ETV Bharat / city

ಕರಾವಳಿಯಲ್ಲಿ ಕಾಂಗ್ರೆಸ್​ನ ಪಾರುಪತ್ಯವನ್ನು‌ ಬದಲಿಸಿದ್ದರು ವಿ.ಧನಂಜಯ ಕುಮಾರ್

ಉತ್ತಮ ವಾಗ್ಮಿ, ರಾಜಕೀಯ ಕ್ಷೇತ್ರದಲ್ಲಿ ಸತತ ಜಯವನ್ನೆ ಕಂಡ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಧನಂಜಯ್ ಅವರ ಜೀವನ ಕುರಿತಾದ ಒಂದು ಚಿತ್ರಣ.

ವಿ.ಧನಂಜಯ ಕುಮಾರ್
author img

By

Published : Mar 4, 2019, 11:30 PM IST

ಮಂಗಳೂರು : ಉತ್ತಮ ವಾಗ್ಮಿ, ರಾಜಕೀಯ ಕ್ಷೇತ್ರದಲ್ಲಿ ಸತತ ಜಯವನ್ನೆ ಕಂಡ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಧನಂಜಯ್​ ಅವರು ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಆಯ್ಕೆಯಾಗಿ ಜನರಿಗೆ ಉತ್ತಮವಾದ ಕೆಲಸಗಳನನ್ನು ನೀಡಿದ್ದರು ಎಂದು ಮಾಜಿ ಶಾಸಕ ಯೋಗೀಶ್ ಭಟ್ ತಿಳಿಸಿದರು.

ವಿ.ಧನಂಜಯ ಕುಮಾರ್

ಬಳಿಕ ಮಾತನಾಡಿದ ಅವರುಧನಂಜಯ ಕುಮಾರ್ ಅವರು ಪ್ರಾರಂಭದಲ್ಲಿ ಭಾರತೀಯ ಜನ ಸಂಘದ ಬಿಎಂಎಸ್ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಬಳಿಕ ಭಾರತೀಯ ಜನತಾ ಪಾರ್ಟಿಯ ವಿಶೇಷ ಜವಾಬ್ದಾರಿಗಳನ್ನು ವಹಿಸಿದ್ದರು.

ನಂತರ ಪಕ್ಷದ ವಿವಿಧ ಸ್ತರಗಳಲ್ಲಿ ಕೆಲಸ ನಿರ್ವಹಿಸಿದ್ದರು. ಬಳಿಕ ದ.ಕ.ಜಿಲ್ಲೆಯನ್ನು ಪ್ರತಿನಿಧಿಸಿ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಪಕ್ಷದ ಮೊದಲ ಶಾಸಕರೆನಿಸಿದ್ದರು. ಅಲ್ಲದೆ ಬಿಜೆಪಿ ಪಕ್ಷದ ದ.ಕ. ಜಿಲ್ಲೆಯ ಪ್ರಥಮ ಸಂಸದ ರಾದ ಕೀರ್ತಿಯೂ ಧನಂಜಯ ಕುಮಾರ್ ಗೆ ಸಲ್ಲುತ್ತದೆ. ಆರಂಭದಿಂದಲೂ ನಾವು ಜೊತೆಜೊತೆಯಾಗಿ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಿದ್ದು, ನನ್ನ ಸ್ಮರಣೆಗೆ ಬರುತ್ತದೆ. ಅನೇಕ ರೀತಿಯಲ್ಲಿ ತಮ್ಮ ಕ್ಷೇತ್ರಕ್ಕೆ ಹಾಗೂ ಪಕ್ಷಕ್ಕೆ ಸೇವೆಯನ್ನು‌ ಸಲ್ಲಿಸಿದ್ದರು. ಧನಂಜಯ ಕುಮಾರ್ ನನಗೆ ಆತ್ಮೀಯ ಮಿತ್ರರಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿಯನ್ನು ಒದಗಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದು ಹೇಳಿದರು.

