ಮಂಗಳೂರು: ವಂಚನೆಗೊಳಗಾದ 7.7 ಲಕ್ಷ ರೂ. ಹಣವನ್ನು ಮರಳಿ ತೆಗಿಸಿಕೊಟ್ಟ ಮಂಗಳೂರು ಪೊಲೀಸ್ ಇಲಾಖೆಗೆ ವಿದೇಶಿ ಪ್ರಜೆ ಯೋ ಫಿಲ್ ಧನ್ಯವಾದ ತಿಳಿಸಿದ್ದಾನೆ. ಫ್ರಾನ್ಸ್ ಮೂಲದ ಈತ ನಗರದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದನು. ಚಿಲಿಂಬಿಯ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದು ತನಗೆ ಪರಿಚಿತನಾದ ವ್ಯಕ್ತಿಯೋರ್ವ ಈತನಿಂದ ಹೊಟೇಲ್ ಆರಂಭಿಸಲೆಂದು ಏಳು ಲಕ್ಷ ರೂಪಾಯಿ ಪಡೆದಿದ್ದು, ನಂತರ ಸಂಪರ್ಕ ಕೊನೆಗೊಳಿಸಿದ್ದನು.
ಯೋ ಫಿಲ್ ಕ್ರೀಡಾಪಟುವಾಗಿದ್ದು ಮಂಗಳೂರಿನ ಸೈಕ್ಲಿಸ್ಟ್ಗಳ ಸಂಪರ್ಕ ಹೊಂದಿದ್ದನು. ತನ್ನ ಪರಿಚಯಸ್ಥ ಸೈಕ್ಲಿಸ್ಟ್ಗಳಲ್ಲಿ ತನಗಾದ ವಂಚನೆಯ ಬಗ್ಗೆ ತಿಳಿಸಿದ್ದಾನೆ. ಅವರ ಸಲಹೆಯಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾನೆ. ಈ ಬಗ್ಗೆ ಮುತುವರ್ಜಿವಹಿಸಿ ತನಿಖೆ ನಡೆಸಿರುವ ಡಿಸಿಪಿ ಹರಿರಾಂ ಶಂಕರ್ ನೇತೃತ್ವದ ತಂಡ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು.
ವಂಚಕನ ತಂದೆ ಫ್ರಾನ್ಸ್ ಪ್ರಜೆಗೆ ಪುತ್ರ ವಂಚಿಸಿರುವ ಸಂಪೂರ್ಣ ಹಣ ವಾಪಸ್ ನೀಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿಲ್ಲ. ವಿಚಾರಣೆಗೆ ಕರೆದ ಸಂದರ್ಭ ಠಾಣೆಗೆ ಹಾಜರಾಗಬೇಕೆಂದು ನೋಟಿಸ್ ಕೊಟ್ಟು ಕಳುಹಿಸಲಾಗಿದೆ.
ಇದನ್ನೂ ಓದಿ: ರೋಹಿಣಿ ಕೋರ್ಟ್ನಲ್ಲಿ ಮತ್ತೆ ಗುಂಡಿನ ಸದ್ದು.. ವಕೀಲರ ಮೇಲೆ ಗುಂಡು ಹಾರಿಸಿದ ತಪಸಣಾ ಅಧಿಕಾರಿ!