: ಚಂದ್ರು ಕೊಲೆ ಕೇಸ್.. ಇದೊಂದು ನೀಚ ಕೃತ್ಯ.. ಪ್ರಮೋದ್ ಮುತಾಲಿಕ್
ಪದಚ್ಯುತಿಗೊಳಿಸಿರುವ ವಿಷಯ ಸತ್ಯ. ಆದರೆ, ನಾನು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಸರ್ಕಾರದ ಪರವಾಗಿಯೇ ನನ್ನ ವಾದ ಮಂಡಿಸುತ್ತಿದ್ದೆ. ನನ್ನನ್ನು ಪದಚ್ಯುತಗೊಳಿಸಲು ಕಾರಣ ಏನು ಎಂಬುದು ನನಗೆ ತಿಳಿದಿಲ್ಲ. ಅದನ್ನು ತಿಳಿದುಕೊಳ್ಳಲು ಕುತೂಹಲಗೊಂಡಿದ್ದೇನೆ ಎಂದು ತಿಳಿಸಿದರು.