ಧನಂಜಯ್​ ಅವರ ಜೀವನ ಚಿತ್ರಣ :

ಕಾರ್ಕಳ ವೇಣೂರಿನ ಜೈನ ಕುಟುಂಬದಲ್ಲಿ 1951 ಜೂ.04 ರಂದು ಜನಿಸಿದ ಧನಂಜಯ ಕುಮಾರ್ ಅವರು ಉಡುಪಿಯ ವೈಕುಂಠ ಬಾಳಿಗಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಮಂಗಳೂರಿನಲ್ಲಿ‌ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿದರು. ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ, ಯುವ ಮೋರ್ಚಾದ ರಾಜ್ಯಾಧ್ಯಕ್ಷ, ಅಖಿಲ ಭಾರತ ಉಪಾಧ್ಯಕ್ಷ ಸಹಿತ ಹಲವು ಹುದ್ದೆಗಳನ್ನು ನಿರ್ವಹಿಸಿದ್ದರು.

1983 ರಲ್ಲಿ‌ ಮಂಗಳೂರು ಕ್ಷೇತ್ರವನ್ನು ಪ್ರತಿನಿಧಿಸಿ ಕಾಂಗ್ರೆಸ್​ನ ಪಿ.ಎಫ್.ರೋಡ್ರಿಗಸ್​ರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ 1985ರ ಚುನಾವಣೆಯಲ್ಲಿ ಪರಾಭವಗೊಂಡರು. 1989 ರ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.

undefined

ರಾಜಕೀಯ ಜೀವನ:

1991ರಲ್ಲಿ ಮತ್ತೆ ಬಿಜೆಪಿಯಿಂದ ಕಣಕ್ಕಿಳಿದ ಧನಂಜಯ ಕುಮಾರ್ ನಾಲ್ಕು ಬಾರಿ ಮಂಗಳೂರಿನಲ್ಲಿ ಗೆದ್ದ ಜನಾರ್ದನ ಪೂಜಾರಿಯವರನ್ನು 35 ಸಾವಿರ ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಜಯಭೇರಿ ಭಾರಿಸಿದ್ದರು. ಚುನಾವಣಾ ಪ್ರಚಾರದ ಸಂದರ್ಭವೇ ಆಗಿನ ರಾಜೀವ್ ಗಾಂಧಿಯವರ ಹತ್ಯೆ ನಡೆದು ಅನುಕಂಪದ ಅಲೆ ಕಾಂಗ್ರೆಸ್ ಪರ ಇದ್ದರೂ ಫಲಿತಾಂಶ ಘೋಷಣೆಯಾದಾಗ ಎಲ್ಲಾ ರಾಜಕೀಯ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತ್ತು. ಈ ಮೂಲಕ ಧನಂಜಯ ಕುಮಾರ್ ಪ್ರಥಮ ಬಾರಿಗೆ ಲೋಕಸಭೆ ಪ್ರವೇಶಿಸುವಂತಾಯಿತು.

1996ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಧನಂಜಯ ಕುಮಾರ್ ಹಾಗೂ ಜನಾರ್ದನ ಪೂಜಾರಿ ಮುಖಾಮುಖಿಯಾದರು. ಆದರೆ ಧನಂಜಯ ಕುಮಾರ್​ ಅವರು ಸತತ ಎರಡನೇ ಬಾರಿಗೆ ಜಯದ ಮಾಲೆ ಧರಿಸಿದರು. ಈ ಸಂದರ್ಭ 13 ದಿನದ ವಾಜಪೇಯಿ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿರಾಗಿ ಪ್ರಮಾಣ ವಚನ ಸ್ವೀಕಾರದ ಅವಕಾಶವೂ ಲಭಿಸಿತ್ತು. 1998 ರಲ್ಲಿ ಮತ್ತೆ ಎರಡೇ ವರ್ಷಕ್ಕೆ ಲೋಕಸಭಾ ಚುನಾವಣೆ ಈ ಬಾರಿ ಕಾಂಗ್ರೆಸ್​ನಿಂದ ಮತ್ತೆ ಪ್ರಬಲವಾಗಿ ಜನಾರ್ದನ ಪೂಜಾರಿಯವರು ಸ್ಪರ್ಧೆ ನೀಡಿದ್ದರೂ, ವಾಜಪೇಯಿ ಯವರ ಅಲೆಯಿಂದ ಧನಂಜಯ ಕುಮಾರ್ ಹ್ಯಾಟ್ರಿಕ್ ಜಯ ಸಾಧಿಸಿದ್ದರು.

