ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಕೊರೊನಾ ಲಸಿಕೆಗಳು ಸಂಪೂರ್ಣ ಖಾಲಿಯಾಗಿದ್ದು, ಹೊಸ ಲಸಿಕೆಗಾಗಿ ನಿರೀಕ್ಷಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಸಂಪೂರ್ಣ ಖಾಲಿಯಾಗಿದ್ದು, ಲಸಿಕೆ ನೀಡುವ ಪ್ರಕ್ರಿಯೆ ನಿಲ್ಲಿಸಲಾಗಿದೆ. ಎರಡು ದಿನಗಳ ಹಿಂದೆ 7 ಸಾವಿರ ಡೋಸ್ ಲಸಿಕೆ ಬಂದಿತ್ತು. ನಿನ್ನೆಗೆ 6,500 ಡೋಸ್ ಖಾಲಿಯಾಗಿದ್ದು, ಉಳಿದ 500 ಡೋಸ್ ಇಂದು ಖಾಲಿಯಾಗಿದೆ ಎಂದು ದ.ಕ ಜಿಲ್ಲಾ ಆರೋಗ್ಯ ಇಲಾಖೆಯ ಲಸಿಕೆ ಉಸ್ತುವಾರಿ ಡಾ. ರಾಜೇಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ 40 ಸಾವಿರ ಡೋಸ್ ಕೋವ್ಯಾಕ್ಷಿನ್ ಲಸಿಕೆ ನೀಡಲಾಗಿದ್ದು, ಎರಡನೇ ಡೋಸ್ಗೆ ಹಲವು ಮಂದಿ ನಿರೀಕ್ಷಿಸುತ್ತಿದ್ದಾರೆ. ಇದರಲ್ಲಿ ಈಗಾಗಲೇ ಮೊದಲ ಲಸಿಕೆ ನೀಡಿ 42 ದಿನಗಳಾಗಿರುವವರಿಗೆ ಆದ್ಯತೆ ಮೇಲೆ ಲಸಿಕೆ ಬಂದ ಬಳಿಕ ನೀಡಲಾಗುವುದು. ಎರಡು ಲಸಿಕೆಗಳು ಮುಗಿದಿರುವುದರಿಂದ ರಾಜ್ಯದಿಂದ ಬರುವ ಹೊಸ ಲಸಿಕೆಗಾಗಿ ನಿರೀಕ್ಷಿಸಲಾಗುತ್ತಿದೆ ಎಂದರು.
ಓದಿ: ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಮಾರಾಟ: ಬೆಂಗಳೂರಿನಲ್ಲಿ 6 ಮಂದಿ ಬಂಧನ