ETV Bharat / city

ಪ್ರಯಾಣಿಕರ ಗಮನಕ್ಕೆ: ಜುಲೈ 26 ರಿಂದ ಆಗಸ್ಟ್ 31 ರವರೆಗೆ ಮಂಗಳೂರು - ಬೆಂಗಳೂರು ವಿಶೇಷ ರೈಲು ವ್ಯವಸ್ಥೆ

ಘಾಟ್ ರಸ್ತೆಗಳಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಆಗಿರುವ ಕಾರಣ ಪರ್ಯಾಯ ಮಾರ್ಗದ ವ್ಯವಸ್ಥೆಗಾಗಿ ಸಾರ್ವಜನಿಕರ ಒತ್ತಾಯದ ಮೇರೆಗೆ ಮಂಗಳೂರು - ಬೆಂಗಳೂರು ವಿಶೇಷ ರೈಲ್ವೆ ವ್ಯವಸ್ಥೆ ಮಾಡಲಾಗಿದೆ.

author img

By

Published : Jul 26, 2022, 9:45 PM IST

special train system
ವಿಶೇಷ ರೈಲು ವ್ಯವಸ್ಥೆ

ಸುಬ್ರಮಣ್ಯ (ದಕ್ಷಿಣ ಕನ್ನಡ): ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಮತ್ತು ರಾಷ್ಟ್ರೀಯ ಹೆದ್ದಾರಿ 276 ಸಂಪಾಜೆ ಘಾಟ್ ರಸ್ತೆ ಸಂಪರ್ಕ ಕಡಿತಗೊಂಡಿರುವ ಕಾರಣದಿಂದಾಗಿ ಜುಲೈ 26 ರಿಂದ ಆಗಸ್ಟ್ 31ರ ವರೆಗೆ ಮಂಗಳೂರು - ಬೆಂಗಳೂರು ನಡುವೆ ವಿಶೇಷ ಎಕ್ಸ್​ಪ್ರೆಸ್ ರೈಲು ಆರಂಭಿಸಲಾಗಿದೆ ಎಂದು ನೈಋತ್ಯ ರೈಲ್ವೇ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ.

Mangalore - Bangalore special train system from July 26 to August 31
ಮಂಗಳೂರು - ಬೆಂಗಳೂರು ವಿಶೇಷ ರೈಲು ವ್ಯವಸ್ಥೆ

ಮಂಗಳೂರಿನಿಂದ ಬೆಂಗಳೂರಿಗೆ ಹೆಚ್ಚುವರಿ ರೈಲು ಸಂಚಾರ ಮಾಡಬೇಕು ಎಂಬ ಸಾರ್ವಜನಿಕರ ಬೇಡಿಕೆಗೆ ರೈಲ್ವೆ ಇಲಾಖೆ ಸ್ಪಂದಿಸಿದೆ. ಜುಲೈ 26 ರಿಂದ ಆಗಸ್ಟ್ 31 ರವರೆಗೆ ಈ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಿಸಿದ್ದಾರೆ. ಮಂಗಳೂರು ಸೆಂಟ್ರಲ್ (MAQ) ಮತ್ತು KSR ಬೆಂಗಳೂರು (SBC) ನಡುವೆ ಮೈಸೂರು ಮಾರ್ಗವಾಗಿ ವಾರಕ್ಕೆ ಮೂರು ಬಾರಿ ಹೆಚ್ಚುವರಿ ವಿಶೇಷ ರೈಲುಗಳು ಸಂಚರಿಸಲಿದೆ.

