ETV Bharat / city

ಮಂಗಳೂರು ಟು ನವದೆಹಲಿಗೆ ನೇರ ವಿಮಾನ.. 140 ಜನರನ್ನು ಹೊತ್ತು ರಾಷ್ಟ್ರ ರಾಜಧಾನಿ ತಲುಪಿದ ಫ್ಲೈಟ್​!

author img

By

Published : Jul 2, 2022, 11:18 AM IST

ಮಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಯ ಜನರು ದೆಹಲಿಗೆ ಹೋಗಬೇಕಾದರೆ ಬೆಂಗಳೂರಿಗೆ ಹೋಗುವ ಅಗತ್ಯವಿಲ್ಲ. ಏಕೆಂದರೆ ಇಂದಿನಿಂದ ಮಂಗಳೂರು ಟು ನವದೆಹಲಿಗೆ ವಿಮಾನ ಹಾರಾಟ ಪ್ರಾರಂಭವಾಗಿದೆ.

Mangalore to New Delhi direct flight, Mangalore to New Delhi direct flight started, Mangalore to New Delhi direct flight news, ಮಂಗಳೂರಿನಿಂದ ನವದೆಹಲಿಗೆ ನೇರ ವಿಮಾನ, ಮಂಗಳೂರಿನಿಂದ ನವದೆಹಲಿಗೆ ನೇರ ವಿಮಾನ ಆರಂಭ, ಮಂಗಳೂರಿನಿಂದ ನವದೆಹಲಿಗೆ ನೇರ ವಿಮಾನ ಸುದ್ದಿ,
ಮಂಗಳೂರು ಟು ನವದೆಹಲಿಗೆ ನೇರ ವಿಮಾನ

ಮಂಗಳೂರು: ಮಂಗಳೂರಿನಿಂದ ರಾಷ್ಟ್ರದ ರಾಜಧಾನಿ ನವದೆಹಲಿಗೆ ನೇರ ವಿಮಾನಯಾನ ಆರಂಭವಾಗಿದೆ. ಮಂಗಳೂರು ಟು ನವದೆಹಲಿ ಮಾರ್ಗದಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸಬೇಕೆಂಬ ಹಲವು ದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಇಂಡಿಗೋ ವಿಮಾನ ತನ್ನ ಮೊದಲ ಸಂಚಾರವನ್ನು ಶುಕ್ರವಾರ ಆರಂಭಿಸಿದೆ.

ನವದೆಹಲಿಯಿಂದ ಶುಕ್ರವಾರ ಬೆಳಗ್ಗೆ ಪ್ರಯಾಣಿಕರನ್ನು ಹೊತ್ತ ವಿಮಾನ ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಅದೇ ರೀತಿ 140 ಪ್ರಯಾಣಿಕರನ್ನು ಹೊತ್ತೊಯ್ದ ವಿಮಾನ 10.40 ಕ್ಕೆ ಮರಳಿ ನವದೆಹಲಿ ತಲುಪಿದೆ.

ಓದಿ: ದೆಹಲಿಯಿಂದ ಜಬಲ್​ಪುರಕ್ಕೆ ಹೊರಟಿದ್ದ ವಿಮಾನದಲ್ಲಿ ಹೊಗೆ.. ತುರ್ತು ಭೂಸ್ಪರ್ಶ

ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಭಾನುವಾರ ಸೇರಿ ವಾರದಲ್ಲಿ ನಾಲ್ಕು ದಿನ ಈ ವಿಮಾನ ಸಂಚಾರ ಇರಲಿದೆ. ಈಗಾಗಲೇ ಮಂಗಳೂರು - ಪೂನಾ - ನವದೆಹಲಿ ನಡುವೆ ವಿಮಾನ ಸಂಚಾರ ನಡೆಯುತ್ತಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ನವದೆಹಲಿ ನೇರ ವಿಮಾನದಿಂದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.