ETV Bharat / city

ಮಸೀದಿಗಳ ಬಗ್ಗೆ ತಪ್ಪು ಕಲ್ಪನೆ ಬೇಡ: ಮಹಮ್ಮದ್ ಕುಂಞಿ

ಸಮಾಜದಲ್ಲಿ ಮಸೀದಿಗಳ ಬಗ್ಗೆ ಇರುವ ಬಗ್ಗೆ ತಪ್ಪು ಪರಿಕಲ್ಪನೆ ಬೇಡವೆಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ ಹೇಳಿದರು.

Mahmoud Kunhi
ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ
author img

By

Published : Dec 16, 2019, 10:41 PM IST

ಮಂಗಳೂರು: ಸಮಾಜದಲ್ಲಿ ಮಸೀದಿಗಳ ಬಗ್ಗೆ ಇರುವ ಬಗ್ಗೆ ತಪ್ಪು ಪರಿಕಲ್ಪನೆ ಬೇಡವೆಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ ಹೇಳಿದರು.

ನಗರದ ಪ್ರೆಸ್​​​ಕ್ಲಬ್​​ನಲ್ಲಿ‌ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಸೀದಿಗೆ ಬರುವಾಗ ಯಾವುದೇ ಸಂಹಿತೆಯೂ ಇಲ್ಲ. ಶುಚಿಯಾಗಿದ್ದರೆ ಸಾಕು, ಮಹಿಳೆಯರನ್ನು ಆಹ್ವಾನಿಸುತ್ತಿದ್ದೇವೆ. ಮಸೀದಿ ಕುರಿತು ಇರುವ ಸಂಶಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ಅದರಲ್ಲೇ ಅವಕಾಶವಿದೆ. ಈ ವಾತಾವರಣವನ್ನು ಮತ್ತಷ್ಟು ಹೆಚ್ಚು ಮಾಡುತ್ತೇವೆ. ಪೂರ್ಣವಾಗಿ ಈ ಸಂಶಯ ಹೋಗಲಾಡಿಸುತ್ತೇವೆ ಎಂಬ ನಂಬಿಕೆ ಇಲ್ಲ. ಆದರೂ ಕಡಿಮೆಗೊಳಿಸಲು ಪ್ರಯತ್ನಿಸುತ್ತೇವೆ ಎಂದರು.

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ

ಎಲ್ಲಾ ಧರ್ಮದ ದಾರ್ಶನಿಕರು, ಪ್ರವಾದಿಗಳು, ಸಾಧು ಸಂತರಾಗಿರುವುದು ಮನುಷ್ಯರನ್ನು ಸುಧಾರಣೆಗೊಳಿಸಲು. ಮನುಷ್ಯ ಹೇಗೆ ಬದುಕಬೇಕೆಂಬುದನ್ನು ತಿಳಿಸಿಕೊಡಲು. ದೇವರನ್ನು ರಕ್ಷಿಸಲು ಅಲ್ಲ. ಇಷ್ಟಕ್ಕೂ ದೇವರನ್ನು ರಕ್ಷಿಸುವ ಅಗತ್ಯವೂ ಇಲ್ಲ. ಪ್ರವಾದಿ ಮಹಮ್ಮದರು ದೇವರೊಂದಿಗೆ ನಿಮಗಿರುವ ಸಂಬಂಧ ಎಂತಹದು. ಓರ್ವ ದೇವನ ಮೇಲಿನ ನಂಬಿಕೆ ಮನುಷ್ಯನ ಹೃದಯವನ್ನು ವಿಶಾಲವಾಗಿರಿಸುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಏಕೆಂದರೆ ನನ್ನನ್ನ ಸೃಷ್ಟಿಸಿದ ದೇವರೇ ಇತರ ಧರ್ಮಿಯರನ್ನು ಸೃಷ್ಟಿಸಿದ್ದಾನೆ. ಇದು ಮನುಷ್ಯರ ನಡುವೆ ಸಹೋದರತ್ವ ಭಾವನೆ ಬೆಳೆಸುತ್ತದೆ ಎಂದು ತಿಳಿಸಿದರು.