1998ರಿಂದ ಹದಿಮೂರು ತಿಂಗಳ ಕಾಲ ಆಡಳಿತ ನಡೆಸಿದ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ ವಿಶ್ವಾಸ ಮತ ಯಾಚಿಸಿ ಕೇವಲ ಒಂದು ಮತದಿಂದ ಸೋಲು ಕಂಡಿತು‌. ಇದರಿಂದ 1999ರಲ್ಲಿ ಮತ್ತೆ ಲೋಕಸಭಾ ಚುನಾವಣೆ ನಡೆಯಿತು. ಕಾಂಗ್ರೆಸ್​ನಿಂದ ಪೂಜಾರಿ ಟಿಕೆಟ್ ವಂಚಿತರಾಗಿ ವೀರಪ್ಪ ಮೊಯ್ಲಿ ಸ್ಪರ್ಧಿಯಾದರು. ಆದರೆ ಕೇವಲ 8,469 ಮತಗಳ ಅಂತರದಲ್ಲಿ ಮೊಯ್ಲಿ ಸೋಲು ಅನುಭವಿಸಿ ಧನಂಜಯ ಕುಮಾರ್ 4 ನೇ ಬಾರಿ ಸಂಸದರಾದರು. ಈ ಸಂದರ್ಭ ರಾಜ್ಯ ಹಣಕಾಸು ಸಚಿವರಾಗಿ, ಜವಳಿ ಖಾತೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

undefined

ನಾಲ್ಕು ಬಾರಿ ಸಂಸದರಾದ ಧನಂಜಯ ಕುಮಾರ್ ಅವರನ್ನು ಬದಲಾಯಿಸಿ ಡಿ.ವಿ.ಸದಾನಂದ ಗೌಡರನ್ನು‌ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.

ಉತ್ತಮ ವಾಗ್ಮಿಯಾಗಿದ್ದ ಧನಂಜಯ ಕುಮಾರ್ ಮಂಗಳೂರಿಗೆ ವಾಜಪೇಯಿ, ಅಡ್ವಾಣಿ ಮುಂತಾದ ನಾಯಕರು ಬಂದಾಗ ಅವರ ಭಾಷಣಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಜನರಿಗೆ ಅರ್ಥವಾಗಿಸುತ್ತಿದ್ದರು. ಅಲ್ಲದೆ ರಾಜ್ಯದಲ್ಲಿ‌ ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭ ದೆಹಲಿಯ ವಿಶೇಷ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸಿದ್ದರು.

2013ರಲ್ಲಿ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಪಕ್ಷ ಸ್ಥಾಪನೆ ಮಾಡಿದಾಗ ಧನಂಜಯ ಕುಮಾರ್ ಅವರೂ ಪಕ್ಷಾಂತರ ಮಾಡಿ ಕೆಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. ಬಳಿಕ‌ ಜೆಡಿಎಸ್​ಗೆ ಸೇರ್ಪಡೆಯಾಗಿ 2014 ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿ ಸೋಲು ಅನುಭವಿಸಿದ್ದರು. 2017 ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಈ ಸಂದರ್ಭ ಅವರು ರಾಜಕೀಯ ಜೀವನದ ಅವಸಾನದ ಅಂಚಿನಲ್ಲಿದ್ದರು. ಬಳಿಕ‌ ರಾಜಕೀಯ ಜೀವನದಿಂದ ಅವರು ದೂರ ಉಳಿದರು.

Intro:Special Story

ಮಂಗಳೂರು: ಮಂಗಳೂರು ಲೋಕಸಭಾಕ್ಷೇತ್ರದಿಂದ ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆಯಾದ ವಿ.ಧನಂಜಯ ಕುಮಾರ್ ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ವಿಶೇಷ ವರದಿ ಇಲ್ಲಿದೆ.

ಕಾರ್ಕಳ ವೇಣೂರಿನ ಜೈನ ಕುಟುಂಬದಲ್ಲಿ 1951 ಜೂನ್ 4 ರಂದು ಜನಿಸಿದ ಧನಂಜಯ ಕುಮಾರ್, ಉಡುಪಿಯ ವೈಕುಂಠ ಬಾಳಿಗಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಮಂಗಳೂರಿನಲ್ಲಿ‌ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿದ ಅವರು, ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ, ಯುವ ಮೋರ್ಚಾದ ರಾಜ್ಯಾಧ್ಯಕ್ಷ, ಅಖಿಲ ಭಾರತ ಉಪಾಧ್ಯಕ್ಷ ಸಹಿತ ಹಲವು ಹುದ್ದೆಗಳನ್ನು ನಿರ್ವಹಿಸಿದ್ದರು.

