ETV Bharat / city

ತಾಕತ್ತಿದ್ದರೆ ಗೋಡ್ಸೆ ಪರ ಟ್ವೀಟ್​​​ ಮಾಡಿದ ನಳಿನ್​ರನ್ನು ಪಕ್ಷದಿಂದ ಉಚ್ಛಾಟಿಸಿ: ಡಿಸೋಜ ಸವಾಲು - undefined

ದೇಶದ್ರೋಹಿಗಳನ್ನು ವೈಭವೀಕರಿಸಲು ಈ ದೇಶದ ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೆ ಗೋಡ್ಸೆ ಪರ ಸಂಸದ ನಳಿನ್ ಕುಮಾರ್ ಕಟೀಲ್​ ಅವರು ಟ್ವೀಟ್ ಮಾಡಿದ್ದಾರೆ. ಅವರನ್ನು ಪಕ್ಷದಿಂದ ಉಚ್ಛಾಟಿಸಿ ಎಂದು ಐವನ್ ಡಿಸೋಜ ಬಿಜೆಪಿಗೆ ಸವಾಲು ಹಾಕಿದ್ದಾರೆ.

ಐವನ್ ಡಿಸೋಜ ಸವಾಲು
author img

By

Published : May 18, 2019, 8:16 PM IST

ಮಂಗಳೂರು: ಬಿಜೆಪಿಗೆ ತಾಕತ್ತಿದ್ದರೆ ನಳಿನ್ ಕುಮಾರ್ ಟ್ವೀಟ್ ಮಾಡಿರುವುದು ಸರಿಯಾದರೆ ಅವರ ಪರವಾಗಿ ಮೆರವಣಿಗೆ ನಡೆಸಬೇಕು.‌ ಅವರ ಹೇಳಿಕೆ ತಪ್ಪಾಗಿದ್ದಲ್ಲಿ ನಳಿನ್​ರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.

ನಗರದ ಮಾತನಾಡಿದ ಅವರು, ಇಂತಹ ಸಂಸ್ಕೃತಿಯನ್ನು ಪೋಷಣೆ ಮಾಡುವುದು ದೇಶಕ್ಕೆ ಅಪಾಯಕಾರಿ ಬೆಳವಣಿಗೆ. ‌ದೇಶಕ್ಕಾಗಿ ಪ್ರಾಣ ಕೊಟ್ಟವರನ್ನು ದೇಶದ್ರೋಹಿ ಎಂದು ಬಿಂಬಿಸಿ, ದೇಶದ್ರೋಹಿಗಳ ಪ್ರತಿಮೆ ನಿರ್ಮಿಸಿ ವೈಭವೀಕರಿಸುವವರ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಐವನ್ ಡಿಸೋಜ

ರಾಜೀವ್​ ಗಾಂಧಿಯವರು 17 ಸಾವಿರಕ್ಕೂ ಹೆಚ್ಚು ಕೊಲೆ ನಡೆಸಿದ್ದಾರೆ ಎಂದಾದರೆ ಗೋದ್ರಾ ಹತ್ಯಾಕಾಂಡ, ರಾಯ್ಟಿಂಗ್ ಹತ್ಯಾಕಾಂಡಕ್ಕೆ ಕಾರಣಕರ್ತರು ಯಾರು ಎಂದು ಹೇಳಬಹುದಾ ಎಂದು ಐವನ್ ಸವಾಲೆಸೆದರು.

ಈ ಹಿಂದೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದರು. ಈಗ ಇಂತಹ ಹೇಳಿಕೆ. ಇದು ಮುಂದುವರಿದರೆ ದೇಶದಲ್ಲಿ ರಕ್ತ ಕ್ರಾಂತಿಯಾಗುತ್ತದೆ. ದೇಶ ವಿರೋಧಿ ಹೇಳಿಕೆ ನೀಡುವವರ ವಿರುದ್ಧ ನಮ್ಮ ಹೋರಾಟ ನಡೆದೇ ನಡೆಯುತ್ತದೆ.‌ ಈ ದೇಶದ ಜನ ಈ ದೇಶದ ಸಂವಿಧಾನವನ್ನೇ ನಂಬಿರುವವರು. ನಮ್ಮ ದೇಶವೇ ನಮ್ಮ ಧರ್ಮ ಎನ್ನುವವರು‌. ಅದರ ವಿರುದ್ಧವಾಗಿರುವ ಶಕ್ತಿಗಳನ್ನು ವೈಭವೀಕರಿಸಿದರೆ ಈ ದೇಶದ ಜನತೆ ಸುಮ್ಮನಿರುವುದಿಲ್ಲ ಎಂದು ಐವನ್ ಡಿಸೋಜ ಹೇಳಿದರು.