ಪ್ರವಾದಿ ಮಹಮ್ಮದರು ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಜಗತ್ತಿನಲ್ಲಿ ಯಾರೆಲ್ಲ ಮಹಾಪುರುಷರಿದ್ದಾರೋ ಅವರೆಲ್ಲ ದೇವರಾಗಿದ್ದಾರೆ. ಆದರೆ, ಪ್ರವಾದಿ ಮುಹಮ್ಮದರನ್ನು ಇಂದಿಗೂ ದೇವರನ್ನಾಗಿಸಲಿಲ್ಲ. ಅವರನ್ನು ಓರ್ವ ಮುಸ್ಲಿಂ ಆರಾಧಿಸಿದರೆ ಆತ ಮುಸ್ಲಿಮನಾಗಿ ಉಳಿಯುವುದೂ ಇಲ್ಲ. ಅವರ ಹೆಸರಲ್ಲಿ ಮೂರ್ತಿ, ಕಟ್ಟಡ, ನಗರ ಯಾವುದೂ ಇಲ್ಲ. ಅವರ ಚಿತ್ರಗಳಿಲ್ಲ. ಏಕೆಂದರೆ ಅವರು ಆರಾಧ್ಯ ಪುರುಷನಲ್ಲ. ತನ್ನನ್ನು ಪೂಜಿಸಿ ಎಂದು ಅವರು ಎಲ್ಲೂ ಹೇಳಿಲ್ಲ. ಅವರೊಬ್ಬ ದೇವರ ಪ್ರವಾದಿ ಎಂದು ಮಹಮ್ಮದ್ ಕುಂಞಿ ವಿವರಿಸಿದರು.

Intro:ಮಂಗಳೂರು: ದೇವಸ್ಥಾನಗಳಲ್ಲಿ ಶಸ್ತ್ರಾಸ್ತ್ರ ಇದೆ ಎಂದು ಯಾವ ಮುಸ್ಲಿಮನೂ ಹೇಳಿಲ್ಲ. ಆದರೆ ಮಸೀದಿಗಳ ಬಗ್ಗೆ ಈ ಬಗ್ಗೆ ದೊಡ್ಡ ಮಟ್ಟದಲ್ಲಿ‌ ಅಪಪ್ರಚಾರ ಮಾಡಲಾಯಿತು. ಜಗತ್ತಿನಾದ್ಯಂತ ಇರುವ ಇಸ್ಲಾಂ ಫೋಬಿಯಾದ ಒಂದು ಭಾಗವೂ ಕೂಡಾ ಇದು. ನಾವು ಅದಕ್ಕಾಗಿಯೇ ಮಸೀದಿ ಸಂದರ್ಶನ ಎಂಬ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ ಹೇಳಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ‌ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಸೀದಿಗೆ ಬರುವಾಗ ಯಾವುದೇ ಸಂಹಿತೆಯೂ ಇಲ್ಲ. ಶುಚಿಯಾಗಿದ್ದರೆ ಸಾಕು. ಮಹಿಳೆಯರನ್ನು ಆಹ್ವಾನಿಸುತ್ತಿದ್ದೇವೆ. ಮಸೀದಿಯ ಬಗ್ಗೆ ಇರುವ ಸಂಶಯಗಳ ಬಗ್ಗೆ ಮಸೀದಿಯಲ್ಲಿ ಕುಳಿತೇ ಚರ್ಚೆ ಮಾಡಲು ಅವಕಾಶವಿದೆ. ಈ ವಾತಾವರಣ ವನ್ನು ಖಂಡಿತಾ ವಾಗಿ ಇನ್ನೂ ಹೆಚ್ಚು ಮಾಡುತ್ತೇವೆ. ಪೂರ್ಣವಾಗಿ ಈ ಸಂಶಯ ಹೋಗಲಾಡಿಸುತ್ತೇವೆ ಎಂಬ ನಂಬಿಕೆ ಇಲ್ಲ. ಆದರೂ ಕಡಿಮೆಗೊಳಿಸುವ ಪ್ರಯತ್ನ ಮಾಡುತ್ತೇವೆ. ಅದಕ್ಕಾಗಿ ರಾಜ್ಯ ಹಾಗೂ ದೇಶದಾದ್ಯಂತ ಮಸೀದಿ ಸಂದರ್ಶನ ಕಾರ್ಯಕ್ರಮ ಏರ್ಪಾಡಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.

Body:ಎಲ್ಲಾ ಧರ್ಮದ ದಾರ್ಶನಿಕರು, ಪ್ರವಾದಿಗಳು, ಸಾಧು ಸಂತರು ಈ ಜಗತ್ತಿಗೆ ಬಂದಿರೋದು ಮನುಷ್ಯರನ್ನು ಸುಧಾರಣೆ ಮಾಡಲು, ಮನುಷ್ಯ ಹೇಗೆ ಬದುಕಬೇಕೆಂದು ತಿಳಿಸಲು ಹೊರತು ದೇವರನ್ನು ರಕ್ಷಣೆ ಮಾಡಬಲ್ಲ. ದೇವರನ್ನು ರಕ್ಷಣೆ ಮಾಡುವ ಅಗತ್ಯವೂ ಇಲ್ಲ ಎಂದು ಅವರು ಹೇಳಿದರು.

