ETV Bharat / city

ಇವನು ಚಿನ್ನ ಎಲ್ಲಿ ಇಟ್ಕೊಂಡಿದ್ದಾ ಗೊತ್ತಾ?.. ಮಂಗಳೂರು ಏರ್​ಪೋರ್ಟ್​ನಲ್ಲಿ ಭಲೇ ಕಿಲಾಡಿ ಅರೆಸ್ಟ್​ - ಮಂಗಳೂರು ಲೆಟೆಸ್ಟ್ ನ್ಯೂಸ್

ಅಕ್ರಮ ಚಿನ್ನ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಏರ್​ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

mangalore gold Smuggling case
ಮಂಗಳೂರು ಅಕ್ರಮ ಚಿನ್ನ ಸಾಗಣೆ ಪ್ರಕರಣ
author img

By

Published : Oct 30, 2021, 10:12 AM IST

ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನವನ್ನು ಗುದದ್ವಾರದೊಳಗೆ ಪೇಸ್ಟ್ ರೂಪದಲ್ಲಿ ಇಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ದುಬೈನಿಂದ ಏರ್​ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಈತನನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಈತ ದೇಹದೊಳಗೆ ಮರೆಮಾಚಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಬ್ಲೇಡ್​​ನಿಂದ ಕೈ, ಎದೆ ಕೊಯ್ದುಕೊಂಡು ಪುನೀತ್ ಅಭಿಮಾನಿ ಆತ್ಮಹತ್ಯೆ ಯತ್ನ

ತಪಾಸಣೆ ವೇಳೆ ಈತನ ಬಳಿ 663 ಗ್ರಾಂ ತೂಕದ 32,55,330 ರೂ. ಮೌಲ್ಯದ ಅಕ್ರಮ ಸಾಗಾಟದ ಚಿನ್ನ ಇರುವುದು ಪತ್ತೆಯಾಗಿದೆ. ತಕ್ಷಣ ಚಿನ್ನ ಮತ್ತು ಆರೋಪಿಯನ್ನು ವಶಕ್ಕೆ ಪಡೆದ ಕಸ್ಟಮ್ಸ್​ ಅಧಿಕಾರಿಗಳು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.