ETV Bharat / city

'ಇನ್ನೊಮ್ಮೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಬಂದರೆ ನಾಲಿಗೆ ಕಿತ್ತು ಹಾಕುತ್ತೇವೆ'

author img

By

Published : Jan 11, 2021, 8:28 PM IST

ಉಜಿರೆಯಲ್ಲಿ ನಡೆದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗೆ ಬಿಜೆಪಿ ಖಂಡಿಸಿದೆ. ಆದರೆ, ಅದನ್ನು ಕಾಂಗ್ರೆಸ್ ಖಂಡಿಸಲು ತಯಾರಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​​ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

Rural Development and Panchayat Raj Minister KS Eshwarappa
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​​ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ

ಮಂಗಳೂರು: ಉಜಿರೆಯಲ್ಲಿ ಎಸ್​​ಡಿಪಿಐ ಕಾರ್ಯಕರ್ತರು ವಿಜಯೋತ್ಸವದ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಅವರು ಇನ್ನೊಮ್ಮೆ ಆ ರೀತಿ ಘೋಷಣೆ ಕೂಗಿದರೆ ನಮ್ಮ ದೇಶಭಕ್ತರು ಅವರ ನಾಲಿಗೆ ಕಿತ್ತು ಹಾಕಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​​ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದರು.

ಇದನ್ನೂ ಓದಿ: ಉಪನ್ಯಾಸಕರಿಗೆ ಕೊರೊನಾ: ಬಜ್ಪೆ ಪದವಿ ಪೂರ್ವ ಕಾಲೇಜು ಬಂದ್

ದ.ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಬಿಜೆಪಿ ಜನಸೇವಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಜಿರೆಯಲ್ಲಿ ನಡೆದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗೆ ಬಿಜೆಪಿ ಖಂಡಿಸಿದೆ. ಆದರೆ, ಅದನ್ನು ಕಾಂಗ್ರೆಸ್ ಖಂಡಿಸಲು ತಯಾರಿಲ್ಲ. ಎಸ್​ಡಿಪಿಐ ಕಾರ್ಯಕರ್ತರೊಂದಿಗೆ ಕಾಂಗ್ರೆಸ್​ ಹೊಂದಾಣಿಕೆ ಮಾಡಿಕೊಂಡಿದೆ ಎಂದರು.

ಪಾಕಿಸ್ತಾನ ಘೋಷಣೆ ಮಾಡಿದ್ದನ್ನು ಖಂಡಿಸಲಾಗದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್​​.ಡಿ.ಕುಮಾರಸ್ವಾಮಿ ಅವರು 2023ಕ್ಕೆ ಮತ್ತೆ ಸಿಎಂ ಆಗುತ್ತೇನೆ ಎಂದು ಹೇಳುತ್ತಾರೆ. ಅವರಿಗೆ ನಾಚಿಕೆಯಾಗಬೇಕು. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅವರ ಹಣೆಬರಹ ಗೊತ್ತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಗ್ರಾಮ ಪಂಚಾಯತ್ ಸದಸ್ಯರಿಗೆ ಈಗ ನೀಡಲಾಗುವ ₹1,000 ಗೌರವ ಧನವನ್ನು ₹2000ಕ್ಕೆ ಹೆಚ್ಚಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಅಂಗಾರ, ವೇದವ್ಯಾಸ್ ಕಾಮತ್, ರಾಜೇಶ್ ನಾಯಕ್, ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.