1983ರಲ್ಲಿ‌ ಮಂಗಳೂರು ಕ್ಷೇತ್ರವನ್ನು ಪ್ರತಿನಿಧಿಸಿ ಕಾಂಗ್ರೆಸ್ ನ ಪಿ.ಎಫ್.ರೋಡ್ರಿಗಸ್ ರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾದರು. 1985ರ ಚುನಾವಣೆಯಲ್ಲಿ ಪರಾಭವಗೊಂಡರು. 1989 ರ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದರು.

Body:1991 ರಲ್ಲಿ ಮತ್ತೆ ಬಿಜೆಪಿಯಿಂದ ಕಣಕ್ಕಿಳಿದ ಧನಂಜಯ ಕುಮಾರ್ ನಾಲ್ಕು ಬಾರಿ ಮಂಗಳೂರಿನಲ್ಲಿ ಗೆದ್ದ ಜನಾರ್ದನ ಪೂಜಾರಿಯವರನ್ನು 35 ಸಾವಿರ ಮತಗಳ ಅಂತರದಿಂದ ಪರಾಭವ ಗೊಳಿಸುವ ಮೂಲಕ ಜಯಭೇರಿ ಭಾರಿಸಿದ್ದರು. ಚುನಾವಣಾ ಪ್ರಚಾರದ ಸಂದರ್ಭವೇ ಆಗಿನ ರಾಜೀವ್ ಗಾಂಧಿಯವರ ಹತ್ಯೆ ನಡೆದು ಅನುಕಂಪದ ಅಲೆ ಕಾಂಗ್ರೆಸ್ ಪರ ಇದ್ದರೂ, ಫಲಿತಾಂಶ ಘೋಷಣೆಯಾದಾಗ ಎಲ್ಲಾ ರಾಜಕೀಯ ಲೆಕ್ಕಾಚಾರ ವನ್ನು ತಲೆಕೆಳಗಾಗಿಸಿ ಧನಂಜಯ ಕುಮಾರ್ ಪ್ರಥಮ ಬಾರಿಗೆ ಲೋಕಸಭೆ ಪ್ರವೇಶಿಸುವಂತಾಯಿತು.

1996 ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಧನಂಜಯ ಕುಮಾರ್ ಹಾಗೂ ಜನಾರ್ದನ ಪೂಜಾರಿ ಮುಖಾಮುಖಿ. ಜನತಾದಳದಿಂದ ಕೊಡಗಿನ ಪ್ರಭಾವಿ ನಾಯಕ ಜೀವಿಜಯ‌ ಅಭ್ಯರ್ಥಿ. ಉಳಿದಂತೆ 9 ಮಂದಿ ಪಕ್ಷೇತರ ಅಭ್ಯರ್ಥಿಗಳು. ಆದರೆ ಧನಂಜಯ ಕುಮಾರ್ ರಿಗೆ ಸತತ ಎರಡನೇ ಬಾರಿಗೆ ಜಯ. ಈ ಸಂದರ್ಭ 13 ದಿನದ ವಾಜಪೇಯಿ ಸರಕಾರದಲ್ಲಿ ಕ್ಯಾಬಿನೆಟ್ ಸಚಿರಾಗಿ ಪ್ರಮಾಣ ವಚನ ಸ್ವೀಕಾರದ ಅವಕಾಶವೂ ಲಭಿಸಿತ್ತು. 1998 ರಲ್ಲಿ ಮತ್ತೆ ಎರಡೇ ವರ್ಷಕ್ಕೆ ಲೋಕಸಭಾ ಚುನಾವಣೆ ಈ ಬಾರಿ ಕಾಂಗ್ರೆಸ್ ನಿಂದ ಮತ್ತೆ ಪ್ರಬಲವಾಗಿ ಜನಾರ್ದನ ಪೂಜಾರಿಯವರು ಸ್ಪರ್ಧೆ ನೀಡಿದ್ದರೂ, ವಾಜಪೇಯಿ ಯವರ ಅಲೆಯಿಂದ ಧನಂಜಯ ಕುಮಾರ್ ಹ್ಯಾಟ್ರಿಕ್ ಜಯ ಸಾಧಿಸಿದ್ದರು.

