ETV Bharat / city

ಪಿಲಿಕುಳದ ವನ್ಯಜೀವಿಗಳನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದ ಎಂಆರ್​ಪಿಎಲ್

ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿದ್ದ 1,200 ವನ್ಯಜೀವಿಗಳನ್ನು ಎಂಆರ್​ಪಿಎಲ್ ಸಂಸ್ಥೆ​ ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿದೆ.

mr-pl-has-adopted-pillikola-wildlife-for-a-period-of-one-year
ಪಿಲಿಕುಳದ ವನ್ಯಜೀವಿಗಳನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದ ಎಂಆರ್​ಪಿಎಲ್
author img

By

Published : Dec 23, 2020, 1:06 PM IST

ಮಂಗಳೂರು: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿದ್ದ ವನ್ಯಜೀವಿಗಳನ್ನು ಎಂಆರ್​ಪಿಎಲ್ ಸಂಸ್ಥೆ​ ದತ್ತು ಪಡೆದುಕೊಂಡಿದೆ.

ಕೊರೊನಾ ಲಾಕ್​ಡೌನ್​ನಿಂದ ಪಿಲಿಕುಳ ಜೈವಿಕ ಉದ್ಯಾನವನದ ಆದಾಯ ಕಡಿಮೆಯಾಗಿತ್ತು. ಇದರಿಂದ 1,200 ವನ್ಯಜೀವಿಗಳನ್ನು ರಕ್ಷಿಸುವುದು ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ಎಂಆರ್​ಪಿಎಲ್​ಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಶಿಫಾರಸು ಮಾಡಿದ್ದರು. ಅದರಂತೆ 1,200 ವನ್ಯಜೀವಿಗಳನ್ನು ರಕ್ಷಿಸಲು ಮತ್ತು ಆಹಾರ ವ್ಯವಸ್ಥೆ ಒದಗಿಸಲು ಎಂಆರ್​ಪಿಎಲ್ ಒಪ್ಪಿಕೊಂಡಿದೆ.

ಈ ಉದ್ದೇಶಕ್ಕಾಗಿ 4.16 ಕೋಟಿ ಹಣವನ್ನು ಮೀಸಲಿಡಲಾಗಿದೆ. ಈ ಹಣವನ್ನ ವನ್ಯಜೀವಿಗಳಿಗೆ ಮೇವು ಒದಗಿಸಲು, ಪಶುವೈದ್ಯಕೀಯ ಉದ್ದೇಶ ಮತ್ತು ಕಾಡುಪ್ರಾಣಿಗಳಿಗೆ ಔಷಧಿಗಳನ್ನು ಒದಗಿಸಲು ಬಳಸಲಾಗುತ್ತದೆ.

ಓದಿ: ಲಂಡನ್​​ನಿಂದ ಬಂದವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ : ಡಿಸಿ ಮಹಾಂತೇಶ್ ಬೀಳಗಿ

ಪಿಲಿಕುಳ ನಿಸರ್ಗಧಾಮ ಕಾರ್ಯಕಾರಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಮತ್ತು ಎಂಆರ್​ಪಿಎಲ್​ನ ರಿಫೈನರಿ ವಿಭಾಗದ ಕಾರ್ಯಾಕಾರಿ ನಿರ್ದೇಶಕ ಎಲಾಂಗೋ ಎಂ ಅವರು ಒಂದು ವರ್ಷದ ದತ್ತು ಪಡೆಯುವ ಒಪ್ಪಂದಕ್ಕೆ ಸಹಿ ಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.