ETV Bharat / city

ಆಕ್ಸಿಜನ್​ ಲಭ್ಯತೆ ಬಗ್ಗೆ ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಲಿ: ಖಾದರ್

author img

By

Published : May 4, 2021, 2:22 PM IST

ಆಕ್ಸಿಜನ್ ಬೇಡಿಕೆ ಎಷ್ಟಿದೆ ಎಂಬುದರ ಬಗ್ಗೆ ಸರ್ಕಾರ ಹಾಗೂ ಆಯಾ ಜಿಲ್ಲಾಡಳಿತಗಳು ಶ್ವೇತಪತ್ರ ಬಿಡುಗಡೆ ಮಾಡಲಿ. ಯಾಕೆಂದರೆ ಮುಂಚೆಗಿಂತ ಈಗ ಮೂರು ಪಟ್ಟು ಅಧಿಕ ವೆಂಟಿಲೇಟರ್​ಗಳ ಅಗತ್ಯವಿದೆ. ಆದ್ದರಿಂದ ಎಲ್ಲಾ ಆಸ್ಪತ್ರೆಗಳಲ್ಲಿ ಎಷ್ಟು ಆಕ್ಸಿಜನ್​ಗಳ ಅವಶ್ಯಕತೆ ಇದೆ, ಎಷ್ಟು ಸರಬರಾಜು ಆಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ದೊರಕುತ್ತದೆ ಎಂದು ಯು.ಟಿ.ಖಾದರ್ ಹೇಳಿದರು.

Mangalore
ಶಾಸಕ ಯು.ಟಿ.ಖಾದರ್

ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿದ್ದು, ಮುಂದಿನ ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಬೇಕು ಎಂಬುದನ್ನು ಈಗಲೇ ಯೋಚನೆ ಮಾಡಬೇಕಿದೆ. ತಾಲೂಕು ಮಟ್ಟದಲ್ಲಿ 15 ವೆಂಟಿಲೇಟರ್​ಗಳು ಉಪಯೋಗವಾಗುತ್ತಿಲ್ಲ. ತಕ್ಷಣ ಅವುಗಳನ್ನು ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಉಪಯೋಗಿಸುವಂತೆ ಒತ್ತಾಯಿಸುತ್ತೇವೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

ಆಕ್ಸಿಜನ್​ ಲಭ್ಯತೆ ಬಗ್ಗೆ ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಲಿ: ಯು.ಟಿ.ಖಾದರ್

ಆಕ್ಸಿಜನ್​​ ಎಷ್ಟಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಹಾಗೂ ಆಯಾ ಜಿಲ್ಲಾಡಳಿತಗಳು ಶ್ವೇತಪತ್ರ ಬಿಡುಗಡೆ ಮಾಡಲಿ. ಯಾಕೆಂದರೆ ಮುಂಚೆಗಿಂತ ಈಗ ಮೂರು ಪಟ್ಟು ಅಧಿಕ ವೆಂಟಿಲೇಟರ್​ಗಳ ಅಗತ್ಯವಿದೆ. ಆದ್ದರಿಂದ ಎಲ್ಲಾ ಆಸ್ಪತ್ರೆಗಳಲ್ಲಿ ಎಷ್ಟು ಆಕ್ಸಿಜನ್​ಗಳ ಅವಶ್ಯಕತೆ ಇದೆ, ಎಷ್ಟು ಸರಬರಾಜು ಆಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ದೊರಕುತ್ತದೆ.

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಒಂದು ವಾರದ ಹಿಂದೆ ಆಕ್ಸಿಜನ್ ಕೊರತೆಯ ಬಗ್ಗೆ ಗಮನ ಸೆಳೆದಾಗ ಯಾವುದೇ ಸಮಸ್ಯೆಗಳಿಲ್ಲ. ಸಾಕಷ್ಟು ಆಕ್ಸಿಜನ್ ಇದೆ ಎಂದು ದಿನಕ್ಕೊಬ್ಬ ಸಚಿವರು ಹೇಳಿಕೆ ನೀಡುತ್ತಿದ್ದರು. ಆದರೆ, ನಿನ್ನೆ ಚಾಮರಾಜನಗರದಲ್ಲಿ‌ ನಡೆದ ದುರಂತಕ್ಕೆ ಯಾರು ಕಾರಣ ಎಂದು ಸರ್ಕಾರ ಸ್ಪಷ್ಟಪಡಿಸಲಿ. ಇದರಲ್ಲಿ ಸರ್ಕಾರದ ವೈಫಲ್ಯವೇ ಎದ್ದು ಕಾಣುತ್ತಿದೆ.

ಆದ್ದರಿಂದ ಇಂತಹ ಸಾವು-ನೋವುಗಳು ಸಂಭವಿಸದಂತೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು. ಎಲ್ಲಾ ಜಿಲ್ಲೆಗಳಲ್ಲಿ ಎಷ್ಟೆಷ್ಟು ವೆಂಟಿಲೇಟರ್​ ಅಗತ್ಯವಿದೆ ಎಂಬುದರ ಬಗ್ಗೆ ತಿಳಿಯಬೇಕಾಗಿದೆ.‌ ನನಗೆ ತಿಳಿದಂತೆ ದ.ಕ ಜಿಲ್ಲೆಗೆ ಶೇ. 80ರಷ್ಟು ದ್ರವ ಆಕ್ಸಿಜನ್ ಜಿಂದಾಲ್​ನಿಂದ ಬರುತ್ತದೆ. ಶೇ. 20ರಷ್ಟು ಪಾಲ್ಘಾಟ್​ನಿಂದ ಬರುತ್ತದೆ.

ಆದರೆ, ಕೇರಳದಲ್ಲಿ ಸೋಂಕಿತರ ಸಂಖ್ಯೆ ಉಲ್ಬಣಗೊಂಡಲ್ಲಿ ಇಡೀ ಆಕ್ಸಿಜನ್ ವ್ಯವಸ್ಥೆಯನ್ನು ಸರ್ಕಾರ ವಶಕ್ಕೆ ಪಡೆದುಕೊಳ್ಳುತ್ತದೆ‌. ಅವರ ಆದೇಶಗಳಿಲ್ಲದೆ ಯಾವುದೇ ರಾಜ್ಯಕ್ಕಾಗಲಿ, ಸರ್ಕಾರಕ್ಕಾಗಲಿ ಆಕ್ಸಿಜನ್​ಗಳು ಸರಬರಾಜು ಆಗುವುದಿಲ್ಲ. ಆದ್ದರಿಂದ ಜಿಲ್ಲೆಗೆ ಬರುವ ಆಕ್ಸಿಜನ್​ನಲ್ಲಿ ‌ಕಡಿತವಾಗುವ ಸಾಧ್ಯತೆ ಇದೆ. ಆದ್ದರಿಂದ ಅದಕ್ಕೆ ಪರ್ಯಾಯ ವ್ಯವಸ್ಥೆಗಳೇನು ಎಂಬುದನ್ನು ಸರ್ಕಾರ ತಿಳಿಸಲಿ ಎಂದರು.

ಓದಿ: ಆಕ್ಸಿಜನ್ ದುರಂತದ ವರದಿ ಸಲ್ಲಿಕೆಗೆ 3 ದಿನ ಅವಕಾಶ ಇದೆ, ಸದ್ಯಕ್ಕೆ ಚರ್ಚೆ ಬೇಡ: ಕಳಸದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.