ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ನೆಪದಲ್ಲಿ ನಗರದ ರಾಷ್ಟ್ರಕವಿ ಗೋವಿಂದ ಪೈ ಸರ್ಕಲ್ ಅನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಹಿಂದೆ ಇಲ್ಲಿ ಮಂಗಳೂರಿನ ಪ್ರಮುಖ ಪತ್ರಿಕೆ ನವಭಾರತ ಪತ್ರಿಕೆಯ ಮುದ್ರಣಾಲಯ ಇದ್ದಿದ್ದ ಕಾರಣ ಈ ಸರ್ಕಲ್ಗೆ ನವಭಾರತ ಸರ್ಕಲ್ ಹೆಸರಿತ್ತು. ಆ ಬಳಿಕ ಈ ಸರ್ಕಲ್ಗೆ ಹಿರಿಯ ಸಾಹಿತಿ, ಸಂಶೋಧಕ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ನೆನಪಿಗಾಗಿ ಗೋವಿಂದ ಪೈ ವೃತ್ತ ಎಂದು ನಾಮಕರಣ ಮಾಡಲಾಗಿತ್ತು.
ಇದೀಗ ಈ ವೃತ್ತವನ್ನು ಯಾವುದೇ ಸುಳಿವು ಸೂಚನೆ ಇಲ್ಲದೆ ಏಕಾಏಕಿ ಕೆಡವಿ ಹಾಕಿರೋದು, ಸಾಮಾಜಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪಾಲಿಕೆಯು ಇದೊಂದು ಅವೈಜ್ಞಾನಿಕ ಸರ್ಕಲ್ ಆಗಿದ್ದು, ಇದೀಗ ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಸರ್ಕಲ್ ಅನ್ನು ಆ ಸ್ಥಳದಿಂದ ತೆಗೆದು ಸೆಂಟರ್ ಪಾಯಿಂಟ್ ನಲ್ಲಿ ಮತ್ತೆ ಸರ್ಕಲ್ ಮಾಡಲಾಗುತ್ತದೆ ಎಂದು ಹೇಳುತ್ತಿದೆ.
ಮಂಗಳೂರಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸರ್ಕಲ್ ರಾತ್ರೋರಾತ್ರಿ ನೆಲಸಮ
ಗೋವಿಂದ ಪೈ ವೃತ್ತವನ್ನು ಯಾವುದೇ ಸುಳಿವು ಸೂಚನೆ ಇಲ್ಲದೆ ಏಕಾಏಕಿ ಕೆಡವಿ ಹಾಕಿರೋದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.