ETV Bharat / city

ಗ್ರಾಹಕರೇ ಎಚ್ಚರ..! ಕಡಬದಲ್ಲಿ ಓಡಾಡುತ್ತಿದೆ 100 ರೂ. ಜೆರಾಕ್ಸ್ ನೋಟು - ನಕಲಿ ನೋಟು ಪತ್ತೆ

ಕಡಬ ತಾಲೂಕಿನ ಕೋಡಿಂಬಾಳದ ಅಶ್ರಫ್ ಎಂಬವರ ಚಿಕನ್​​​ ಸೆಂಟರ್​​ನಿಂದ ಅಸಲಿ ನೋಟನ್ನು ಹೋಲುವ ನೂರು ರೂಪಾಯಿಯ ಜೆರಾಕ್ಸ್ ನೋಟ್​​ ಒಂದು ಚಿಕ್ಕನ್ ಖರೀದಿಗೆ ಬಂದ ಗ್ರಾಹಕರೊಬ್ಬರಿಗೆ ದೊರೆತಿದೆ.

Fake ₹ 100 Note Found In  Kadaba
ಕಡಬದಲ್ಲಿ 100 ರೂ ನಕಲಿ ನೋಟು ಪತ್ತೆ
author img

By

Published : Jun 4, 2022, 2:25 PM IST

ಕಡಬ(ದಕ್ಷಿಣ ಕನ್ನಡ): ನಗರದ ಕೋಡಿಂಬಾಳದ ಚಿಕನ್​​​​ ಸೆಂಟರ್​​ವೊಂದರಲ್ಲಿ ಜೆರಾಕ್ಸ್ ಮಾಡಿದ 100 ರೂ. ನೋಟ್ ಒಂದು ಚಿಕ್ಕನ್ ಖರೀದಿಸಲು ಬಂದ ಗ್ರಾಹಕರಿಗೆ ಸಿಕ್ಕಿದ್ದು, ಗ್ರಾಹಕರು ಮತ್ತು ವರ್ತಕರು ಎಚ್ಚರ ವಹಿಸಬೇಕಿದೆ.

ಕಡಬ ತಾಲೂಕಿನ ಕೋಡಿಂಬಾಳದ ಅಶ್ರಫ್ ಎಂಬವರ ಚಿಕನ್​​​ ಸೆಂಟರ್​​ನಿಂದ ಅಸಲಿ ನೋಟನ್ನು ಹೋಲುವ ನೂರು ರೂ. ಜೆರಾಕ್ಸ್ ನೋಟ್ ಚಿಕನ್​​​ ಖರೀದಿಗೆ ಬಂದ ಗ್ರಾಹಕರೊಬ್ಬರಿಗೆ ದೊರೆತಿದೆ. ಅವರು ಅದನ್ನು ಆಟೋ ಚಾಲಕ ರಾಜೇಶ್ ಎಂಬವರಿಗೆ ನೀಡಿದ್ದಾರೆ. ಈ ನೋಟು ಗಮನಿಸಿದ ಆಟೋ ಚಾಲಕ ರಾಜೇಶ್ ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಡಬ ಪೊಲೀಸ್ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿ ಚಿಕನ್​​​ ಅಂಗಡಿಗೆ ಬಂದು ಪರಿಶೀಲನೆ ನಡೆಸಿದರು. ಚಿಕನ್​​​​ ಖರೀದಿಗೆ ಬಂದ ಯಾರೋ ತನಗೆ ಈ ನೋಟ್ ನೀಡಿದ್ದಾರೆ. ಅದನ್ನು ಗಮನಿಸದೆ ಇನ್ನೊರ್ವರಿಗೆ ಚಲಾವಣೆ ಮಾಡಿದ್ದಾಗಿ ಚಿಕನ್​​​ ಅಂಗಡಿ ಮಾಲೀಕ ಅಶ್ರಫ್ ಪೊಲೀಸರಿಗೆ ವಿವರಣೆ ನೀಡಿದ್ದಾರೆ. ಸಾರ್ವಜನಿಕರು ಇಂತಹ ನೋಟ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.