ETV Bharat / city

ಜೀವಿತಾವಧಿಯಲ್ಲಿ ಒಂದು ಬಾರಿ ಮಾತ್ರ ಹೂಬಿಟ್ಟ ಮರ: ಕಡಿಯಲು ಸಿದ್ಧವಾದ್ರು ಊರಿನ ಜನ!

ಹೂ ಬಿಟ್ಟ ಅತ್ಯಪರೂಪದ ಮರ(shritale tree)ವನ್ನು ಕಡಿಯಲು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನರು ಸಿದ್ಧತೆ ನಡೆಸಿದ್ದಾರೆ. ಆ ಮರದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

Flower Blooms in Rarest   Shritale tree in dakshina kannada
ಜೀವತಾವಧಿಯಲ್ಲಿ ಒಂದು ಬಾರಿ ಮಾತ್ರ ಹೂಬಿಟ್ಟ ಮರ: ಕಡಿಯಲು ಸಿದ್ಧವಾದ ಊರಿನ ಜನ
author img

By

Published : Nov 21, 2021, 6:14 PM IST

Updated : Nov 21, 2021, 8:03 PM IST

ಬೆಳ್ತಂಗಡಿ(ದಕ್ಷಿಣ ಕನ್ನಡ): ಪ್ರಕೃತಿ ವಿಸ್ಮಯಕಾರಿ. ಪ್ರಕೃತಿಯಲ್ಲಿ ಅದೆಷ್ಟೋ ಕುತೂಹಲ ಮೂಡಿಸುವ ವಿಸ್ಮಯಗಳು ನಡೆಯುತ್ತಿರುತ್ತವೆ. ಅಂತಹ ಒಂದು ವಿಸ್ಮಯ ಬೆಳ್ತಂಗಡಿ ತಾಲೂಕಿನಲ್ಲಿ ಕಂಡುಬಂದಿದೆ. ತನ್ನ ಜೀವಿತಾವಧಿಯಲ್ಲಿ ಒಂದು ಬಾರಿ ಮಾತ್ರ ಹೂ ಬಿಡುವ ತೀರಾ ಅಪರೂಪದ ಮರಗಳಲ್ಲಿ ಒಂದಾದ ಶ್ರೀತಾಳೆ (ಪನೋಲಿ) ಮರ ಕರಿಮಣೇಲು ದೇವಸ್ಥಾನದ ಬಳಿ ಕಂಡು ಹೂಬಿಟ್ಟಿದ್ದು, ಇದರ ಅಂದವನ್ನು ನೋಡಿ ಜನ ಕಣ್ತುಂಬಿಕೊಳ್ಳುತ್ತಿದ್ದಾರೆ.

ತಾಳೆ ಮರದಂತೆ ಎತ್ತರಕ್ಕೆ ಬೆಳೆಯುವ ಈ ಮರವು ತನ್ನ ಜೀವಿತಾವಧಿಯಲ್ಲಿ ಒಂದು ಬಾರಿ ಹೂವಿನಿಂದಲೇ ಆವೃತವಾಗಿ ಅತ್ಯಂತ ಆಕರ್ಷಣೀಯವಾಗಿ ಕಂಡು ಬರುತ್ತಿದೆ. ತುಳುವಿನಲ್ಲಿ ಪನೋಲಿ ಮರ, ಕನ್ನಡದಲ್ಲಿ ಶ್ರೀತಾಳೆ ಮರ ಎನ್ನುವುದು ರೂಢಿ. ಇದು ಸುಮಾರು 70 ರಿಂದ 80ವರ್ಷಕ್ಕೆ ಹೂ ಬಿಟ್ಟು ಬಳಿಕ ಸಾಯುತ್ತದೆ. ಕರಿಮಣೇಲು ದೇವಸ್ಥಾನದ ಚಂದ್ರಶೇಖರ ಅಸ್ರಣ್ಣರಿಗೆ ಸೇರಿದ ತೋಟದಲ್ಲಿ ಮರ ಹೂ ಬಿಟ್ಟಿರುವ ಅದ್ಭುತ ದೃಶ್ಯ ಕಂಡು ಬಂದಿದೆ. ಅಸ್ರಣ್ಣರಿಗೆ ಸುಮಾರು 73 ವರ್ಷ ವಯಸ್ಸಾಗಿದ್ದು, ಚಿಕ್ಕವಯಸ್ಸಿನಲ್ಲೇ ತೋಟದಲ್ಲಿ ಈ ಮರ ಕಂಡಿದ್ದನ್ನು ಅವರು ನೆನಪಿಸುತ್ತಾರೆ. ಹಾಗಾಗಿ ಈ ಮರಕ್ಕೆ 70 ವರ್ಷ ದಾಟಿರಬಹುದೆಂದು ಎಂದು ಅವರು ಅಂದಾಜಿಸಿದ್ದಾರೆ.