ರೈಲು ಸಂಖ್ಯೆ 06547 ಪ್ರತಿ ಮಂಗಳವಾರ, ಗುರುವಾರ ಮತ್ತು ಭಾನುವಾರ ಚಲಿಸುತ್ತದೆ. ಇದು ಬೆಂಗಳೂರಿನಿಂದ (SBC) ರಾತ್ರಿ 8.30ಕ್ಕೆ ಹೊರಟು ಬೆಳಗ್ಗೆ 9.05ಕ್ಕೆ ಮಂಗಳೂರು ಸೆಂಟ್ರಲ್ (MAQ) ತಲುಪಲಿದೆ. ಈ ರೈಲು ಕೆಂಗೇರಿ (ರಾತ್ರಿ 8.49), ರಾಮನಗರ (ರಾತ್ರಿ 9.13), ಚನ್ನರಾಯಪಟ್ಟಣ (ರಾತ್ರಿ 9.24), ಮಂಡ್ಯ (ರಾತ್ರಿ 9.54), ಮೈಸೂರು (ರಾತ್ರಿ 11:00), ಕೃಷ್ಣರಾಜನಗರ (ರಾತ್ರಿ 11.49), ಹೊಳೆನರಸೀಪುರ (12.43) ಹಾಸನ (ಬೆಳಗ್ಗೆ 1.35), ಸಕಲೇಶಪುರ (ಬೆಳಗ್ಗೆ 3:00), ಸುಬ್ರಹ್ಮಣ್ಯ ರೋಡ್ (ಬೆಳಗ್ಗೆ 6.10), ಕಬಕ ಪುತ್ತೂರು (7.30), ಬಂಟ್ವಾಳ (7.30), ಮಂಗಳೂರು ಜಂಕ್ಷನ್ (ಬೆಳಗ್ಗೆ 8.13) ತಲುಪಲಿದೆ.

ಅದೇ ತರಹ ಇನ್ನೊಂದು ರೈಲು (ಸಂಖ್ಯೆ 06548) ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಂಗಳೂರು ಸೆಂಟ್ರಲ್‌ನಿಂದ ಹೊರಡಲಿದೆ. ಮಂಗಳೂರು ಸೆಂಟ್ರಲ್‌ನಿಂದ ಸಂಜೆ 6.35ಕ್ಕೆ ಹೊರಟು ಬೆಳಗ್ಗೆ 6.15ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ. ಈ ರೈಲು ಮಂಗಳೂರು ಜಂಕ್ಷನ್ (ಸಂಜೆ 6.48), ಬಂಟ್ವಾಳ (ಸಂಜೆ 7.20), ಕಬಕ ಪುತ್ತೂರು (ಸಂಜೆ 7.48), ಸುಬ್ರಹ್ಮಣ್ಯ ರೋಡ್ (ರಾತ್ರಿ 8.40), ಸಕಲೇಶಪುರ (ರಾತ್ರಿ 11.20), ಹಾಸನ (ಬೆಳಗ್ಗೆ 12.25), ಹೊಳೆನರಸೀಪುರ (ಬೆಳಗ್ಗೆ 1.13ಕ್ಕೆ), ಕೃಷ್ಣರಾಜನಗರ ( 2.08ಕ್ಕೆ), ಮೈಸೂರು (3.50ಕ್ಕೆ), ಮಂಡ್ಯ (4.30ಕ್ಕೆ), ರಾಮನಗರ (4.42ಕ್ಕೆ), ಮತ್ತು ಕೆಂಗೇರಿ (ಬೆಳಗ್ಗೆ 5.11ಕ್ಕೆ) ಬೆಂಗಳೂರು (6.15ಕ್ಕೆ) ತಲುಪಲಿದೆ.

ಈ ರೈಲುಗಳು ಎರಡು 2-ಟೈರ್ ಎಸಿ, ಎರಡು 3-ಟೈರ್ ಎಸಿ, 9 ಎರಡನೇ ದರ್ಜೆಯ ಸ್ಲೀಪರ್ ಕೋಚ್‌ಗಳು ಮತ್ತು ಎರಡು ಸಾಮಾನ್ಯ ಎರಡನೇ ದರ್ಜೆಯ ಕೋಚ್‌ಗಳು ಸೇರಿದಂತೆ 14 ಕೋಚ್‌ಗಳನ್ನು ಒಳಗೊಂಡಿದೆ.

ಇದನ್ನೂ ಓದಿ : ಇನ್ಮುಂದೆ ಬಿಆರ್​​ಟಿಎಸ್ ಕಾರಿಡಾರಲ್ಲಿ ವಾಹನ ಚಲಾಯಿಸಿದರೆ ಎಚ್ಚರ: ಮನೆಗೆ ಬರುತ್ತೆ ದಂಡದ ನೋಟಿಸ್ !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.