Intro:ಮಂಗಳೂರು: ದೇಶದ್ರೋಹಿಗಳನ್ನು ವೈಭವೀಕರಿಸಲು ಈ ದೇಶದ ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೆ ಗೋಡ್ಸೆ ಪರ ಸಂಸದ ನಳಿನ್ ಕುಮಾರ್ ಕಟೀಲು ಅವರು ಟ್ವಿಟ್ ಮಾಡಿದ್ದಾರೆ. ಬಿಜೆಪಿಗೆ ತಾಕತ್ತಿದ್ದರೆ ನಳಿನ್ ಕುಮಾರ್ ಟ್ವಿಟ್ ಮಾಡಿರುವ ಹೇಳಿಕೆ ಸರಿಯಾದರೆ ಅವರ ಪರವಾಗಿ ಮೆರವಣಿಗೆ ನಡೆಸಬೇಕು.‌ ಅವರ ಹೇಳಿಕೆ ತಪ್ಪಾಗಿದ್ದಲ್ಲಿ ನಳಿನ್ ಕುಮಾರ್ ಕಟೀಲು ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂತಹ ಸಂಸ್ಕೃತಿಯನ್ನು ಪೋಷಣೆ ಮಾಡುವುದು ದೇಶಕ್ಕೆ ಅಪಾಯಕಾರಿ ಬೆಳವಣಿಗೆ. ‌ದೇಶಕ್ಕಾಗಿ ಪ್ರಾಣ ಕೊಟ್ಟವರನ್ನು ದೇಶದ್ರೋಹಿ ಎಂದು ಬಿಂಬಿಸಿ, ದೇಶದ್ರೋಹಿಗಳ ಪ್ರತಿಮೆ ನಿರ್ಮಿಸಿ ವೈಭವೀಕರಿಸುವವರ ಮೇಲೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

Body:ರಾಜೀವಗಾಂಧಿಯವರು 17 ಸಾವಿರಕ್ಕೂ ಕೊಲೆ ನಡೆಸಿದ್ದಾರೆ ಎಂದಾದರೆ ಗೋಧ್ರಾ ಹತ್ಯಾಕಾಂಡ, ರಾಯ್ಟಿಂಗ್ ಹತ್ಯಾಕಾಂಡಕ್ಕೆ ಕಾರಣಕರ್ತರು ಯಾರು ಎಂದು ಹೇಳಬಹುದಾ ಎಂದು ಐವನ್ ಡಿಸೋಜ ಸವಾಲೆಸೆದರು.

ಈ ಹಿಂದೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದರು. ಈಗ ಇಂತಹ ಹೇಳಿಕೆ. ಇದೇ ರೀತಿ ದೇಶದಲ್ಲಿ ರಕ್ತಕ್ರಾಂತಿಯಾಗುತ್ತದೆ. ದೇಶವಿರೋಧಿ ಹೇಳಿಕೆ ನೀಡುವವರ ವಿರುದ್ಧ ನಮ್ಮ‌ಹೋರಾಟ ನಡೆದೇ ನಡೆಯುತ್ತದೆ.‌ ಈ ದೇಶದ ಜನ ಈ ದೇಶದ ಸಂವಿಧಾನವನ್ನೇ ನಂಬಿರುವವರು. ನಮ್ಮ ದೇಶವೇ ನಮ್ಮ ಧರ್ಮ ಎನ್ನುವವರು‌. ಅದರ ವಿರುದ್ಧವಾಗಿರುವ ಶಕ್ತಿಗಳನ್ನು ವೈಭವೀಕರಿಸಿದರೆ ಈ ದೇಶದ ಜನತೆ ಸುಮ್ಮನಿರುವುದಿಲ್ಲ ಎಂದು ಐವನ್ ಡಿಸೋಜ ಹೇಳಿದರು.

Reporter_Vishwanath Panjimogaru

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.