ಶ್ರೀತಾಳೆ ಮರ

ಹಿರಿಯರೊಬ್ಬರು ಹೇಳುವ ಪ್ರಕಾರ, ಹಿಂದಿನ ಕಾಲದಲ್ಲಿ ಈ ಮರದ ಗರಿಯಿಂದ ದೇವರ ಸತ್ತಿಗೆ (ಕೊಡೆ)ಯನ್ನು ಮಾಡುತ್ತಿದ್ದರು. ಅಲ್ಲದೆ ಗೊರಬೆ (ಕೊರಂಬು) ಮಾಡಲು ಉಪಯೋಗಿಸುತ್ತಿದ್ದರು ಎನ್ನುತ್ತಾರೆ. ಶ್ರೀತಾಳೆ ಮರ ಅತ್ಯಂತ ಪವಿತ್ರ ಮರವಾಗಿದ್ದು, ರೋಗ ನಿರೋಧಕ ಶಕ್ತಿ ವೃದ್ಧಿಯಾಗಲು ರಾಮಬಾಣ ಎನ್ನಲಾಗ್ತಿದೆ.

ಮರ ಕಡಿಯಲು ಸಿದ್ಧತೆ

ಹೂ ಬಿಟ್ಟ ಈ ಮರವನ್ನು ಅದಷ್ಟು ಬೇಗ ಕಡಿಯಬೇಕು. ಕಡಿಯದಿದ್ದರೆ ಊರಿಗೆ ಗಂಡಾಂತರ ತಪ್ಪಿದ್ದಲ್ಲ. ಮನೆ ಯಜಮಾನನಿಗೂ ಸಂಕಷ್ಟ ಬರುತ್ತದೆ ಎಂಬ ನಂಬಿಕೆಯಲ್ಲಿ ಮರ ಕಡಿಯಲು ಊರಿನವರೆಲ್ಲ ಸೇರಿ ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಅದರೆ ಕೆಲವು ಕಡೆಗಳಿಂದ ಯಾವುದೇ ಕಾರಣಕ್ಕೂ ಈ ಮರವನ್ನು ಕಡಿಯಬಾರದು ಇಂತಹ ಮರಗಳು ತೀರಾ ವಿರಳವಾಗುತ್ತಿವೆ. ಏನಿದ್ದರೂ ಇನ್ನು ಎರಡು ವರ್ಷದಲ್ಲಿ ಈ ಮರ ಸಾಯುತ್ತದೆ. ಅಷ್ಟು ಸಮಯ ಇದ್ದರೆ ಮರದಲ್ಲಿ ಬೀಜ ಉತ್ಪತ್ತಿಯಾಗಿ ಬೀಜವನ್ನು ಸಂರಕ್ಷಿಸಿ ಗಿಡ ಬೆಳಸಬಹುದು ಎಂಬುದು ಕೆಲವರ ವಾದ. ಅದಕ್ಕಾಗಿ ಅರಣ್ಯ ಇಲಾಖೆಗೆ ಊರಿನ ಗಣ್ಯರಿಗೆ ಕಡಿಯಬಾರದಾಗಿ ಮನವಿಯನ್ನೂ ಮಾಡುತ್ತಿದ್ದಾರೆ.

ಮನಬಂದಂತೆ ಕಡಿಯುವಂತಿಲ್ಲ

ಶ್ರೀತಾಳೆ ಮರ ಅಥವಾ ಪನೋಲಿ ಮರ ಒಂದು ಶ್ರೇಷ್ಠ ಹಾಗೂ ಅತ್ಯಂತ ವಿಶೇಷತೆವುಳ್ಳದ್ದಾಗಿದೆ. ಹಾಗಾಗಿ ಇದನ್ನು ಮನಬಂದಂತೆ ಕಡಿಯುವಂತಿಲ್ಲ. ಇದನ್ನು ಕಡಿಯಬೇಕಾದರೆ ಧಾರ್ಮಿಕ ವಿಧಿ-ವಿಧಾನಗಳು ನಡೆಯಬೇಕಂತೆ. ಶುಭ ಮುಹೂರ್ತದಲ್ಲಿ ವಿವಿಧ ಪೂಜಾ ವಿಧಾನಗಳೊಂದಿಗೆ ಚಂಡೆ, ವಾದ್ಯಗಳೊಂದಿಗೆ ಗ್ರಾಮದ ಪ್ರಮುಖರ ಉಪಸ್ಥಿತಿಯಲ್ಲಿ ಪೂಜಾಕಾರ್ಯ ನಡೆದ ಬಳಿಕವೇ ಮರ ಕಡಿಯಲು ಸಿದ್ಧತೆ ಮಾಡಬೇಕಂತೆ!.

ಇದನ್ನೂ ಓದಿ:Dedication of Thief : ದಿನಕ್ಕೆ ಒಂದೇ ಬಾರಿ ಊಟ, ತೂಕ ಇಳಿಸಿಕೊಂಡು ಕಳ್ಳ ಕದ್ದಿದ್ದು ಬರೋಬ್ಬರಿ 37 ಲಕ್ಷ ರೂ.!

Last Updated : Nov 21, 2021, 8:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.