ETV Bharat / city

ವಾಟ್ಸ್​​​​​ಆ್ಯಪ್ ಗ್ರೂಪ್​​ನಲ್ಲಿ ದ.ಕ. ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ - Dakshina Kannada DC

ವಾಟ್ಸ್ಆ್ಯಪ್ ಗ್ರೂಪ್​ವೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಸ್ಟೇಟಸ್ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Dakshina Kannada DC Sindhu B Roopesh
ಸಿಂಧೂ ಬಿ.ರೂಪೇಶ್
author img

By

Published : Jul 28, 2020, 1:54 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರಿಗೆ ವಾಟ್ಸ್​​ಆ್ಯಪ್ ಗ್ರೂಪ್​​ನಲ್ಲಿ ಕೊಲೆ ಬೆದರಿಕೆ ಹಾಕಿರುವ ಸ್ಟೇಟಸ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

murder threat to Dakshina Kannada DC
ವಾಟ್ಸ್ ಆ್ಯಪ್ ಗ್ರೂಪ್​​ನಲ್ಲಿ ದ.ಕ. ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ

ಬಕ್ರೀದ್ ಹತ್ತಿರ ಬರುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸಭೆ ನಡೆಸಿದ್ದ ಡಿಸಿ, ಜಾನುವಾರು ಸಾಗಣೆ ಮಾಡುವವರ ಮೇಲೆ ಹಲ್ಲೆ ನಡೆಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ವಿಷಯವನ್ನು ಉಲ್ಲೇಖಿಸಿ ವಾಟ್ಸ್​​ಆ್ಯಪ್ ಗ್ರೂಪ್​ವೊಂದರಲ್ಲಿ ಚರ್ಚೆ ನಡೆದಿದ್ದು, ಈ ಸಂದರ್ಭ ಗ್ರೂಪ್ ಸದಸ್ಯನೊಬ್ಬ ತುಳು ಭಾಷೆಯಲ್ಲಿ "ಮೊದಲು ಇವಳನ್ನು ಕಡಿದು ಕೊಲೆ ಮಾಡಬೇಕು" ಎಂದು ಹೇಳಿದ್ದಾನೆ. "ನಮ್ಮ ಹಿಂದುತ್ವಕ್ಕೆ ಆಗಲಿ ನಮ್ಮ ದೇವರಿಗಾಗಲಿ ಧಕ್ಕೆ ತರುವ ಕೆಲಸ ಮಾಡಿದ್ದಲ್ಲಿ ನಾನು ಜೀವ ತೆಗೆಯಲೂ ತಯಾರಿದ್ದೇನೆ, ಜೀವ ಬಿಡಲೂ ತಯಾರಾಗಿದ್ದೇನೆ ಎಂದೂ ಹೇಳಿದ್ದಾನೆ.

tweet
ಡಿಸಿ ಟ್ವೀಟ್​

ಈ ಬಗ್ಗೆ ದ.ಕ. ಜಿಲ್ಲಾಧಿಕಾರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ "ಸಾಮಾಜಿಕ ಜಾಲತಾಣಗಳಲ್ಲಿ ಜಾನುವಾರು ಸಾಗಣೆಗೆ ಸಂಬಂಧಿಸಿದಂತೆ ಅನೇಕರು ಗೊಂದಲ ಉಂಟು ಮಾಡುತ್ತಿರುವುದು ಕಂಡುಬರುತ್ತಿದೆ. ಯಾವುದೇ ಅಕ್ರಮ ಜಾನುವಾರು ಸಾಗಣೆಗೆ ಕಂಡು ಬಂದಲ್ಲಿ ಪೊಲೀಸರಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಕೋರಿದೆ" ಎಂದು ಟ್ವೀಟ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.