1998ರಿಂದ ಹದಿಮೂರು ತಿಂಗಳ ಕಾಲ ಆಡಳಿತ ನಡೆಸಿದ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ ವಿಶ್ವಾಸ ಮತ ಯಾಚಿಸಿ ಕೇವಲ ಒಂದು ಮತದಿಂದ ಸೋಲು ಕಂಡಿತು‌. ಇದರಿಂದ 1999 ರಲ್ಲಿ ಮತ್ತೆ ಲೋಕಸಭಾ ಚುನಾವಣೆ. ಈ ಬಾರಿ ಕಾಂಗ್ರೆಸ್ ನಿಂದ ಪೂಜಾರಿ ಟಿಕೆಟ್ ವಂಚಿತರಾಗಿ ವೀರಪ್ಪ ಮೊಯ್ಲಿ ಸ್ಪರ್ಧಿಯಾದರು. ಆದರೆ ಕೇವಲ 8,469 ಮತಗಳ ಅಂತರದಲ್ಲಿ ಮೊಯ್ಲಿ ಸೋಲು ಅನುಭವಿಸಿ, ಧನಂಜಯ ಕುಮಾರ್ 4 ನೇ ಬಾರಿ ಸಂಸದರಾದರು. ಈ ಸಂದರ್ಭ ರಾಜ್ಯ ಹಣಕಾಸು ಸಚಿವರಾಗಿ, ಜವಳಿ ಖಾತೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

2004 ರಲ್ಲಿ ಮತ್ತೆ ಚುನಾವಣೆ. ಆದರೆ ಬಿಜೆಪಿ ನಾಲ್ಕು ಬಾರಿ ಸಂಸದರಾದ ಧನಂಜಯ ಕುಮಾರ್ ಅವರನ್ನು ಬದಲಾಯಿಸಿ ಡಿ.ವಿ.ಸದಾನಂದ ಗೌಡರನ್ನು‌ ಅಭ್ಯರ್ಥಿಯಾಗಿ ಕಣಕ್ಕಿಳಿಸಿತು.

Conclusion:ಉತ್ತಮ ವಾಗ್ಮಿಯಾಗಿದ್ದ ಧನಂಜಯ ಕುಮಾರ್ ಮಂಗಳೂರಿಗೆ ವಾಜಪೇಯಿ, ಅಡ್ವಾಣಿ ಮುಂತಾದ ನಾಯಕರು ಬಂದಾಗ ಅವರ ಭಾಷಣಗಳನ್ನು ಕನ್ನಡಕ್ಕೆ ಭಾಷಾಂತರಿಸುತ್ತಿದ್ದರು. ಅಲ್ಲದೆ ರಾಜ್ಯದಲ್ಲಿ‌ ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭ ಸರಕಾರದ ದೆಹಲಿಯ ವಿಶೇಷ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸಿದ್ದರು.

2013 ರಲ್ಲಿ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಪಕ್ಷ ಸ್ಥಾಪನೆ ಮಾಡಿದಾಗ, ಧನಂಜಯ ಕುಮಾರ್ ಅವರೂ ಪಕ್ಷಾಂತರ ಮಾಡಿ ಕೆಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. ಬಳಿಕ‌ ಜೆಡಿಎಸ್ ಗೆ ಸೇರ್ಪಡೆಯಾಗಿ 2014 ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿ ಸೋಲು ಅನುಭವಿಸಿದ್ದರು. 2017 ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಈ ಸಂದರ್ಭ ಅವರು ರಾಜಕೀಯ ಜೀವನದ ಅವಸಾನದ ಅಂಚಿನಲ್ಲಿದ್ದರು. ಬಳಿಕ‌ ರಾಜಕೀಯ ಜೀವನದಿಂದ ಅವರು ದೂರ ಉಳಿದರು.

Reporter_Vishwanath Panjimogaru
ETV Bharat Logo

Copyright © 2024 Ushodaya Enterprises Pvt. Ltd., All Rights Reserved.