ಮಂಗಳೂರು: ತೆಂಗಿನಮರದಿಂದ ಕಾಯಿ ಕೀಳುವ ವೇಳೆ ಕಣಜದ ಹುಳು ದಾಳಿ ಮಾಡಿದ ಪರಿಣಾಮ ಎಂಸಿಎಫ್‌ನ ಎಸಿ ಮೆಕ್ಯಾನಿಕ್ ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಎಡಪದವಿನ ಪಟ್ಲಚ್ಚಿಲ್‌ನ ನಿವಾಸಿ ಕೇಶವ ಯಾನೆ ಕಿಟ್ಟ (24) ಮೃತಪಟ್ಟವರು. ಇವರು ಎಂಸಿಎಫ್ನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ತೆಂಗಿನ ಮರಗಳ ಕಾಯಿ ಕೀಳಲು ಇತ್ತೀಚೆಗೆ ಖರೀದಿಸಿದ ಯಂತ್ರ ಬಳಸಿಕೊಂಡು ಮರ ಏರಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮರದಲ್ಲಿದ್ದ ಕಣಜ ಹುಳುವಿನ ಗೂಡು ಕೇಶವ ಅವರ ತಲೆಗೆ ತಾಗಿದಾಗ ಹುಳುಗಳು ಏಕಾಏಕಿ ದಾಳಿ ಮಾಡಿವೆ.
ಕಣಜ ಹುಳುಗಳ ದಾಳಿಯಿಂದ ಕೇಶವ ಅವರ ಮೈಮೇಲೆ 70ಕ್ಕೂ ಅಧಿಕ ಕಡೆ ಗಾಯಗಳಾಗಿದೆ. ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಕೂಡಾ ಚಿಕಿತ್ಸೆ ಫಲಕಾರಿಯಾಗದೇ ಕೇಶವ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಶೀಲ ಶಂಕಿಸಿ, ಚಾಕುವಿನಿಂದ ಹೆಂಡತಿ ಕತ್ತು ಸೀಳಿದ ಗಂಡ..!