ಉಳ್ಳಾಲ : ಸ್ಕೂಟರ್ನಲ್ಲಿ ದನದ ಮಾಂಸ ಸಾಗಾಟ ನಡೆಸುತ್ತಿದ್ದ ತೊಕ್ಕೊಟ್ಟು ಒಳಪೇಟೆಯ ಬೀಫ್ ಅಂಗಡಿ ಮಾಲೀಕನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ಕಾರ್ಯಕರ್ತರು ಹನೀಫ್ ಎಂಬಾತನನ್ನು ಸೆರೆಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೆ.ಸಿ ರೋಡು ಕಡೆಯಿಂದ ತೊಕ್ಕೊಟ್ಟು ಕಡೆಗೆ 40 ಕೆ.ಜಿ ಯಷ್ಟು ದನದ ಮಾಂಸವನ್ನು ಸ್ಕೂಟರಿನಲ್ಲಿ ಹನೀಫ್ ತರುತ್ತಿದ್ದ.
ಸದ್ಯ ಆರೋಪಿ ಹನೀಫ್ 78 ಕೆ.ಜಿ ಮಾಂಸ ಖರೀದಿಸಿರುವ ಬಿಲ್‌ನ ಪೊಲೀಸರಿಗೆ ನೀಡಿದ್ದು, ದನದ ಮಾಂಸವಲ್ಲ ಅದು ಎತ್ತುಗಳ ಮಾಂಸ ಎನ್ನುವ ಕುರಿತು ಪೊಲೀಸರಿಗೆ ಸಂಶಯ ವ್ಯಕ್ತವಾಗಿದೆ.
ಮಾಂಸವನ್ನು ಲ್ಯಾಬ್ಗೆ ಕಳುಹಿಸಲಾಗಿದೆ. ಮಾರುಕಟ್ಟೆ ಅಭಿವೃದ್ಧಿ ಸಂದರ್ಭ ತಾತ್ಕಾಲಿಕ ಬೀಫ್ ಶೆಡ್‌ನ ತೊಕ್ಕೊಟ್ಟು ಒಳಪೇಟೆಯ ರೈಲ್ವೆ ಜಾಗಕ್ಕೆ ಸಂಬಂಧಿಸಿರುವ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು.