ಮಂಗಳೂರು: ಒಳ ಉಡುಪಿನಲ್ಲಿ 3.89 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಅಡಗಿಸಿಟ್ಟುಕೊಂಡು ದುಬೈಗೆ ತೆರಳುತ್ತಿದ್ದ ಖದೀಮನನ್ನು ಸಿಐಎಸ್ಎಫ್ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಝಾಕ್ ಖಲೀಲ್ ಖಾಜಿ ಎಂಬಾತ ಸ್ಪೈಸ್ ಜೆಟ್ ವಿಮಾನದ ಮೂಲಕ ದುಬೈಗೆ ಹೋಗಲು ಸಿದ್ದತೆ ನಡೆಸಿದ್ದ. ಈತ ತನ್ನ ಒಳ ಉಡುಪಿನಲ್ಲಿ 3.89 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯೊಂದಿಗೆ ದುಬೈಗೆ ತೆರಳುತ್ತಿದ್ದ. ಈ ವೇಳೆ ಸಿಐಎಸ್ಎಫ್ ಅಧಿಕಾರಿಗಳು ಆತನನ್ನು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಿದಾಗ ಒಳ ಉಡುಪಿನಲ್ಲಿ ವಿದೇಶಿ ಕರೆನ್ಸಿ ಇರುವುದು ಪತ್ತೆಯಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ ಸಿಐಎಸ್ಎಫ್ ಅಧಿಕಾರಿಗಳು ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.