ETV Bharat / city

ಮದುವೆ ಮನೆಯಲ್ಲಿ ಪುಂಡಾಟ: ರೌಡಿಶೀಟರ್ ಸಹಿತ ನಾಲ್ವರು ಪೊಲೀಸ್ ವಶಕ್ಕೆ - ರೌಡ್​ಶೀಟರ್ ಬಂಧನ

ಮದುವೆ ಮನೆಯೊಂದರಲ್ಲಿ ಸೋಮವಾರ ರಾತ್ರಿ ನಡೆಸಿದ್ದ ಪುಂಡಾಟಕ್ಕೆ ಸಂಬಂಧ ಸ್ಥಳೀಯ ನಿವಾಸಿ ರೌಡಿಶೀಟರ್ ಗೌರೀಶ್, ಆತನ ಸ್ನೇಹಿತರಾದ ತಲಪಾಡಿಯ ಸುಮಂತ್, ಬಜಾಲ್ ಸುಮಂತ್ ಮತ್ತು ಆಶಿತ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

mangalore
ಮಂಗಳೂರು
author img

By

Published : Dec 9, 2020, 3:26 AM IST

ಮಂಗಳೂರು: ನಗರದ ಪಡೀಲ್ ಸಮೀಪದ ಬಡ್ಲಗುಡ್ಡೆ ಎಂಬಲ್ಲಿನ ಮದುವೆ ಮನೆಯೊಂದರಲ್ಲಿ ಸೋಮವಾರ ರಾತ್ರಿ ನಡೆಸಿದ್ದ ಪುಂಡಾಟಕ್ಕೆ ಸಂಬಂಧ ರೌಡಿಶೀಟರ್ ಸಹಿತ ನಾಲ್ವರನ್ನು ಕಂಕನಾಡಿ ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ನಿವಾಸಿ ರೌಡಿಶೀಟರ್ ಗೌರೀಶ್, ಆತನ ಸ್ನೇಹಿತರಾದ ತಲಪಾಡಿಯ ಸುಮಂತ್, ಬಜಾಲ್ ಸುಮಂತ್ ಮತ್ತು ಆಶಿತ್ ಎಂಬವರು ಬಂಧಿತ ಆರೋಪಿಗಳು.

ಮದುವೆಗೆ ಆಗಮಿಸಿರುವ ಮುಂಬೈಯವರು ಗೌರೀಶ್ ಅವರ ಬಳಿ ದಾರಿ ಕೇಳಿದ್ದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ದಾಂಧಲೆ ನಡೆದಿದೆ. ಈ ಸಂದರ್ಭದಲ್ಲಿ ಗೌರೀಶ್ ತನ್ನ ಗೆಳೆಯರನ್ನು ಕರೆಯಿಸಿ ಮಹಿಳೆಯರನ್ನು ಸಹಿತ ಎಳೆದಾಡಿ, ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಬೈಕ್ ಸಮೇತ ನದಿಗೆ ಬಿದ್ದ ತಾಯಿ-ಮಗ : ಮುಂದುವರೆದ ಶೋಧ ಕಾರ್ಯ

ಕಂಟ್ರೋಲ್ ರೂಂನಿಂದ ಬಂದ ಸೂಚನೆಯಂತೆ ಕಂಕನಾಡಿ ನಗರ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ನಾರಾಯಣ ಎಂ.ಕೆ. ಸ್ಥಳಕ್ಕೆ ತೆರಳಿ ಗೌರೀಶ್​ನನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ ಆರೋಪಿಗಳು ಅವರ ಸಮವಸ್ತ್ರಕ್ಕೆ ಕೈ ಹಾಕಿ ಎಳೆದಾಡಿ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದಾರೆ. ಅಲ್ಲದೆ, ಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ. ಆದರೆ ಪೊಲೀಸರು ರಾತ್ರಿಯೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.