ಪ್ರವಾದಿ ಮಹಮ್ಮದರು ಈ ಜಗತ್ತಿಗೆ ಮೂರು ರೀತಿಯ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಒಂದು ನಿಮಗೆ ನಿಮ್ಮ ದೇವನೊಂದಿಗೆ ಯಾವ ರೀತಿಯ ಸಂಬಂಧವಿದೆ. ಒಬ್ಬ ದೇವನ ಮೇಲಿನ ನಂಬಿಕೆ ಮನುಷ್ಯನ ಹೃದಯವನ್ನು ಬಹಳ ವಿಶಾಲವಾಗಿರಿಸುತ್ತದೆ. ಏಕೆಂದರೆ ನನ್ನನ್ನು ಸೃಷ್ಟಿಸಿದ ದೇವರೇ ಇತರ ಧರ್ಮೀಯರನ್ನು ಸೃಷ್ಟಿಸಿದ್ದಾನೆ. ಆದ್ದರಿಂದ ಒಬ್ಬ ದೇವನ ಮೇಲಿನ ನಂಬಿಕೆ ಮನುಷ್ಯರ ನಡುವೆ ಸಹೋದರತ್ವದ ಭಾವನೆಯನ್ನು ಬೆಳೆಸುತ್ತದೆ. ಬಹುತ್ವ ಎಂಬುದು ಜಗತ್ತಿನ ನಿಯಮ ಅದು ದೇವರ ನಿಯಮವೂ ಎಂದು ಕುರಾನ್ ಹೇಳುತ್ತದೆ. ಪ್ರವಾದಿ ಮಹಮ್ಮದರು ಜಗತ್ತಿಗೆ ನೀಡಿದ ದೊಡ್ಡ ಸಂದೇಶ ನಿಮಗೆ ಒಬ್ಬ ದೇವನಿದ್ದಾನೆ. ನೀವು ಅವನಿಗೆ ದಾಸನಾಗಿ ಬದುಕಬೇಕೆಂದು ಹೇಳಿದರು. ಅಲ್ಲದೆ ಮನುಷ್ಯರು ಅವರ ಸಹಜೀವಿಗಳೊಂದಿಗೆ ಯಾವ ರೀತಿಯ ಸಂಬಂಧವಿರಿಸಕೊಳ್ಳಬೇಕು, ಪ್ರಕೃತಿಯೊಂದಿಗೆ ಯಾವ ರೀತಿ ಸಂಬಂಧ ಇಟ್ಟು ಕೊಳ್ಳಬೇಕೆಂದು ತಿಳಿಸಿದ್ದರು.

ಪ್ರವಾದಿ ಮಹಮ್ಮದರು ಒಂದು ಜಾತಿ, ಧರ್ಮಕ್ಕೆ ಸೀಮಿತರಾದ ಪ್ರವಾದಿಯಲ್ಲ. ಅವರು ಎಲ್ಲರ ಪ್ರವಾದಿ, ಅವರ ಸಂದೇಶವೂ ಸಾರ್ವತ್ರಿಕ ಸಂದೇಶ. ಯಾರೆಲ್ಲಾ ಮಹಾಪುರುಷರು ಜಗತ್ತಿಗೆ ಬಂದಿದ್ದಾರೋ, ಅವರೆಲ್ಲಾ ದೇವರಾಗಿದ್ದಾರೆ. ಆದರೆ ಪ್ರವಾದಿ ಮುಹಮ್ಮದರನ್ನು ಇಂದಿಗೂ ದೇವರನ್ನಾಗಿ ಮಾಡಲಾಗಲಿಲ್ಲ. ಅವರನ್ನು ಓರ್ವ ಮುಸ್ಲಿಂ ಆರಾಧಿಸಿದರೆ ಆತ ಮುಸ್ಲಿಮನಾಗಿ ಉಳಿಯುವುದೂ ಇಲ್ಲ. ಪ್ರವಾದಿ ಮಹಮ್ಮದರ ಹೆಸರಿನಲ್ಲಿ ಮೂರ್ತಿ, ಕಟ್ಟಡ, ನಗರ ಯಾವುದೂ ಇಲ್ಲ. ಅವರ ಫೋಟೋ ಕೂಡಾ ಇಲ್ಲ. ಯಾಕೆಂದರೆ ಅವರು ಆರಾಧ್ಯ ಪುರುಷರಲ್ಲ. ಅವರು ತನ್ನನ್ನು ಪೂಜೆ ಮಾಡಿ ಎಂದು ಎಲ್ಲೂ ಹೇಳಿಲ್ಲ. ತಾನು ದೇವರ ಅವತಾರವೆಂದೂ ಹೇಳಿಲ್ಲ. ಆತ ದೇವರ ಪ್ರವಾದಿ ಎಂದು ಮಹಮ್ಮದ್ ಕುಂಞಿ ಹೇಳಿದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.