ಮಂಗಳೂರು: ಕತಾರ್ನ ದೋಹದಿಂದ ಮಂಗಳೂರಿಗೆ ಹೊರಟ ವಿಮಾನದಲ್ಲಿ ಮಂಗಳೂರಿನ ಪ್ರಯಾಣಿಕರಿಲ್ಲದ ಕಾರಣ ವಿಮಾನ ಬೆಂಗಳೂರಿನಿಂದ ಪ್ರಯಾಣ ಮುಂದುವರೆಸಿಲ್ಲ.
ಶುಕ್ರವಾರ ಸಂಜೆ ಕತಾರ್ ರಾಜಧಾನಿ ದೋಹದಿಂದ ಹೊರಟ ವಿಮಾನ ಬೆಂಗಳೂರಿನ ಮೂಲಕ ಮಂಗಳೂರಿಗೆ ತಲುಪಬೇಕಿತ್ತು. ಆದರೆ ಈ ವಿಮಾನದಲ್ಲಿ ಮಂಗಳೂರು ಪ್ರಯಾಣಿಕರಿಲ್ಲದ ಕಾರಣ ಬೆಂಗಳೂರಿನಿಂದ ಪ್ರಯಾಣ ಬೆಳೆಸಿಲ್ಲ.
ಮಂಗಳೂರಿಗೆ ಮೇ 12 ಮತ್ತು 18ರಂದು ದುಬೈನಿಂದ ಹಾಗೂ ಮೇ 20ರಂದು ಮಸ್ಕತ್ನಿಂದ ವಿಮಾನ ಆಗಮಿಸಿತ್ತು. ಶುಕ್ರವಾರ ಕತಾರ್ನ ದೋಹದಿಂದ ಹೊರಟ ವಿಮಾನದಲ್ಲಿ ಮಂಗಳೂರು ಪ್ರಯಾಣಿಕರು ಬರುವ ನಿರೀಕ್ಷೆಯಿತ್ತು.